ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ನಾಯಕರ ಸ್ಟ್ರಾಂಗ್ ಅಸ್ತ್ರವೇ ಸಿಕ್ಕಿದೆ. ಗುತ್ತುಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡು ಸಚಿವ ಈಶ್ವರಪ್ಪ ಅವರನ್ನು ಗುರಿ ಮಾಡಿ ಹೋಗಿದ್ದಾರೆ. ಇತ್ತ ಈಶ್ವರಪ್ಪ ಎಫ್ಐಅರ್ ದಾಖಲಾದರೂ ಯಾವುದೇ ಕಾರಣಕ್ಕೂ ಸಚಿವ ಸ್ಥಾನ ಬಿಟ್ಟುಕೊಡಲ್ಲ ಎಂಬ ಪಟ್ಟು ಹಿಡಿದಿದ್ದರೆ, ಅತ್ತ ಕಾಂಗ್ರೆಸ್ ಕಲಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರೆ ಉತ್ತಮ, ಇಲ್ಲ ಹೋರಾಟ ಮಾಡಿ ರಾಜೀನಾಮೆ ನೀಡುವಂತೆ ಮಾಡಲು ಪಟ್ಟು ಹಿಡಿದಿದ್ದಾರೆ.
ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ಈಗಾಗಲೇ ಈ ಸಂಬಂಧ ರಾಜ್ಯಪಾಲರಿಗೂ ದೂರು ನೀಡಿದ್ದಾರೆ. ರಾಜೀನಾಮೆ ಕೊಡಲ್ಲ ಎಂಬ ಈಶ್ವರಪ್ಪ ಹಟಡ ಹೆಚ್ಚಾದಷ್ಟು ಕಾಂಗ್ರೆಸ್ ನಾಯಕರ ಹೋರಾಟ ತೀವ್ರತೆ ಪಡೆದುಕೊಳ್ಳುತ್ತಿದೆ. ಇನ್ನು ಒಂದು ಹೆಜ್ಜೆ ಮುಂದಕ್ಕೆ ತೀರ್ಮಾನ ಮಾಡಿರುವ ಕೈ ನಾಯಕರು ಜನತಾ ನ್ಯಾಯಾಲಯಕ್ಕೂ ಈ ವಿಚಾರ ಕೊಡಂಒಯ್ಯುವ ನಿರ್ಧಾರ ಮಾಡಿದ್ದಾರೆ.
ರಾಜ್ಯಾದ್ಯಂತ ಪ್ರತಿಭಟನೆ ಹೆಚ್ಚಿಸಲು ಎಂಟು ದಿಕ್ಕುಗಳಲ್ಲೂ ಎಲ್ಲಾ ತಯಾರಿ ನಡೆಸಿಕೊಂಡಿದ್ದಾರೆ. ಸಂತೋಷ್ ಆತ್ಮಹತ್ಯೆ ಕೈ ನಾಯಕರಿಗೆ ಅಸ್ತ್ರವಾಗಿದೆ. ಇನ್ನು ಈಗಾಗಲೇ ಕಾಂಗ್ರೆಸ್ ನಾಯಕರು ಸಂತೋಷ್ ಮನೆಗೆ ಭೇಟಿ ನೀಡಿ, ಪತ್ನಿಗೆ ಸಾಂತ್ವನ ಹೇಳಿ ಬಂದಿದ್ದಾರೆ. ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಹಲವು ಸಂತೋಷ್ ಮನೆಗೆ ಭೇಟಿ ನೀಡಿದ್ದಾರೆ.