ಮಡಿಕೇರಿ : ಎಲ್ಲೆಡೆ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ರೈತರ ಬೆಳೆ ನೆಲ ಕಚ್ಚಿದೆ. ಇಂಥ ಸಮಯದಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುವುದನ್ನ ಬಿಟ್ಟು ಜನಸ್ವರಾಜ್ ಅಂತ ನಾಟಕ ಪ್ರದರ್ಶನ ಮಾಡಿಕೊಂಡು ಕುಳಿತಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪ ಮಾಡಿವೆ. ಈ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಕೆ ಎಸ್ ಈಶ್ವರಪ್ಪ, ಬಿಜೆಪಿಯವರೇನು ಮಳೆ ನಿಲ್ಲಿಸಲು ಆಗುತ್ತದೆಯೇ ಎಂದಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಈಶ್ವರಪ್ಪ, ಇದಕ್ಕೆ ಬಿಜೆಪಿಯವರು ಬರುತ್ತಾರಾ..? ಮಳೆಯನ್ನ ಬಿಜೆಪಿಯವರು ನಿಲ್ಲಿಸಲು ಆಗುತ್ತಾ..? ಇದರಲ್ಲಿ ರಾಜಕೀಯ ತರಲು ಆಗುತ್ತಾ..? ಎಂದು ಪ್ರಶ್ನಿಸಿದ್ದಾರೆ. ಕೊಡಗಿನಲ್ಲಿ 45 ವರ್ಷಗಳಲ್ಲಿ ಬಂದಿರದ ಮಳೆ ಈಗ ಬರ್ತಿದೆ. ಸಿಎಂ ಅವರು ಇವತ್ತು ಮಡಿಕೇರಿಗೆ ಬರಬೇಕಿತ್ತು.ಬಮಳೆಹಾನಿ ಸಮೀಕ್ಷೆ ನಡೆಸಲು ಹೋಗಿದ್ದಾರೆ.
ಕಾಂಗ್ರೆಸ್ ನವರು ಸುಮ್ಮನೆ ಟೀಕೆ ಮಾಡ್ತಾರೆ. ಎಲ್ಲಾ ಜಿಲ್ಲಾಧಿಕಾರಿಗಳ ಬಳಿ ಹಣವಿದೆ. ನಮ್ಮ ಸಚಿವರು ಶಾಸಕರು ಕೂಡ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಸರ್ಕಾರ ಈಗಾಗಲೇ ಎಲ್ಲಾ ಕೆಲಸವನ್ನು ಮಾಡ್ತಿದೆ ಎಂದಿದ್ದಾರೆ.