Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದೇಶಕ್ಕೆ ಉದ್ಯಮಿಗಳು ಅನ್ನ ಕೊಡಲು ಸಾಧ್ಯವಿಲ್ಲ. ಅನ್ನ ಕೊಡುವುದು ರೈತ ಮಾತ್ರ : ಸಚಿವ ಬಿ.ಸಿ. ಪಾಟೀಲ್

Facebook
Twitter
Telegram
WhatsApp

ಚಿತ್ರದುರ್ಗ, (ಅ.13) : ಜನರೇ ಸಂಘಟಿಸುತ್ತಿರುವ ಹಬ್ಬ ಈ ಶರಣಸಂಸ್ಕøತಿ ಉತ್ಸವ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು. ಶ್ರೀಮಠದ ಅನುಭವಮಂಟಪದಲ್ಲಿ ‘ಬಯಲುಸೀಮೆ ಅಭಿವೃದ್ಧಿ ಸಮಗ್ರ ಚಿಂತನೆಗೆ ಶಿಮುಶ ಅವರ ಕೊಡುಗೆ’ ವಿಚಾರ ಕುರಿತು ಆಯೋಜಿಸಲಾಗಿದ್ದ ಕೃಷಿಮೇಳ ಹಾಗು ಕೈಗಾರಿಕಾ ವಸ್ತು ಪ್ರದರ್ಶನದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀಗಳು ಮಾತನಾಡಿ, ಕೃಷಿಮೇಳ ರೈತರ ಪರ ಚಿಂತಿಸುವ, ಅವರ ಪರ ಧ್ವನಿ ಎತ್ತುವಂತಹ ವೇದಿಕೆ ಇದಾಗಿದ್ದು, ರೈತರು ತಮ್ಮ ಹಲವಾರು ಸಮಸ್ಯೆಗಳನ್ನು ಮುಂದಿಟ್ಟಿದ್ದಾರೆ. ಎಂದು ಶ್ರೀಗಳು ರೈತರ ಬೇಡಿಕೆಗಳಾದ – ಕೊಯ್ಲೋತ್ತರ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರ ಫಸಲು ಖರೀದಿಸಲು ಮುಂದಿನ ಬಜೆಟ್‍ನಲ್ಲಿ 5,000 ಕೋಟಿ ಆವರ್ತನಿಧಿಯನ್ನು ಮೀಸಲಿರಿಸಬೇಕು. ರಾಜ್ಯಾದ್ಯಾಂತ ಮೆಕ್ಕೆಜೋಳವನ್ನು ಬೆಳೆಯುತ್ತಿರುವುದರಿಂದ ಕೇಂದ್ರ ಸರ್ಕಾರ ನಿಗಧಿಪಡಿಸುವ ಬೆಂಬಲ ಬೆಲೆಯಲ್ಲಿ ಖರೀದಿಸಲು ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ತೆರೆಯಬೇಕು. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಸಹಕಾರ ಇಲಾಖೆ ಜಂಟಿಯಾಗಿ ಕ್ರಮ ಕೈಗೊಂಡು ರಾಜ್ಯದಲ್ಲಿ ಹಾಪ್‍ಕಾಮ್ಸ್‍ಗಳನ್ನು ಬಲಪಡಿಸಿ ತರಕಾರಿ ಬೆಳೆಗಾರರನ್ನು ರಕ್ಷಿಸಬೇಕು. ಅದಕ್ಕೆ ಅನುಗುಣವಾಗಿ ಅಗತ್ಯವಿದ್ದೆಡೆಯಲ್ಲಿ ಶೀತಲ ಗೃಹಗಳನ್ನು ಸರ್ಕಾರ ನಿರ್ಮಾಣ ಮಾಡಬೇಕು.

ಚಿತ್ರದುರ್ಗ ಜಿಲ್ಲೆಯಲ್ಲಿ ಭದ್ರಾ ಯೋಜನೆ ಜಾರಿಯಾಗುವ ಪರಿಣಾಮ ಮೊಳಕಾಲ್ಮೂರು ತಾಲ್ಲೂಕು ಹೊರತುಪಡಿಸಿ ಉಳಿದ ತಾಲ್ಲೂಕುಗಳನ್ನು ಕಪ್ಪು ಮತ್ತು ಬೂದು ಪಟ್ಟಿಗೆ ಸೇರಿಸಿರುವುದನ್ನು ತೆಗೆಯಬೇಕು. ಜಿಲ್ಲೆಯ ಮೂರನೇ ಒಂದು ಭಾಗ ರೈತರ ಶೇಂಗಾ ಫಸಲು ಸಂಪೂರ್ಣ ನಾಶವಾಗಿರುವುದರಿಂದ ಪ್ರತಿ ಎಕರೆಗೆ ಕನಿಷ್ಠ 15,000 ರೂಗಳನ್ನು ಘೋಷಣೆ ಮಾಡಬೇಕು. ಜಿಲ್ಲೆಯಲ್ಲಿ ಈರುಳ್ಳಿ ಫಸಲು ವಿವಿಧ ರೋಗಗಳಿಂದ ನಾಶವಾಗಿರುವುದರಿಂದ ಪ್ರತಿ ಎಕರೆಗೆ ರೂ 20,000 ಪರಿಹಾರವನ್ನು ಘೋಷಿಸಬೇಕು. ಕುರಿ, ಮೇಕೆಗಳು ಆಕಸ್ಮಿಕ ಮರಣ ಹೊಂದಿದಾಗ ಅನುಗ್ರಹ ಯೋಜನೆಯಲ್ಲಿ ತಲಾ 5,000 ರೂ ಪರಿಹಾರ ನೀಡಲಾಗುತ್ತಿತ್ತು. ಇದನ್ನು ಸ್ಥಗಿತಗೊಳಿಸಿದ್ದು, ಇದನ್ನು ಮುಂದುವರಿಸಲು ಕ್ರಮ ಕೈಗೊಳ್ಳಬೇಕು. ಕರಾವಳಿ ಭಾಗದಲ್ಲಿ ಮೀನುಗಾರರ ದೋಣಿಗಳಿಗೆ ಸಬ್ಸಿಡಿ ದರದಲ್ಲಿ ಡೀಸೆಲ್ ನೀಡಲಾಗುತ್ತಿದೆ.

ಅದೇ ಮಾದರಿಯಲ್ಲಿ ರೈತರ ಟ್ರಾಕ್ಟರ್‍ಗಳಿಗೆ ಸಬ್ಸಿಡಿ ದರದಲ್ಲಿ ಡೀಸೆಲ್ ನೀಡಬೇಕು. ಸ್ಥಳೀಯ ಗೋತಳಿ ಅಭಿವೃದ್ಧಿಗೊಳಿಸಲು ಅಮೃತ ಮಹಲ್, ಹಳ್ಳಿಕಾರ್, ಗೀರ್ ಮತ್ತು ಸಹಿವಾಲ ತಳಿಗಳ ವೀರ್ಯಬ್ಯಾಂಕನ್ನು ಎಲ್ಲಾ ಪಶುವೈದ್ಯ ಶಾಲೆಗಳಲ್ಲಿ ಸಿಗುವಂತೆ ಮಾಡಬೇಕು. ಅತಿ ಮುಖ್ಯವಾಗಿ ರೈತರ ಫಸಲನ್ನು ತಮ್ಮ ಜಮೀನಿನಿಂದ ಮೊಬೈಲ್ ಮೂಲಕ ಅಪ್‍ಲೋಡ್ ಮಾಡಬೇಕೆಂಬ ನೀತಿಯನ್ನು ತರುತ್ತಿದ್ದು ಅದನ್ನು ರದ್ದುಗೊಳಿಸಿ ಮೊದಲನೇ ರೀತಿಯಲ್ಲಿ ಮುಂದುವರೆಸಬೇಕು.

ನರೇಗಾ ಯೋಜನೆಯಡಿಯಲ್ಲಿ ನಮ್ಮ ಹೊಲ-ನಮ್ಮ ದಾರಿ ಯೋಜನೆ ಸ್ಥಗಿತಗೊಂಡಿದ್ದು ಅದನ್ನು ಪುನಃ ಜಾರಿಗೆ ತರಬೇಕು. ಡ್ರಿಪ್ ಇರಿಗೇಷನ್ ಮತ್ತು ಸ್ಪಿಂಕ್ಲರ್ ಇರಿಗೇಷನ್‍ಗೆ ಸಬ್ಸಿಡಿ ಹಣ ಕಡಿಮೆ ಮಾಡಿದ್ದು, ಮೊದಲನೇ ನಿಯಮದಂತೆ ಎಲ್ಲಾ ರೈತರಿಗೆ 90% ಸಬ್ಸಿಡಿ ಮುಂದುವರೆಸಬೇಕು ಹಾಗೂ ದೆಹಲಿ ಮಾದರಿಯಲ್ಲಿ ಹನಿ ನೀರಾವರಿ ವ್ಯವಸ್ಥೆಗೆ ಏಳು ವರ್ಷಕ್ಕೆ ಪರಿಷ್ಕರಿಸಿ ಮತ್ತೆ ಹೊಸ ಲ್ಯಾಟರಲ್ ಪೈಪ್‍ಗಳಿಗೆ ಸಬ್ಸಿಡಿ ಕೊಡಬೇಕು. ತೋಟಗಾರಿಕೆ ಬೆಳೆಗಳ ರಕ್ಷಣೆಗೆ ಬೆಲೆ ನಿಷ್ಕರ್ಷೆ ಮಾಡಲು ಕೃಷಿ ಬೆಲೆ ಆಯೋಗದ ರೀತಿಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಒಂದು ಆಯೋಗವನ್ನು ರಚನೆ ಮಾಡಬೇಕು ಎಂಬ ರೈತರ ಬೇಡಿಕೆಗಳನ್ನು ಕೃಷಿ ಸಚಿವರ ಮುಂದಿಟ್ಟರು.

ಕೇಂದ್ರ ರಾಸಾಯನಿಕ ಹಾಗು ರಸಗೊಬ್ಬರ ಖಾತೆ ರಾಜ್ಯ ಸಚಿವ ಶ್ರೀ ಭಗವಂತ ಖೂಬಾ ಮಾತನಾಡಿ, ಮುರುಘಾ ಶರಣರು ಮೂರು ದಶಕಗಳಿಂದ ತಮ್ಮ ಸಂಪೂರ್ಣ ಜೀವನವನ್ನು ಸಮಾಜದ ಏಳಿಗೆಗಾಗಿ, ಸುಖಶಾಂತಿಗಾಗಿ, ನಮ್ಮ ಸಂಸ್ಕøತಿಯನ್ನು ಉಳಿಸಿ ಬೆಳಸುವುದಕ್ಕಾಗಿ, ನಮ್ಮೆಲ್ಲರ ವ್ಯಕ್ತಿತ್ವ ನಿರ್ಮಾಣಕ್ಕಾಗಿ ಮುಡಿಪಾಗಿಟ್ಟಿದ್ದಾರೆ.

ಈ ಉತ್ಸವದಲ್ಲಿ ಕೃಷಿಕರನ್ನು ಹುರಿದುಂಬಿಸಿ, ಕೃಷಿಕರ ಸಮಸ್ಯೆಗಳ ಬಗ್ಗೆ ಆಲಿಸಲು ಈ ಕೃಷಿಮೇಳ ಆಯೋಜಿಸಿದ್ದಾರೆ. ಬಿ.ಸಿ.ಪಾಟೀಲ್ ಕೃಷಿ ಸಚಿವರಾದಾಗಿನಿಂದ ರೈತರ ಜೊತೆ ಓಡಾಡಿ ರೈತರ ಸಮಸ್ಯೆಗಳನ್ನು ಅವರ ಮನೆ ಬಾಗಿಲಿಗೆ ಹೋಗಿ ಅರಿಯಬೇಕೆಂದು ರೈತರ ಪರ ಕೆಲಸ ಮಾಡಿದವರು.

ಶ್ರೀಗಳು ಕೇಳಿದ ಬೇಡಿಕೆಗಳನ್ನು ಕೇಂದ್ರ ಸರ್ಕಾರದಲ್ಲಿ ರೈತರ ಅನುಕೂಲಕ್ಕಾಗಿ ಇಲಾಖೆಯಿಂದ ಮಾಡುತ್ತೇವೆ. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ರೂಪಿಸಿ ರೈತರಿಗೆ ಬೆಳೆ ವಿಮೆ ನೀಡುವ ಕೆಲಸವಾಗುತ್ತಿದೆ. ಬೀದರ್ ಜಿಲ್ಲೆ ಬೆಳೆ ವಿಮೆ ಯೋಜನೆ ಕಾರ್ಯ ರೂಪಕ್ಕೆ ತರುವಲ್ಲಿ ಪ್ರಥಮ ಸ್ಥಾನದಲ್ಲಿದೆ. ಕಳೆದ 5 ವರ್ಷಗಳಲ್ಲಿ ಬೀದರ್ ಜಿಲ್ಲೆಯ ಬಹುತೇಕ ಜನ ರೈತರು ವಿಮೆ ಹಣವನ್ನು ಪಡೆದಿದ್ದಾರೆ. ಕೇಂದ್ರ ಸರ್ಕಾರದಿಂದ ರೈತರ ಖಾತೆಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿವರ್ಷ ರೂ.6,000/- ಹಾಗು ರಾಜ್ಯ ಸರ್ಕಾರದ ವತಿಯಿಂದ ಪ್ರತಿ ವರ್ಷ ರೂ.4,000/-ಗಳನ್ನು ರೈತರ ಖಾತೆಗೆ ನೇರವಾಗಿ ಜಮೆಯಾಗುತ್ತಿದೆ. ಗೊಬ್ಬರ, ಕೀಟನಾಶಕ, ನೀರು ಇವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡಾಗ ಮಣ್ಣಿನ ಫಲವತ್ತತೆ ಉಳಿದು ಮುಂದಿನ ಪೀಳಿಗೆಗೆ ಅನುಕೂ¯ವಾಗುತ್ತದೆ. ಇಲ್ಲದೇ ಹೋದಲ್ಲಿ ಮುಂದಿನ ಪೀಳಿಗೆಗೆ ಸಮಸ್ಯೆಯಾಗುತ್ತದೆ. ನಮ್ಮ ದೇಹದ ಆರೋಗ್ಯದ ರೀತಿ ಮಣ್ಣು, ಮರಗಳನ್ನು ಸಹ ಸಂರಕ್ಷಿಸಬೇಕು. ಕೇಂದ್ರ ಸರ್ಕಾರದಿಂದ ರೈತರಿಗೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು.
ಮಧುರೆ-ಹೊಸದುರ್ಗದ ಶ್ರೀ ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮಿಗಳು ಮಾತನಾಡಿ, ಮುರುಘಾ ಶರಣರು ಪೀಠಾರೋಹಣರಾದ ನಂತರ ಹಳ್ಳಿಗಳಲ್ಲಿ ಶಿಕ್ಷಣದ ಬೀಜವನ್ನು ಬಿತ್ತಿದರು. ಪ್ರಾಥಮಿಕ ಶಾಲೆಯಿಂದ ಉನ್ನತ ಶಿಕ್ಷಣದವರೆಗೂ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಿದರು. ಬಯಲು ಸೀಮೆಯಲ್ಲಿ ನೀರಾವರಿ ಸೌಲಭ್ಯಕ್ಕಾಗಿ ಎಲ್ಲಾ ಪೂಜ್ಯರನ್ನು, ಹೋರಾಟಗಾರರನ್ನು, ಸಮಾಜಸೇವಕರನ್ನು, ಪತ್ರಕರ್ತರುಗಳನ್ನು ಸೇರಿಸಿಕೊಂಡು ಮೂವತ್ತು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಇದರ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಕಾರ್ಯಗತಗೊಳ್ಳುತ್ತಿದೆ. ಇದಕ್ಕೆ ಕಾರಣ ಮುರುಘಾ ಶರಣರು. ಜೊತೆಗೆ ಬಯಲುಸೀಮೆ ಬರಪೀಡಿತ ಜಿಲ್ಲೆಯಾಗಿರುವ ಚಿತ್ರದುರ್ಗಕ್ಕೆ ನೀರಾವರಿ, ಕೈಗಾರಿಕೆ, ರೈಲ್ವೆ ಯೋಜನೆಗಳು ಬರಬೇಕೆಂದು ಅನೇಕ ಹೋರಾಟಗಳನ್ನು ಮಾಡಿದ್ದಾರೆ. ಅದರ ಫಲವಾಗಿ ಹಲವು ಯೋಜನೆಗಳು ಪ್ರಗತಿಯಲ್ಲಿವೆ. ಈ ಮೇಳಕ್ಕೆ ಮುಖ್ಯಮಂತ್ರಿಗಳನ್ನು ಕರೆಯಿಸಿ ರೈತರ ಬೇಡಿಕೆಗಳನ್ನು ಮುಂದಿಡುತ್ತಿದ್ದಾರೆ. ಬಸವ ಪುತ್ಥಳಿ ಅನಾವರಣಗೊಂಡಾಗ ವಿಶ್ವ ಭೂಪಟದಲ್ಲಿ ಚಿತ್ರದುರ್ಗ ವಿಶಿಷ್ಟವಾಗಿ ಕಾಣಿಸಿಕೊಳ್ಳುತ್ತದೆ. ಅನೇಕ ಶೋಷಿತ, ಹಿಂದುಳಿದ ಸಮುದಾಯಗಳಿಗೆ ಪ್ರತ್ಯೇಕ ಮಠಗಳನ್ನು ಸ್ಥಾಪಿಸಿದ ಕೀರ್ತಿ ಮುರುಘಾ ಶರಣರಿಗೆ ಸಲ್ಲುತ್ತದೆ ಜೊತೆಗೆ ಎಲ್ಲಾ ಧರ್ಮಗಳ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ. ಎಲ್ಲಾ ಶಾಖಾ ಮಠಗಳ ಮೂಲಕ ಬಸವಾದಿ ಶರಣರ ಧಾರ್ಮಿಕ ಸಂಸ್ಕøತಿಯನ್ನು ವಿಸ್ತಾರ ಮಾಡುತ್ತಾ ಆ ಮೂಲಕ ಬಸವಣ್ಣನವರ ತತ್ವಗಳನ್ನು ಪ್ರಸಾರ ಮಾಡುವ ಕೆಲಸವನ್ನು ಶ್ರೀಗಳು ಮಾಡುತ್ತಿದ್ದಾರೆ. ರೈತ ಸೋಮಾರಿಯಲ್ಲ. ಶ್ರಮಜೀವಿ. ಎಲ್ಲಾ ಸೌಲತ್ತುಗಳನ್ನು ಸರ್ಕಾರ ಶ್ರಮಜೀವಿಯಾದ ರೈತರಿಗೆ ನೀಡಬೇಕೆಂದು ಕೃಷಿ ಸಚಿವರಲ್ಲಿ ಬೇಡಿಕೆಯಿಟ್ಟರು.

ಬಾಲೆಹೊಸೂರು ಶ್ರೀ ದಿಂಗಾಲೇಶ್ವರಮಠದ ಶ್ರೀ ದಿಂಗಾಲೇಶ್ವರ ಸ್ವಾಮಿಗಳು ಮಾತನಾಡಿ, ಬಸವಾದಿ ಶರಣರು ಕೃಷಿ ಕಾಯಕಕ್ಕೆ ಒತ್ತು ನೀಡಿದವರಾಗಿದ್ದರು. ಅದರಂತೆ ಮುರುಘಾ ಶರಣರು ಸಹ ಕೃಷಿಗೆ ಒತ್ತು ನೀಡುವಂತವರು. ರಾಜ್ಯದಲ್ಲಿ ಕೃಷಿ ವಿಶ್ವವಿದ್ಯಾಲಯಗಳು ಬೆಳೆ ಹೇಗೆ ಬೆಳೆಯಬೇಕೆಂದು ಹೇಳುತ್ತಾರೆ. ಆದರೆ ಬೆಳೆÀದ ಬೆಳೆ ಹೇಗೆ ಮಾರಾಟ ಮಾಡಬೇಕೆಂದು ಹೇಳುವುದಿಲ್ಲ. ನಮ್ಮ ನಿಂಬೆಯ ತೋಟದಿಂದ ನಿಂಬೆಯ ಹಣ್ಣನ್ನು 50 ಪೈಸೆಗೆ ಪಡೆದು 2 ರೂಗಳಿಗೆ ಮಾರುತ್ತಾರೆ. ಇದರಿಂದ ಅರ್ಥವಾಗುತ್ತದೆ. ವರ್ಷವಿಡೀ ಬೆಳೆ ಬೆಳೆದ ರೈತನಿಗಿಂತ ಮಧ್ಯವರ್ತಿ ಲಾಭ ಪಡೆಯುತ್ತಾನೆ ಎಂಬುದು ವಿಪರ್ಯಾಸ. ಅಂದು ಋಷಿ ಪ್ರಧಾನವಾಗಿತ್ತು, ಇಂದು ಕೃಷಿ ಪ್ರಧಾನವಾಗಿದೆ. ಕೃಷಿಯಿಂದ ರೈತರು ಎಂದಿಗೂ ಖುಷಿ ಪಟ್ಟಿಲ್ಲ. ರೈತರು ಮಾತ್ರ ಹೀನ ಸ್ಥಿತಿಯಲ್ಲಿರುವುದು ಕಂಡು ಬರುತ್ತದೆ. ಒಂದು ಕಾರ್ಖಾನೆಯಿಂದ ಬರುವ ಒಂದು ಪೆನ್ನಿಗೂ ಸಹ ಬೆಲೆ ನಿಗದಿಯಾಗಿರುತ್ತದೆ. ಆದರೆ ರೈತರು ಬೆಳೆದ ಬೆಳೆಗೆ ಬೆಲೆ ಏಕೆ ನಿಗದಿ ಇಲ್ಲ?. ಕೃಷಿ ಸಚಿವರು ರೈತರೊಂದಿಗೆ, ಮಠಾಧೀಶರೊಂದಿಗೆ ಚರ್ಚಿಸಿ ರೈತರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದರು.

ಕೃಷಿಮೇಳವನ್ನು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿದ ಕೃಷಿ ಸಚಿವರಾದ ಶ್ರೀ ಬಿ.ಸಿ.ಪಾಟೀಲ್ ಮಾತನಾಡಿ, ದೇಶಕ್ಕೆ ಉದ್ಯಮಿಗಳು ಅನ್ನ ಕೊಡಲು ಸಾಧ್ಯವಿಲ್ಲ. ಅನ್ನ ಕೊಡುವುದು ರೈತ ಮಾತ್ರ. ಕೃಷಿತೋ ನಾಸ್ತಿ ದುರ್ಭಿಕ್ಷಂ ಎಂಬಂತೆ ಕೃಷಿಯನ್ನು ರಕ್ಷಿಸದಿದ್ದರೆ ಅಧೋಗತಿ ನಾಶ ಕಟ್ಟಿಟ್ಟಬುತ್ತಿ. ಬಸವಣ್ಣ, ಸರ್ವಜ್ಞ ಮೊದಲಾದ ಶಿವಶರಣರು ತಮ್ಮ ವಚನಗಳ ಮೂಲಕ ಸುಧಾರಣೆಗಳನ್ನು ಕೈಗೊಂಡರು. ಅದೇ ರೀತಿ ಮರುಘಾ ಶರಣರು ರೈತರ ಪರವಾಗಿ ನಿಂತವರು. ಇಸ್ರೇಲ್ ಮಾದರಿಗಿಂತ ಕೋಲಾರ ಮಾದರಿಯಲ್ಲಿ ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸಬೇಕು. ನಾವು ಬೆಳೆಯುವ ಬೆಳೆಗಳು ವಿಷಪೂರಿತವಾಗಿವೆ. ಕಾರಣ ನಾವು ಉಪಯೋಗಿಸುತ್ತಿರುವ ಮಿತಿಮೀರಿದ ರಸಾಯಿನಿಕ ಔಷದಿಗಳ ಬಳಕೆ. ಅದನ್ನು ತಡೆಯಲು ಸಾವಯವ ಕೃಷಿಯಿಂದ ಸಾಧ್ಯ, ಸಾವಯವ ಕೃಷಿಯಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಕೃಷಿಯಲ್ಲಿ ಯಂತ್ರೋಪಕರಣ ಉಪಯೋಗಿಸಿ ವೈಜ್ಞಾನಿಕವಾಗಿ ಕೃಷಿ ಮಾಡಿದರೆ ಹೆಚ್ಚಿನ ಬೆಳೆ ಬೆಳೆಯಲು ಸಾಧ್ಯ. ಕೃಷಿಗೆ ಮೂಲಭೂತ ಸೌಕರ್ಯ ಒದಗಿಸಲು ಕೇಂದ್ರ ಸರ್ಕಾರ ಹಣವನ್ನು ಮೀಸಲಿಟ್ಟಿದೆ. ಆಹಾರ ಸಂಸ್ಕರಣ ಘಟಕ ನಿರ್ಮಾಣ ಮಾಡಲು ರೈತ ಉತ್ಪಾದಕ ಸಂಸ್ಥೆಗಳನ್ನು ನಿರ್ಮಾಣ ಮಾಡಲು ಸಹಾಯಧನ ನೀಡಲಾಗುತ್ತಿದೆ. ದಲ್ಲಾಳಿ ಕಡೆಯಿಂದ ರೈತರ ಮುಕ್ತರಾಗಲು ಸಂಸ್ಕರಣ ಘಟಕಗಳನ್ನು ಮಾಡಿಕೊಳ್ಳಬೇಕು. ರೈತರೊಂದಿಗೆ ಒಂದು ದಿನ ಎಂಬ ಕಾರ್ಯಕ್ರಮವನ್ನು ಮಾಡುತ್ತೇವೆ. ಇದರಿಂದ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಮಾಡುತ್ತೇವೆ. ಪ್ರಗತಿಪರ ರೈತರಿಗೆ ಸನ್ಮಾನಿಸಿದರೆ ಉಳಿದವರಿಗೆ ಉತ್ತೇಜನ ನೀಡಿದಂತಾಗುತ್ತದೆ. ವಿಶೇಷವಾಗಿ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸೌಲಭ್ಯ ನೀಡಲಾಗುತ್ತಿದೆ. ರಾಜ್ಯದಲ್ಲ್ಲಿ ಹದಿಮೂರು ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡುತ್ತಿದ್ದೇವೆ. ರೈತರು ಬಳಸುವ ಯಂತ್ರೋಪಕರಣಗಳಿಗೆ ಸಬ್ಸಿಡಿ ನೀಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇನೆ. ರೈತರ ಮಕ್ಕಳಿಗೆ ಬಿಎಸ್ಸಿ-ಕೃಷಿ ಪದವಿ ಕೋರ್ಸಿಗೆ ಪ್ರವೇಶಾತಿಗೆ ಶೇ50 ಅವಕಾಶ ಮಾಡಿಕೊಡಲಾಗಿದೆ. ಕೃಷಿ ಇಲಾಖೆಯಿಂದ ತುಂತುರು ನೀರಾವರಿಗೆ ಶೇ.90ರಷ್ಟು ಸಹಾಯಧನ ನೀಡಿದೆ. ನನ್ನ ಬೆಳೆ-ನನ್ನ ಹಕ್ಕು ಎಂಬ ಬೆಳೆ ವಿಮೆಯನ್ನು ಪಡೆಯಲು ಸಹಾಯವಾಗುವ ನಿಟ್ಟಿನಲ್ಲಿ ಮೊಬೈಲ್‍ನಲ್ಲಿ ಬೆಳೆ ನಮೂದಿಸಲು ಅವಕಾಶ ಮಾಡಿಕೊಟ್ಟಿದ್ದೇವೆ. ಇದರಿಂದ ಬೆಳೆ ಸಮೀಕ್ಷೆಯನ್ನು ರೈತರೇ ಮಾಡಲು ಅನುವು ಮಾಡಿಕೊಡಲಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ವರ್ಷಗಿಂತ ಈ ಬಾರಿ ಹೆಚ್ಚು ಭಿತ್ತನೆಯಾಗಿದೆ. ಕೃಷಿ ಜೊತೆಗೆ ಜೇನು ಸಾಕಾಣಿಕೆ ಮಾಡಿ ಲಾಭ ಗಳಿಸಲು ರೈತರು ಮುಂದಾಗಬೇಕು. ಗೃಹ ಕೈಗಾರಿಕೆಗಳಲ್ಲಿ ಮಹಿಳೆಯರು ತೊಡಗಿಕೊಂಡಲ್ಲಿ ಆರ್ಥಿಕ ಲಾಭ ಪಡೆಯಬಹುದು. ಕೃಷಿ ರೈತ್ಯೋದ್ಯಮವಾಗಬೇಕು ಎಂದು ತಿಳಿಸಿದರು.

ಬಾಬು ಜಗಜೀವನ್‍ರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪ್ರೊ. ಎನ್.ಲಿಂಗಣ್ಣ ಮಾತನಾಡಿ, 12ನೇ ಶತಮಾನದ ಬಸವಣ್ಣನವರಂತೆ ಇಂದು ಶ್ರೀಗಳು 21ನೇ ಶತಮಾನದಲ್ಲಿ ಅನೇಕ ಕ್ರಾಂತಿಕಾರಕ ಹೆಜ್ಜೆಯನ್ನಿಡುತ್ತಿದ್ದಾರೆ. ಕೃಷಿ ಪ್ರಧಾನ ದೇಶ ನಮ್ಮದು. ರೈತರು ಸಾಕಷ್ಟು ಬೆಳೆ ಬೆಳೆದರು ಸಹ ಅದನ್ನು ಮಾರುವ, ಉತ್ತಮ ಬೆಲೆ ಪಡೆಯುವಂತಹ ಅವಕಾಶ ಸಿಗಬೇಕಾಗಿದೆ. ಅದಕ್ಕೆ ನಾವುಗಳು ರೈತರ ಪರವಾಗಿ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಆಲೋಚನೆ ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶರಣ ಸಂಸ್ಕøತಿ ಉತ್ಸವ-2021ರ ಗೌರವಾಧ್ಯಕ್ಷರಾದ ಶ್ರೀ ಮಾದಾರಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು, ವಿಧಾನಪರಿಷತ್ ಮಾಜಿ ಸದಸ್ಯರು ಹಾಗೂ ಚಲನಚಿತ್ರ ನಿರ್ಮಾಪಕರಾದ ಶ್ರೀ.ಇ.ಕೃಷ್ಣಪ್ಪ, ಬೆಂಗಳೂರು ಕೃಷಿ ವಿ.ವಿ. ಕೃಷಿ ಆರ್ಥಿಕ ತಜ್ಞರಾದ ಪ್ರೊ.ಟಿ.ಎಂ.ವೆಂಕಟರೆಡಿ,್ಡ ಶರಣ ಸಂಸ್ಕøತಿ ಉತ್ಸವ-2021ರ ಕಾರ್ಯಾಧ್ಯಕ್ಷರಾದ ಶ್ರೀ ಕೆ ಎಸ್ ನವೀನ್, ಎಸ್.ಜೆ.ಎಂ.ವಿದ್ಯಾಪೀಠದ ಕಾರ್ಯದರ್ಶಿ ಶ್ರೀ ಎ.ಜೆ.ಪರಮಶಿವಯ್ಯ, ಸಿದ್ದಾಪುರ ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಶಿಲ್ಪ, ಹರಗುರುಚರಮೂರ್ತಿಗಳು ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬೀದರ್‍ನ ಪ್ರಗತಿಪರ ರೈತ ಶ್ರೀ ವಿಜಯ ಸೂರ್ಯವಂಶಿ ಹಾಗೂ ಹುಲಿಕೆರೆಯ ಆದರ್ಶ ಕೃಷಿಕ ಶ್ರೀ ವಿಶ್ವೇಶ್ವರ ಸಜ್ಜನರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ಪ್ರಾರ್ಥಿಸಿ, ಪಿ.ವೀರೇಂದ್ರ ಕುಮಾರ್ ಸ್ವಾಗತಿಸಿ, ನಾನಾಗೌಡ ಪಾಟೀಲ ನಿರೂಪಿಸಿದರು.
ಪ್ರಿಯದರ್ಶಿನಿ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿಗಳು ಹಾಗೂ ಎಸ್.ಜೆ.ಎಂ.ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನವನ್ನು ನೀಡಿದರು.

ಕೃಷಿಮೇಳದ ಬಹುಮಾನ ವಿಜೇತರು
ಪ್ರಥಮ ಬಹುಮಾನ ಕೃಷಿ ಇಲಾಖೆ, ಚಿತ್ರದುರ್ಗ, ದ್ವಿತೀಯ ಬಹುಮಾನ-ಅಪ್ಪರ್ ಭದ್ರಾ ಪ್ರಾಜೆಕ್ಟ್, ತೃತೀಯ ಬಹುಮಾನ-ತೋಟಗಾರಿಗೆ ಇಲಾಖೆ, ಚಿತ್ರದುರ್ಗ ನಾಲ್ಕನೇ ಬಹುಮಾನ- ಮೀನುಗಾರಿಕೆ ಇಲಾಖೆ, ಚಿತ್ರದುರ್ಗ ಸಮಾಧಾನಕರ ಬಹುಮಾನ-ವರ್ಷ ಅಸೋಸಿಯೇಟ್ಸ್, ಚಿತ್ರದುರ್ಗ
ಕೃಷಿಮೇಳ ಹಾಗು ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ ತಂಡಗಳು
ಜಲಾನಯನ ಇಲಾಖೆಯ ಚೆಕ್ ಡ್ಯಾಂ ಮಾದರಿ, ಕೃಷಿ ಇಲಾಖೆಯ- ಜಲ ಸಂರಕ್ಷಣೆಗೆ ಮಾದರಿ ಹೊಂಡ ನಿರ್ಮಾಣ, ಸಮಸ್ಯಾತ್ಮಾಕ ಮಣ್ಣನ್ನು ಕೃಷಿಭೂಮಿಯಾಗಿ ಪರಿವರ್ತಿಸಿ ಬೆಳೆ ಬೆಳೆಯವುದು, ಉಮೇಶ್, ಶುದ್ಧ ಶೇಂಗಾ ಎಣ್ಣೆ ತಯಾರಕರು-ಒಂದು ಜಿಲ್ಲೆ-ಒಂದು ಉತ್ಪನ್ನ ಯೋಜನೆಯಡಿಯಲ್ಲಿ ಮಾದರಿ, ಗಂಗಾ ಕಾವೇರಿ ಸೀಡ್ಸ್- ಮೆಕ್ಕಜೋಳ ಇಳುವರಿ ಹೆಚ್ಚಳ, ಕಾವೇರಿ ಸೀಡ್ಸ್-ಮೆಕ್ಕೆಜೋಳ, ಕೃಷಿ ವಿಜ್ಞಾನ ಕೇಂದ್ರ ಬಬ್ಬೂರು ಹಿರಿಯೂರು ಇವರ ವತಿಯಿಂದ-ಶೇಂಗಾದಲ್ಲಿ ಹೊಸ ತಳಿ ಪರಿಚಯ-ಕದರಿ ಲೇಪಾಕ್ಷಿ ತಳಿ, ವರ್ಷಾ ಅಸೋಸಿಯೇಟ್ಸ್- ಕೃಷಿ ಉಪಕರಣ ಪ್ರದರ್ಶನ, ಆಯುಷ್ ಇಲಾಖೆ, ಚಿತ್ರದುರ್ಗ- ಮನೆಯ ಸುತ್ತಮುತ್ತ ದೊರೆಯುವ ಔಷದೀಯ ಸಸ್ಯಗಳ ಪರಿಚಯ ಹಾಗು ಬಳಕೆ, ಕರೋನಾ ತಡೆಗಟ್ಟುವ ಬಗ್ಗೆ ಮಾಹಿತಿ, ರೇಷ್ಮೆ ಇಲಾಖೆ, ಚಿತ್ರದುರ್ಗ-ರೇಷ್ಮೆ ಗೂಡಿನ ತಳಿಗಳ ನಿರ್ಮಾಣ ಮಾಡುವ ಉತ್ಪನ್ನಗಳ ಪರಿಚಯ, ತೋಟಗಾರಿಕೆ ಇಲಾಖೆ, ಚಿತ್ರದುರ್ಗ-ಔಷದಿ ಮತ್ತು ಸುಗಂಧದ್ರವ್ಯ ಸಸಿಗಳ ಪ್ರದರ್ಶನ ಹಾಗು ಜೀವಸತ್ವವುಳ್ಳ ಹಣ್ಣು ಮತ್ತು ತರಕಾರಿಗಳ ಪ್ರದರ್ಶನ, ಮೀನುಗಾರಿಕೆ ಇಲಾಖೆ ಚಿತ್ರದುರ್ಗ- ವಸ್ತು ಪ್ರದರ್ಶನ, ವಿಶ್ವೇಶ್ವರಯ್ಯ ಜಲನಿಗಮ-ಭದ್ರಾ ಮೇಲ್ದಂಡೆ ಯೋಜನೆಗಳ ಪ್ರದರ್ಶನ, ಶ್ರೀ ಸಾಯಿ ಎಂಟರ್ ಪ್ರೈಸಸ್ ಚಿತ್ರದುರ್ಗ-ಆಧುನಿಕ ಕೃಷಿ ಬೇಸಾಯದ ಉಪಕರಣಗಳ ಪ್ರದರ್ಶನ, ಮೊಳಕಾಲ್ಮೂರು ಕೈಮಗ್ಗದ ಸೀರೆಗಳ ಪ್ರದರ್ಶನ, ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ-ಸಿರಿಧಾನ್ಯಗಳಿಂದ ತಯಾರಿಸಿದ ಆಹಾರಗಳ ಪ್ರದರ್ಶನ, ಅಕ್ಕಮಹಾದೇವಿ ಸ್ತ್ರೀ ಶಕ್ತಿಸಂಘ, ದೊಡ್ಡಸಿದ್ದವ್ವನಹಳ್ಳಿ-ಆಹಾರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ಅಶ್ವಿನಿ ಸ್ತ್ರೀ ಶಕ್ತಿಸಂಘ, ರಾಮಗಿರಿ-ಸಿರಿಧಾನ್ಯಗಳ ಮಾಲ್ಟ್‍ಗಳ ಪ್ರದರ್ಶನ ಮತ್ತು ಮಾರಾಟ, ಪಶು ವೈದ್ಯ ಇಲಾಖೆ, ಚಿತ್ರದುರ್ಗ-ಜಾನುವಾರು ತಳಿಗಳು ಮತ್ತು ಪಶು ಆಹಾರ ಪ್ರದರ್ಶನ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಡಿಸೆಂಬರ್ 01 ರಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

  ಚಿತ್ರದುರ್ಗ. ನ.22: ಪ್ರಸಕ್ತ ಮುಂಗಾರು ಹಂಗಾಮಿನ ರಾಗಿ ಬೆಳೆಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಡಿಸೆಂಬರ್ 01 ರಿಂದ ನೋಂದಣಿ ಕಾರ್ಯ ಪ್ರಾರಂಭಿಸಲಾಗುವುದು. ಡಿ.31 ರವರೆಗೆ ನೋಂದಣಿ ನಡೆಯಲಿದೆ. ಪ್ರತಿ ಕ್ವಿಂಟಾಲ್

ಸತತ ಏರಿಕೆಯತ್ತ ಸಾಗುತ್ತಿದೆ ಚಿನ್ನದ ಬೆಲೆ : ಇಂದಿನ ದರ ಹೀಗಿದೆ..!

ಚಿನ್ನದ ಬೆಲೆ ಇಳಿಕೆಯಾಯ್ತು ಎಂದು ಖುಷಿ ಪಡುತ್ತಿರುವಾಗಲೇ ಇದೇನಿದು ಒಂದೇ ಸಮನೇ ಏರುತ್ತಲೇ ಇದೆ. ಅದರಲ್ಲೂ 70-80 ರೂಪಾಯಿ ಏರುತ್ತಿದೆ. ಇಂದು ಕೂಡ ಚಿನ್ನದ ದರ ಏರಿಕೆಯಾಗಿದ್ದು, 70 ರೂಪಾಯಿ ಗ್ರಾಂಗೆ ಜಾಸ್ತಿಯಾಗಿದೆ. ಈ

ಚಿತ್ರದುರ್ಗ | ಯೋಗೀಶ್ ಸಹ್ಯಾದ್ರಿ ಬಿಜೆಪಿ ಸೇರ್ಪಡೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ನ. 22 : ಉಪನ್ಯಾಸಕರು ಹಾಗೂ ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿ, ಅಧ್ಯಕ್ಷರಾದ ಯೋಗೀಶ್ ಸಹ್ಯಾದ್ರಿಯವರು ಬಿಜೆಪಿ

error: Content is protected !!