ಈಶ್ವರಪ್ಪ ಅವರಿಗೆ ಬಂತು ಮೋದಿ ಕರೆ : ಟಿಕೆಟ್ ಸಿಗದೆ ಇದ್ದರು ಅಭ್ಯರ್ಥಿಗೆ ಬೆಂಬಲ ಕೊಡ್ತಾರಾ..?

suddionenews
1 Min Read

 

 

ಶಿವಮೊಗ್ಗ: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಹಿರಿ ತಲೆಗೆ ರೆಸ್ಟ್ ನೀಡಿ, ಯುವಕರನ್ನು ಅಖಾಡಕ್ಕೆ ಇಳಿಸಿದೆ. ಶಿವಮೊಗ್ಗದಲ್ಲಿ ತಮಗೋ ಅಥವಾ ಕುಟುಂಬಕ್ಕೋ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆ ಎಸ್ ಈಶ್ವರಪ್ಪ ಅವರಿಗೆ ಬಿಗ್ ಶಾಕ್ ಆಗಿದೆ. ಟಿಕೆಟ್ ಸಿಗದೆ ನಿರಾಸೆಯಾಗಿದ್ದಾರೆ. ಬೇರಯವರಂತೆ ಈಶ್ವರಪ್ಪ ಅವರು ಕೂಡ ಬಂಡಾಯವೇಳಬಹುದು ಎಂಬ ಕುತೂಹಲಕ್ಕೂ ತೆರೆ ಬಿದ್ದಿದೆ.

ಈಶ್ವರಪ್ಪ ಅವರು ಅಭ್ಯರ್ಥಿ ಪರ ಕೆಲಸ ಮಾಡಲು ಮುಂದಾಗಿದ್ದಾರೆ. ಇದೆ ವೇಳೆ ಈಶ್ವರಪ್ಪ ಅವರಿಗೆ ಖುದ್ದು ಪ್ರಧಾನಿ‌ ಮೋದಿಯೇ ಕರೆ ಮಾಡಿ ಮಾತನಾಡಿದ್ದಾರೆ. ಅದಕ್ಕೆ ಈಶ್ವರಪ್ಪ ಅವರು ಕೂಡ, ನನ್ನಂತ ಸಾಮಾನ್ಯ ಕಾರ್ಯಕರ್ತನಿಗೆ ನೀವೂ ಕರೆ ಮಾಡಿದ್ದು ಖುಷಿಯಾಗಿದೆ. ಅಭ್ಯರ್ಥಿ ಗೆಲ್ಲಿಸಿಕೊಂಡು ಬರುವುದು ನಮ್ಮ ಕರ್ತವ್ಯ ಎಂದಿದ್ದಾರೆ.

ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಸಿಗುವುದೇ ಹೆಚ್ಚು. ಆತನಿಗೆ ಬೆಂಬಲ ನೀಡುತ್ತೇವೆ. ಚನ್ನಬಸಪ್ಪನನ್ನು ಶಿವಮೊಗ್ಗದಲ್ಲಿ ಗೆಲ್ಲಿಸುತ್ತೇವೆ. ನನ್ನ ಮುಖ ನೋಡಿ ವೋಟು ಕೊಟ್ಟಿದ್ದಾರೆ ಎಂಬುದನ್ನು ನಾನು ಒಪ್ಪಲ್ಲ. ಮೊದಲ ಬಾರಿಗೆ ನಾನು ಚುನಾವಣೆಗ ನಿಂತಾಗ ನನ್ನ ಮುಖ ಗೊತ್ತಿರಲಿಲ್ಲ. ಅವತ್ತು ಕಾರ್ಯಕರ್ತರು ಫೋಟೋ ತೋರಿಸಿ, ಈಶ್ವರಪ್ಪರನ್ನು ಗೆಲ್ಲಿಸಿದ್ರು. ಅದರಲ್ಲಿ ಚನ್ನಬಸಪ್ಪ ಕೂಡ ಒಬ್ಬರು. ಹೀಗಾಗಿ ಅವರ ಗೆಲುವಿಗಾಗಿ ಹೋರಾಡುತ್ತೀವಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *