ಶಿವಮೊಗ್ಗ: ಆರ್ ಎಸ್ ಎಸ್ ಈ ದೇಶದವರೇ ಅಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಾಜಿ ಸಚಿವ ಈಶ್ಚರಪ್ಪ ತಿರುಗೇಟು ನೀಡಿದ್ದಾರೆ. ಜಿಲ್ಲೆಯಲ್ಲಿ ಮಾತನಾಡಿದ ಅವರು, ಇವತ್ತು ಸಾಗರದ ಯಾವುದೋ ಒಂದು ದೇವಸ್ಥಾನದ ಇದ್ದು, ಅಲ್ಲಿ ಮಸೀದಿ ಕಟ್ಟಿದ್ದರೆ, 36 ಸಾವಿರ ದೇವಸ್ಥಾನಗಳನ್ನು ಹೊಡೆದು ಮಸೀದಿ ಕಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ. ಮೊಘಲರು ಈ ದೇಶ ಧ್ವಂಸ ಮಾಡಿದ್ದಾರೆ ಎಂಬುದು ಇತಿಹಾಸದಲ್ಲಿ ಇದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ನಾನು ತುಂಬಾ ಸ್ಪಷ್ಟವಾಗಿ ಹೇಳ್ತೀನಿ ಈ ದೇಶದಲ್ಲಿ ಹುಟ್ಟಿರುವ ಸಿದ್ದರಾಮಯ್ಯನವರು, ನೀವೂ ಇದೇ ದೇಶದವರಾಗಿದ್ದರೆ, ಆ ಎಲ್ಲಾ ಹಿಂದೂ ದೇವಸ್ಥಾನಗಳನ್ನು ಹೊಡೆದಾಕಿದ್ರಲ್ಲ ಔರಂಗಜೇಬು ಸಂತತಿಯವರು, ನೀನು ಔರಂಗ ಜೇಬಿನ ಸಂತತಿಯೋ ಎಂಬುದೋ ಇಂದು ಬಹಿರಂಗವಾಗಬೇಕು. ನೀನು ಸೋನಿಯಾಗಾಂಧಿ ಸಂತತಿ ಎಂಬುದನ್ನು ತೋರಿಸುತ್ತಾ ಇದ್ದೀರಿ. ನಾನು ಹೆಮ್ಮೆಯಿಂದ ಹೇಳಿಕೊಳ್ತೇನೆ, ನಾನು ಅಹಲ್ಯಾ ಬಾಯ್ ಅವ್ರ ವಂಶಸ್ಥ ಎಂಬುದನ್ನು. ನಿಮ್ಗೆ ಅಧಿಕಾರ ದಾಹದಿಂದ ನೀವೂ ಹೇಳಿಕೊಳ್ಳಲ್ಲ. ನಂಗೆ ಕುರುಬರ ಜಾತಿಯಲ್ಲಿ ಹುಟ್ಟಿದ್ದು ಹೆಮ್ಮೆ ಇದೆ. ಸಿದ್ದರಾಮಯ್ಯನವರು ಆಕಸ್ಮಿಕವಾಗಿ ಆ ಜಾತಿಯಲ್ಲಿ ಹುಟ್ಟಿದ್ದಾರೆ.
ಅಯೋಧ್ಯೆ ವಿಚಾರಕ್ಕೆ ಈಗ ಇಡೀ ದೇಶ ಮೆಚ್ಚುತ್ತಾ ಇದೆಯಲ್ಲ. ಪವಿತ್ರವಾದ ಸ್ಥಳ. ಕೋರ್ಟ್ ತೀರ್ಮಾನದ ಪ್ರಕಾರ ನಾವಲ್ಲಿ ರಾಮ ಮಂದಿರ ಕಟ್ಟುತ್ತಾ ಇದ್ದೇವೆ. ಜ್ಞಾನವಾಪಿನಲ್ಲಿ ಶಿವಲಿಂಗ ಪತ್ತೆಯಾದ ಜಾಗದಲ್ಲಿ ನೀರು ತುಂಬಿಸಿದ್ದಾರೆ. ಆ ನೀರನ್ನ ಕಾಲು ತೊಳೆಯುವುದಕ್ಕೆ ಬಳಸುತ್ತಾರೆ. ಕೋರ್ಟ್ ಹೇಳಿದೆ ಆ ನೀರನ್ನು ಬಳಸಬಾರದು ಅಂತ. ಕಾಂಗ್ರೆಸ್ಸಿಗರಿಗೆ ಕೋರ್ಟ್ ಗೂ ಬೆಲೆ ಇಲ್ಲ, ಸಂವಿಧಾನಕ್ಕೂ ಬೆಲೆ ಇಲ್ಲ. ಇಂಥವರು ಆರ್ ಎಸ್ ಎಸ್ ಬಗ್ಗೆ ಪ್ರಸ್ತಾಪ ಮಾಡಿದ್ದಾರಲ್ಲ ಇದನ್ನು ಉಗ್ರವಾಗಿ ಖಂಡಿಸುತ್ತೇನೆ. ಕ್ಷಮೆ ಕೇಳಲೇಬೇಕೆಂದು ಒತ್ತಾಯಿಸುತ್ತೇನೆ ಎಂದಿದ್ದಾರೆ.