ಬಾಗಲಕೋಟೆ: ಯಾವ ವಿಚಾರಕ್ಕೋಸ್ಕರ ದೇಶಕ್ಕೆ ಸ್ವಾತಂತ್ರ್ಯ ಬಂತೋ, ಆ ಸ್ವಾತಂತ್ರ್ಯ ಬಂದಂತ ಸಂದರ್ಭದಲ್ಲಿ ಏನೇನ್ ಆಗಬೇಕಿತ್ತೋ. ಅದು ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ಈ ದೇಶದಲ್ಲಿ ನಡೆಯುತ್ತಿದೆ. ಸ್ವಾತಂತ್ರ್ಯ ಬಂದಿದ್ದು ಯಾತಕ್ಕೆ ಭಾರತೀಯ ಸಂಸ್ಕೃತಿಯನ್ನು ಉಳಿಸುವುದಕ್ಕೆ. ಮೊಘಲರು ಈ ದೇಶವನ್ನು ಹಾಳು ಮಾಡಿದ್ದರೋ, ದೇವಸ್ಥಾನಗಳನ್ನು ಪುಡಿ ಪುಡಿ ಮಾಡಿದ್ದರೋ ಅದೆಲ್ಲವನ್ನು ಸರಿ ಮಾಡುವುದಕ್ಕೆ 75 ವರ್ಷ ಬೇಕಾಯಿತು. ಇನ್ನು ಪೂರ್ಣ ಆಗಿಲ್ಲ. ಸದ್ಯಕ್ಕೆ ಅಯೋಧ್ಯೆ ಒಂದು ಆಗಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಾಡಿದ್ದಂತ ಸಂವಿಧಾನ ದ ಮುಖಾಂತರವೇ ಕಾನೂನು ಮುಖಾಂತರವೇ ಅಯೋಧ್ಯೆಯೇ ರಾಮಂದಿರ ಆಗ್ತಾ ಇದೆ. ಅದಾದ ನಂತರ ಕಾಶೀ, ಮಥುರ ಈ ದೇಶದಲ್ಲಿರುವಂತ ಮೂವತ್ತಾರು ದೇವಸ್ಥಾನಗಳು ಧ್ವಂಸ ಆಗಿದೆ ಎನ್ನುವಂತ ಅಂಶಗಳು ಈಗ ಬೆಳಕಿಗೆ ಬರುತ್ತಿದೆ. ಮಥುರ ಬಗ್ಗೆ ಕೂಡ ಇಂದು ಕೋರ್ಟ್ ನಲ್ಲಿ ತೀರ್ಮಾನವಾಗಲಿದೆ ಎಂದಿದ್ದಾರೆ.
ಇದೇ ವೇಳೆ ಬಿ ವೈ ರಾಘವೇಂದ್ರ ಅವರಿಗೆ ಟಿಕೆಟ್ ತಪ್ಪಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ ಗರಂ ಆದ ಈಶ್ವರಪ್ಪ ಇದೊಳ್ಳೆ ಚೆನ್ನಾಗಿದೆ. ಯಾಕೆ ಅದೊಂದೆ ಪ್ರಶ್ನೆ ಕೇಳ್ತೀರಿ. ಕೇಂದ್ರದ ನಾಯಕರು ಏನು ತೀರ್ಮಾನ ಮಾಡುತ್ತಾರೆ ಅದಕ್ಕೆ ನಾವೂ ಬದ್ಧ. ಮೈಕ್ ಹಿಡಿತೀವಿ ಅಂತ ವಿಜಯೇಂದ್ರ ವಿಜಯೇಂದ್ರ ಅಂತಿದ್ದರೆ ಎಂದು ಗರಂ ಆಗಿದ್ದಾರೆ.