ನವದೆಹಲಿ: ರಾಷ್ಟ್ರ ಧ್ವಜದ ಬದಲಿಗೆ ಕೇಸರಿ ಧ್ವಜವನ್ನು ಹಾರಿಸಬಹುದು ಎಂಬ ಸಚಿವ ಈಶ್ವರಪ್ಪ ಅವರ ಮಾತಿಗೆ ಕಾಂಗ್ರೆಸ್ ಸದನದಲ್ಲಿ ಪ್ರತಿಭಟನೆ ಮಾಡುತ್ತಿದೆ. ಸಚಿವ ಸ್ಥಾನದಿಂದ ಈಶ್ವರಪ್ಪ ಅವರನ್ನ ವಜಾ ಮಾಡಲೇಬೇಕೆಂದು ಪಟ್ಟು ಹಿಡಿದು ಕುಳಿತಿದೆ. ಇದು ಬರೀ ರಾಜ್ಯದಲ್ಲಷ್ಟೇ ಅಲ್ಲ, ಹೈಕಮಾಂಡ್ ಲೆವೆಲ್ ಗೂ ಪ್ರಶ್ನೆಗಳು ಎದುರಾಗುತ್ತಿವೆ.
ಸಂದರ್ಶನವೊಂದರಲ್ಲಿ ಜೆ ಪಿ ನಡ್ಡಾ ಅವರಿಗೂ ಈಶ್ವರಪ್ಪ ಅವರಿಗೆ ಸಂಬಂಧಿಸಿದ ಪ್ರಶ್ನೆಯನ್ನ ಕೇಳಲಾಗಿತ್ತು. ಅರೆ ಕ್ಷಣ ಕಸಿವಿಸಿಯಾದರೂ ಮತ್ತೆ ಸಾವರಿಸಿಕೊಂಡು ಖಡಕ್ ಆಗಿ ಉತ್ತರ ಕೊಟ್ಟರು. ಆದರೂ ಈಶ್ವರಪ್ಪ ಕೊಟ್ಟ ವಿವಾದಾತ್ಮಕ ಹೇಳಿಕೆ ಹೈಕಮಾಂಡ್ ಅವರನ್ನು ಮುಜುಗರಕ್ಕೀಡು ಮಾಡಿದೆ. ಇದೇ ಕಾರಣಕ್ಕೆ ಹೈಕಮಾಂಡ್ ಬುದ್ದಿ ಹೇಳಿದೆ ಎನ್ನಲಾಗಿದೆ.
ನಾವೂ ಕಾನೂನು ಮತ್ತು ಸುವ್ಯವಸ್ಥೆ ಪಾಲಿಸುವವರು. ಇಂತಹ ಹೇಳಿಕೆಗಳನ್ನ ಕೊಡಬಾರದು. ನಾವೂ ರಾಷ್ಟ್ರೀಯವಾದಿಗಳು ನಮ್ಮಲ್ಲಿ ತಪ್ಪಾದ ಮತ್ತು ಬೇಜವಬ್ದಾರಿ ಹೇಳಿಕೆಗಳನ್ನ ಒಪ್ಪಲು ಆಗಲ್ಲ. ಕೆಲವೊಮ್ಮೆ ಹೀಗೆ ಆಗುತ್ತೆ. ಕರೆ ಮಾಡಿ ಕೇಳಿದೆ. ಅವರು ಹಾಗಾಯ್ತು ಹೀಗಾಯ್ತು ಎಂದಿದ್ದಾರೆ. ಅವರು ನಮ್ಮ ಪಕ್ಷದ ಹಿರಿಯರು. ಹೀಗಾಗಿ ಕಠಿಣ ಪದಗಳನ್ನ ಬಳಸಿಲ್ಲ. ಬುದ್ದಿ ಹೇಳಲಾಗಿದೆ ಎಂದಿದ್ದಾರೆ.