ಚಿತ್ರದುರ್ಗ. ಜ.04: ರಾಜ್ಯ ಸರ್ಕಾರ ಬಜೆಟ್‍ನಲ್ಲಿ ಪ್ರಸ್ತಾಪಿಸಿದಂತೆ, 2024-25ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ ತೋಟಗಾರಿಕೆ ಇಲಾಖೆ ಆವರಣದಲ್ಲಿ “ಮೈಸೂರು ಕಿಸಾನ್ ಮಾಲ್” ಸ್ಥಾಪಿಸಲು ಅರ್ಹ ರೈತ ಉತ್ಪಾದಕರ ಸಂಸ್ಥೆಯಿಂದ ಆಸಕ್ತಿ ಅಭಿವ್ಯಕ್ತಪಡಿಸುವಿಕೆಯನ್ನು ಆಹ್ವಾನಿಸಲಾಗಿದ್ದು, ಜನವರಿ 13 ಅರ್ಜಿ ಸಲ್ಲಿಕೆಗೆ ಕೊನೆಯ ದಿನ.
ಕರ್ನಾಟಕ ಪಬ್ಲಿಕ್ ಪ್ರೊಕ್ಯುರ್‍ಮೆಂಟ್ ಪೋರ್ಟ್‍ಲ್‍ನಲ್ಲಿ ಆಸಕ್ತ ರೈತರ ಉತ್ಪಾದಕ ಸಂಸ್ಥೆಯವರು ಇದೇ ಜ.13 ರೊಳಗಾಗಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9449103240 ಗೆ ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.