ರಾಮನಗರ: ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಸಂತೋಷ್ ಆರೋಪ ಮಾಡಿದ್ದರಲ್ಲಿ ಲಘುವಾಗಿ ತೆಗೆದುಕೊಳ್ಳುವುದಕ್ಕೆ ಹೋಗಲ್ಲ. ಅವರು ಮಾಡಿರೋ ಆರೋಪದ ಬಗ್ಗೆ ಬೀದಿ ಬೀದಿಯಲ್ಲಿ ಚರ್ಚೆ ನಡೆಯುತ್ತಿದೆ. ಈಗಿನ ಒಂದು ವ್ಯವಸ್ಥೆ ಆ ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ. ನನ್ನ ಅಭಿಪ್ರಾಯ ಏನು ಅಂದ್ರೆ ಸರ್ಕಾರ ಇವತ್ತು ಇದನ್ನು ಸರಿಪಡಿಸಿಕೊಳ್ಳಬೇಕಾಗಿದೆ. ಎಂಎಲ್ಎಗಳಿಂದ, ಮಂತ್ರಿಗಳಿಂದಲೂ ಕೇಳುತ್ತಾರೆ ಅನ್ನೋ ಆರೋಪ ಇದೆ. ಅದು ನಡೆಯುತ್ತಿದೆ ಕೂಡ. ಹೇಗೆ ಸರಿಪಡಿಸಬೇಕಾಗಿದೆ.
ಅವರು ಮೊದಲು ರಾಜೀನಾಮೆ ಕೊಡುವಂತದ್ದು ಸೂಕ್ತ. ಇದರಲ್ಲಿ ಹಲವಾರು ರೀತಿಯ ಸಂಶಯಗಳಿದ್ದಾವೆ. ಈ ಸಾವಿನ ಹಿಂದೆ ಹಲವಾರು ರೀತಿಯ ಪ್ರೇರೇಪಣೆ, ಸಂಶಯಗಳು ಕಂಡು ಬಂದಿದೆ. ಆ ಸತ್ಯಾಂಶವನ್ನು ಹೊರ ತರಬೇಕಾದದ್ದು ಸರ್ಕಾರದ ಜವಬ್ದಾರಿಯಾಗಿದೆ. ಇದರಲ್ಲಿ ಬಹಳ ಕಾಣದ ಕೈಗಳ ಚಿತಾವಣೆ ಇರುವಂತದ್ದು ಮೇಲ್ನೋಟಕ್ಕೆ ಕಾಣುತ್ತಿದೆ. ಅದರ ಜೊತೆಗೆ ಆ ವ್ಯಕ್ತಿ ನಾಲ್ಕು ಕೋಟಿ ಕೆಲಸವನ್ನು ವಿತೌಟ್ ವರ್ಕ್ ಆರ್ಡರ್ ಮಾಡುವುದಕ್ಕೆ ಯಾರು ಪರ್ಮಿಷನ್ ಕೊಟ್ಟಿದ್ದು.?
ಯಾವ ಇಂಜಿನಿಯರ್ ಆಗಲು, ಸರ್ಕಾರದ ಸಂಸ್ಥೆಗಳಾಗಲಿ ಅವರ ಗಮನಕ್ಕೆ ಬಾರದೆ ಇರುವ ಕೆಲಸಕ್ಕೆ ಪೇಮೆಂಟ್ ಕೊಡಬೇಕು ಅಂದರೆ ಇದು ಟೆಕ್ನಿಕಲೀ ಸಮಸ್ಯೆ ಇದೆ. ಆದರೆ ಈ ಮಧ್ಯೆದಲ್ಲಿ ಪರ್ಸಂಟೇಜ್ ಬಗ್ಗೆಯೆಲ್ಲಾ ಚರ್ಚೆ ನಡೆಯುತ್ತಿದೆ, ಇದೆಲ್ಲದರ ಬಗ್ಗೆಯೂ ಸಮಗ್ರವಾಗಿ ತನಿಖೆಯಾಗಬೇಕು.
ಇನ್ನು ಅವರ ಜೊತೆಯಲ್ಲಿ ಇಬ್ಬರು ಸ್ನೇಹಿತರು ಹೋಗಿದ್ದಾರೆ. ಸ್ನೇಹಿತರು ಜೊತೆಯಲ್ಲಿ ಹೋದವರು ಇವನ್ನೊಬ್ಬನನ್ನು ಒಂದು ರೂಮಿನಲ್ಲಿಟ್ಟು, ಅವರು ಇಬ್ಬರು ಒಂದು ರೂಮಿಗೆ ಹೋಗಿದ್ದು ಯಾಕೆ..? ಈ ರೀತಿ ಹಲವಾರು ರೀತಿಯ ಸಂಶಗಳು ಇವೆ. ಉಡುಪಿಗೆ ಯಾಕೆ ಹೋದರು..? ವಾಸ್ತವಾಂಶ ಏನಿದೆ ಅದನ್ನು ಜನತೆ ಮುಂದೆ ಇಡಲು ಸರ್ಕಾರ ಈ ಬಗ್ಗೆ ಅತ್ಯಂತ ಸಮರ್ಪಕವಾದಂತ ತನಿಖೆ ನಡೆಸಿ, ಇದರ ಸತ್ಯಾಸತ್ಯತೆಯನ್ನು ಜನೆಯೆ ಮುಂದೆ ಇಡಬೇಕು ಎಂದಿದ್ದಾರೆ.