ಸ್ಥಳೀಯ ಉತ್ಪನ್ನಗಳ ಬಳಕೆ ಮತ್ತು ಸರಳ ಜೀವನದಿಂದ ಪರಿಸರ ಸಂರಕ್ಷಣೆ ಸಾಧ್ಯ : ಡಾ. ಎಚ್.ಕೆ.ಎಸ್. ಸ್ವಾಮಿ

1 Min Read

 

ಫೋಟೋ ಮತ್ತು ವರದಿ ಕೃಪೆ
ಅರ್ಜಿತ್ ಗೋವಿಂಧನ್
9741738979

ಸುದ್ದಿಒನ್, ಚಿತ್ರದುರ್ಗ : ಇಂಧನ ಉಳಿತಾಯ, ಸರಳ ಜೀವನ, ಸ್ಥಳೀಯ ಉತ್ಪನ್ನಗಳ ಬಳಕೆ, ಗಾಂಧೀಜಿಯವರ  ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವುದರ ಮುಖಾಂತರ ಪರಿಸರ ಸಂರಕ್ಷಣೆ ಸಾಧ್ಯವೆಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಡಾ, ಎಚ್. ಕೆ.ಎಸ್.ಸ್ವಾಮಿ  ತಿಳಿಸಿದರು.

ಅವರು ನಗರದ ಪ್ರತಿಷ್ಠಿತ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ವತಿಯಿಂದ ಶುಕ್ರವಾರ  ಜ್ಞಾನವಿಕಾಸ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಿದ್ದ ಇಂಡಕ್ಷನ್ ಪ್ರೋಗ್ರಾಂನ ಭಾಗವಾಗಿ ಯುವಜನಾಂಗವನ್ನು ಪರಿಸರ ಸಂರಕ್ಷಣೆಗಾಗಿ ಜಾಗೃತಗೊಳಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸ್ಥಳೀಯ ಉತ್ಪನ್ನಗಳ ಬಳಕ ಹೆಚ್ಚಿಸಿ, ಜನರಲ್ಲಿ ದುಡಿಮೆಯ ಮಹತ್ವವನ್ನು ತಿಳಿಸಿ, ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಿ ಪರಿಸರ ಸಂರಕ್ಷಣೆ ಮಾಡಿಕೊಳ್ಳವುದು ಸಹ ಒಂದು ವಿಧಾನ ಎಂದು ಚರಕದ ಪ್ರಾತ್ಯಕ್ಷಿಕೆಯ ಮುಖಾಂತರ ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ  ಜಿ. ಸುರೇಶ್ ರವರು ಪರಿಸರದಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡದೆ ಅದನ್ನು ಸಂಗ್ರಹಿಸಿ, ವಿಂಗಡಿಸಿ ವಿಲೇವಾರಿ ಮಾಡಿ ಸೃಚ್ಛತೆಗೆ ಆಧ್ಯತೆ ನೀಡುತ್ತ ಪರಿಸರ ಸಂರಕ್ಷಣೆ ಮೂಲಕ ಜಾಗ್ರತಿ ಮೂಡಿಸಬೇಕೆಂದು ತಿಳಿಸಿದರು.

ಸಿವಿಲ್ ವಿಭಾಗದ ಮುಖ್ಯಸ್ಥ ಹರೀಶಯಾದವ್ ಎಸ್ ಜಿ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾಥಿ೯ಗಳು ಭಾಗವಹಿಸಿದ್ದರು..

Share This Article
Leave a Comment

Leave a Reply

Your email address will not be published. Required fields are marked *