ಶಿವಮೊಗ್ಗದಲ್ಲಿ ಈಶ್ವರಪ್ಪ ಸಮಾವೇಶ : ಹರಿದು ಬಂತು ಜನಸಾಗರ..!

suddionenews
1 Min Read

ಶಿವಮೊಗ್ಗ: ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆದು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವುದಕ್ಕೆ ಕೆ ಎಸ್ ಈಶ್ವರಪ್ಪ ಎಲ್ಲಾ ರೀತಿಯ ತಯಾರಿಯನ್ನು ಮಾಡಿದ್ದಾರೆ. ಅದರ ಸಲುವಾಗಿಯೇ ಪ್ರಚಾರ ಕಾರ್ಯವನ್ನು ಶುರು ಮಾಡಿದ್ದಾರೆ. ಇಂದು ಶಿವಮೊಗ್ಗದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದು, ಬೂತ್ ಮಟ್ಟದಲ್ಲಿ ದೊಡ್ಡ ಸಮಾವೇಶವನ್ನು ಹಮ್ಮಿಕೊಂಡಿದ್ದಾರೆ. ಈಶ್ವರಪ್ಪ ಕಾರ್ಯಕ್ರಮಕ್ಕೆ ಜನ ಸಾಗರವೇ ಹರಿದು ಬಂದಿದೆ.

 

ಶಿವಮೊಗ್ಗದಲ್ಲಿ ಮಾತನಾಡಿದ ಕೆ ಎಸ್ ಈಶ್ವರಪ್ಪ, ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ಧರ್ಮದ ಪರವಾಗಿಯೇ ಚುನಾವಣೆ ಗೆಲ್ಲುತ್ತೇನೆ. ನಿಮ್ಮ ಒಬ್ಬ ಮಗ ಎಂಪಿ, ಒಬ್ಬ ಮಗ ಎಂಎಲ್ಎ ಅವನೇ ರಾಜ್ಯಾಧ್ಯಕ್ಷ. ಇವರೇ ಬೆಳೆಯಬೇಕು.‌ ಅಪ್ಪಿ ತಪ್ಪಿ ಬಿಜೆಪಿ, ಕಮಲಕ್ಕೆ ಮತ ಹಾಕಿಬಿಟ್ಟಿರಾ. ಚಿಹ್ನೆ ಯಾವುದು ಎಂದು ಏಪ್ರಿಲ್ 19ಕ್ಕೆ ತಿಳಿಯಲಿದೆ ಎಂದು ತಮಗೆ ಮತ ಹಾಕಬೇಕೆಂದು ಜನರಿಗೆ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಯಾರು ಲಿಂಗಾಯತರು ಇಲ್ವಾ..? ಎಲ್ಲಾ ಲಿಂಗಾಯತರು ಹೇಳುತ್ತಿದ್ದಾರೆ ನನಗೆ ಮತ ಹಾಕುತ್ತಾರಂತೆ. ಶಿವಮೊಗ್ಗದಲ್ಲಿ ಕಾಂಗ್ರೆಸ್ ವೀಕ್ ಅಭ್ಯರ್ಥಿಯನ್ನು ಹಾಕಿದ್ದಾರೆ. ನಾಲ್ಕು ಪಟ್ಟು ಹಣ ಖರ್ಚು ಮಾಡಿದರು ವಿಜಯೇಂದ್ರ ಗೆದ್ದಿದ್ದು ಬರೀ ಹತ್ತು ಸಾವಿರದ ಅಂತರದಿಂದ. ಆದರೆ ಈ ಬಾರಿ ಅಪ್ಪ ಮಕ್ಕಳನ್ನು ಸೋಲಿಸುವುದೇ ನನ್ನ ಗುರಿ. ಅಧರ್ಮ ನಾಶವಾಗುತ್ತೆ. ಧರ್ಮದ ಈಶ್ವರಪ್ಪ ಗೆಲ್ಲುತ್ತಾರೆ. ಯಡಿಯೂರಪ್ಪ ಮಕ್ಕಳು ಏನು ಆಟ ಆಡುತ್ತಾರೋ ಆಡಲಿ. ಚುನಾವಣೆಗೆ ಇನ್ನು ಒಂದು ತಿಂಗಳು ಸಮಯವಿದೆ. ಇವತ್ತೆ ಚುನಾವಣೆ ನಡೆದರು ಕೂಡ ಒಂದು ಲಕ್ಷ ಮತದಿಂದ ಗೆಲ್ಲುತ್ತೇನೆ. ಇನ್ನು ಮುಂದೆ ಪ್ರತಿಯೊಂದು ಮನೆಗೂ ಹೋಗಿ ಮತ ಕೇಳುತ್ತೇನೆ. ಜೆಡಿಎಸ್ ನಾಯಕರು ಸಹ ಜೊತೆಗೆ ಬರ್ತಾರೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *