ದಾವಣಗೆರೆ, (ಜ.26) : ಪರಿಸರ ಸಂರಕ್ಷಣೆ ಯುವಕರ ಪ್ರಮುಖ ಭಾದ್ಯತೆ ಆಗಬೇಕು. ಇಂದು ನಡೆಯುತ್ತಿರುವ ಎಲ್ಲಾ ಪ್ರಕೃತಿ ವಿಕೋಪಗಳಿಗೆ ಮನುಷ್ಯನ ಚಟುವಟಿಕೆಗಳೇ ಕಾರಣ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದುವರೆಯುತ್ತಿದ್ದೇವೆ ಹೊರತು ಪರಿಸರದ ಕಾಳಜಿ ಇಂದಿನ ಯುವಕರಲ್ಲಿಲ್ಲ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ವರದಿಗಾರರು ಹಾಗೂ ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಎಸ್. ಎ. ಗಂಗರಾಜು ಹೇಳಿದರು.
ನಗರದ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಪದವಿ ಪೂರ್ವ ಕಾಲೇಜಿನಲ್ಲಿ 74ನೇ ಗಣರಾಜ್ಯೋತ್ಸವ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಎಲ್ಲಾ ಕೋರ್ಸ್ ಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಪರಿಸರ ಅಧ್ಯಯನ ಹಾಗೂ ಭಾರತದ ಸಂವಿಧಾನ ವಿಷಯಗಳನ್ನು ಓದಲು ಕಡ್ಡಾಯ ಕಡ್ಡಾಯ ಮಾಡಿರುವುದು ವಿಶ್ವವಿದ್ಯಾಲಯಗಳ ಒಳ್ಳೆಯ ಕೆಲಸ, ಜೊತೆಗೆ ಇಂದಿನ ಸಮಾಜದಲ್ಲಿ ನಾಯುತವಾಗಿ ಬದುಕಲು ಕಾನೂನಿನ ಅರಿವಿರಬೇಕಾಗಿರುವುದರಿಂದ ಭಾರತದ ಸಂವಿಧಾನವನ್ನು ಕಡ್ಡಾಯವಾಗಿ ಅರ್ಥೈಸಿಕೊಳ್ಳಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಎಂ ಪಿ ರುದ್ರಪ್ಪನವರು ಮಾತನಾಡಿ, ಭಾರತದ ಸಂವಿಧಾನದ ವಿಶೇಷತೆಯನ್ನು ಕುರಿತಂತೆ ಸಂವಿಧಾನವನ್ನು ಹಸ್ತಾಕ್ಷರದಲ್ಲಿ ರಚಿಸಲಾಗಿದ್ದು ಹಸ್ತಾಕ್ಷರದಲ್ಲಿ ರಚನೆಯಾದ ವಿಶ್ವದ ಮೊದಲ ಸಂವಿಧಾನ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಂವಿಧಾನ ರಚನೆ ಮಾಡಲಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ವಿದ್ಯಾರ್ಥಿಗಳಾದ ಸಂಜನಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಅಭಿಲಾಷ ಸ್ವಾಗತಿಸಿದರು, ವರ್ಷ ವಂದನಾರ್ಪಣೆ ಮಾಡಿದರು ಹಾಗೂ ಮೊಹಮ್ಮದ್ ಹುಜೆಫಾ ಕಾರ್ಯಕ್ರಮ ನಿರೂಪಿಸಿದರು.