ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಬಾರದಂತೆ ನೋಡಿಲೊಳ್ಳಿ : ಜಿಕೆ ಹೊನ್ನಯ್ಯ

2 Min Read

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್, ಚಳ್ಳಕೆರೆ, ಅಕ್ಟೋಬರ್.20 : ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉದ್ಭವವಾಗದಂತೆ ನೋಡಿಕೊಳ್ಳಬೇಕು. ಸಭೆಗೆ ಬಾರದ ಪಿಡಿಒ ಹಾಗೂ ಇಂಜಿಯರ್‌ಗಳಿಗೆ ನೋಟಿಸ್ ಜಾರಿ ಮಾಡುವಂತೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಜಿಕೆ ಹೊನ್ನಯ್ಯ ಸೂಚಿಸಿದರು.

ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪಿಡಿಒ , ಕಂಪ್ಯೂಟರ್ ಆಪರೇಟರ್ ಹಾಗೂ ಇಂಜಿನಿಯರ್‌ಗಳಿಗೆ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ದ ಗರಂ ಆದರು.
ತಾಲೂಕಿನಲ್ಲಿ ಮಳೆ ಅಭಾವದಿಂದಾಗಿ ಕುಡಿಯುವ ನೀರಿಗೆ ಆ ಭಾವ ಉಂಟಾಗಬಹುದು ಪಿ ಡಿ ಓ ಗಳು ತಮ್ಮ ತಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು.ಕಚೇರಿಗಳಿಗೆ ಹೋಗದೆ ಜನರ ಸಂಪರ್ಕಕ್ಕೂ ಸಿಗದೆ ಕೆಲಸ ಮಾಡದೆ ಜನರನ್ನು ಅಲೆದಾಡಿಸುತ್ತಿರುವ ದೂರುಗಳು ಕೇಳಿ ಬಂದಿವೆ.ಇಂದು ಪ್ರಗತಿ ಪರಿಶೀಲನಾ ಸಭೆ ಮಾಹಿತಿ ಇದ್ದರೂ ಪ್ರಗತಿ ವರದಿಯನ್ನು ತರದೆ ಕೈಬೀಸಿಕೊಂಡು ಬಂದಿದ್ದೀರಿ. ವರದಿ ನೀಡಿದರೆ ತಾಳೆಯಾಗುತ್ತಿಲ್ಲ ನುಣುಚಿಕೊಳ್ಳಲು ತಪ್ಪು ಮಾಹಿತಿಯನ್ನು ನೀಡದೆ ನಿಖರವಾದ ಮಾಹಿತಿ ನೀಡ ಬೇಕು. ಕೆಲ ಪಿಡಿಒಗಳಿಂದ ಬೇರೆ ಬೇರೆ ಪಿಡಿಗಳಿಗೆ ಕೆಟ್ಟ ಹೆಸರು ಬರುತ್ತದೆ. ಕಚೇರಿಯಲ್ಲಿ ಕೂತು ಸರ್ಕಾರದಿಂದ ಬಂದ ಅನುದಾನದಿಂದ ಗ್ರಾಮೀಣ ಜನರಿಗೆ ಅರ್ಹ ಫಲಾನುಭವಿವಿಗಳಿಗೆ ತಲುಪಿಸುವ ಕೆಲಸ ಆಗಬೇಕು.

ನರೇಗಾ ಯೋಜನೆಯಡಿಯಲ್ಲಿ ಕ್ರಿಯಾಯೋಜನೆ ಮಾಡಿಕೊಂಡು ಪುಸ್ತಕದಲ್ಲಿಟ್ಟುಕೊಂಡರೆ ಸಾಲದು. ದುಡಿಯುವ ಕೈಗಳಿಗೆ ಕೆಲಸ ನೀಡುವ ಮೂಲಕ ಮಾನವ ದಿನಗಳನ್ನು ಹೆಚ್ಚಿಸಿ ಕಾರ್ಮಿಕರನ್ನು ಗುಳೆ ಹೋಗುವುದನ್ನು ತಪ್ಪಿಸ ಬೇಕು. ಮಳೆಯಿಲ್ಲದೆ ಗ್ರಾಮೀಣ ಜನರು ಸಂಕಷ್ಟ ಕೊಳಗಾಗಿದ್ದಾರೆ.

ನರೇಗಾ ಕ್ರಿಯಾ ಯೋಜನೆ, ನರೇಗಾ ಜಾಬ್ ಕಾರ್ಡ್ಗಳಿಗೆ ಆಧಾರ್ ಸೀಡ್, 15 ನೇ ಹಣಕಾಸು ಕ್ರಿಯಾಯೋಜನೆ, ವಿಶ್ವಕರ್ಮ ಯೋಜನೆ,ಕೂಲಿನ ಮನೆ, ವಸತಿ ಯೋಜನೆ, ಬಿಕ್ಷಕರ ಕರ ಪಾವತಿ, ಡಿಸಿಬಿ ಸಂಗ್ರಹ, ಇ-ಹಾಜರಾತಿ, ವ್ಯಾಲೆಟ್ ರೀಚಾರ್ಜ್, ಸೇರಿಂದ ವಿವಿಧ ಯೋಜನೆಗಳನ್ನು ನಿವಗಧಿತ ಸಮಯದೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಇಂನಿಯರ್‌ಗಳು ಸಭೆಗೆ ಗೈರು ಹಾಜರಿಯಾಗಿರುವುದನ್ನು ಕಂಡು ತಾಲೂಕು ತಾಂತ್ರಿಕ ಆಧಿಕಾರಿ ಇಂಜಿನಯರ್‌ಗಳನ್ನು ಕಂಟೋಲ್ ಇಟ್ಟುಕೊಳ್ಳಲು ಆಗದೆ ಏನು ಕರ್ತವ್ಯ ನಿರ್ವಹಿಸುತ್ತೀರಿ ಎಂದು ಗರಂ ಆದರು.

ಸಭೆಯಲ್ಲಿ ನರೇಗಾ ಸಹಾಯಕ ನಿರ್ದೇಶಕ ಸಂತೋಷ್.ಪಿಆರ್ ಡಿ ಸಹಾಯಕ ನಿರ್ದೇಶಕ ಸಂಪತ್ ಕಚೇರಿ ವ್ಯವಸ್ಥಾಪಕ ಪ್ರಭಾಕರ್ ಹಾಗೂ ಗ್ರಾಮ ಪಂಚಾಯತಿಯ ಪಿಡಿಒಗಳು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *