ವರದಿ ಮತ್ತು ಫೋಟೋ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ: ಇಲ್ಲಿನ ಸರ್ಕಾರಿ ಬಸ್‍ನಿಲ್ದಾಣದ ಮುಂಭಾಗದಲ್ಲಿರುವ ಈಶ್ವರ ಆಗ್ರೋ ಫರ್ಟಿಲೈಜರ್ ರಸಗೊಬ್ಬರ ಮಳಿಗೆಯನ್ನು ಪಾರದೀಪ್ ಫಾಸ್‍ಫೇಟ್ ಲಿ. ಕಂಪನಿಯವರು ಪ್ರಧಾನ ಮಂತ್ರಿ ಕೃಷಿ ಸಮೃದ್ದಿ ಕೇಂದ್ರವನ್ನಾಗಿ ಪರಿವರ್ತಿಸಿದ್ದಾರೆ.
ದೇಶಾದ್ಯಂತ ಇಂತಹ ಆರು ನೂರು ಮಳಿಗೆಗಳನ್ನು ಪ್ರಧಾನಿ ಮೋದಿರವರು ಸೋಮವಾರ ಆನ್‍ಲೈನ್ ಮೂಲಕ ಉದ್ಘಾಟಿಸಿ ಒಂದು ದೇಶ ಒಂದು ರಸಗೊಬ್ಬರ ಯೋಜನೆಗೂ ಚಾಲನೆ ನೀಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್‍ಕುಮಾರ್‍ರವರು ಮಳಿಗೆ ಉದ್ಘಾಟಿಸಿ ಮಾತನಾಡುತ್ತ ರೈತರಿಗೆ ಅಗತ್ಯವಿರುವ ಸಮಗ್ರ ಕೃಷಿ ಪರಿಕರಗಳು, ಕೃಷಿ ಮಾಹಿತಿ, ಮಣ್ಣು ಪರೀಕ್ಷೆಗಳನ್ನು ಒಂದೆ ಮಳಿಗೆಯಲ್ಲಿ ದೊರೆಯುವಂತೆ ಮಾಡುವುದು ಪ್ರಧಾನ ಮಂತ್ರಿ ಕೃಷಿ ಸಮೃದ್ದಿ ಕೇಂದ್ರದ ಉದ್ದೇಶವಾಗಿದೆ ಎಂದು ನೆರೆದಿದ್ದ ರೈತರಿಗೆ ಮನವರಿಕೆ ಮಾಡಿದರು.
ಪ್ರಗತಿಪರ ರೈತರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು,
ಸಹಾಯಕ ಕೃಷಿ ನಿರ್ದೇಶಕ ಚಂದ್ರಕುಮಾರ, ಲೋಕೇಶಪ್ಪ, ಈಶ್ವರ ಆಗ್ರೋ ಫರ್ಟಿಲೈಜರ್ ಮಾಲೀಕ ರೇವಣಸಿದ್ದಪ್ಪ, ಪಿ.ಪಿ.ಎಲ್.ಮುಖ್ಯ ವ್ಯವಸ್ಥಾಪಕ ಮಂಜುನಾಥ, ರವಿತೇಜ ಹಾಗೂ ಕೃಷಿ ಪರಿಕರ ಮಾರಾಟಗಾರರು, ರೈತ ಮುಖಂಡರು ಹಾಜರಿದ್ದರು.