ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 08 : ನಗರದ 35 ವಾರ್ಡ್ ಗಳಲ್ಲಿ ಸಮಿತಿ ರಚಿಸಿ ಹೆಚ್ಚಿನ ಸದಸ್ಯತ್ವ ನೊಂದಾಯಿಸುವಂತೆ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕರೆ ನೀಡಿದರು.
ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಬಿಜೆಪಿ ನಗರ ಘಟಕ ಸದಸ್ಯತ್ವ ಅಭಿಯಾನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕೇಂದ್ರ ಬಿಜೆಪಿ ಸರ್ಕಾರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸವಲತ್ತುಗಳನ್ನು ಪಡೆದುಕೊಂಡಿರುವವರು ಪ್ರತಿ ಮನೆಯಲ್ಲಿಯೂ ಸಿಗುತ್ತಾರೆ. ಅಂತಹವರನ್ನು ಹುಡುಕಿ ಪಕ್ಷದ ಯೋಜನೆಗಳ ಕುರಿತು ಮನವರಿಕೆ ಮಾಡಿ ಹೆಚ್ಚಿನ ಸದಸ್ಯತ್ವ ಪಕ್ಷಕ್ಕೆ ಸೇರ್ಪಡೆಗೊಳಿಸುವಂತೆ ನಗರ ಪದಾಧಿಕಾರಿಗಳಿಗೆ ತಿಳಿಸಿದರು.
ಗಾರೆಹಟ್ಟಿ, ಮಾಳಪ್ಪನಹಟ್ಟಿ, ಕೋಣನಹಟ್ಟಿ, ದವಳಗಿರಿ ಬಡಾವಣೆ, ಬಿ.ವಿ.ಕೆ.ಎಸ್.ಲೇಔಟ್, ಕೆಳಗೋಟೆ, ಹೌಸಿಂಗ್‍ಬೋರ್ಡ್ ಕಾಲೋನಿ, ಸಿಹಿನೀರು ಹೊಂಡ, ರೈಲ್ವೆ ಸ್ಟೇಷನ್, ಮಾರುತಿನಗರ, ವಿಜಯನಗರ, ಜೈನ್‍ಕಾಲೋನಿ, ಗುಮಾಸ್ತ ಕಾಲೋನಿ, ಟೀಚರ್ಸ್ ಕಾಲೋನಿ, ಚನ್ನಬಸಪ್ಪ ಕಾಂಪೌಂಡ್, ಜೋಗಿಮಟ್ಟಿ ರೋಡ್, ಬಿ.ಎಲ್.ಗೌಡ ಲೇಔಟ್ ಹೀಗೆ ನಗರದೆಲ್ಲೆಡೆ ಸುತ್ತಾಡಿ ಎಲ್ಲೆಲ್ಲಿ ಪಕ್ಷದ ಮತಗಳು ಜಾಸ್ತಿಯಿವೆಯೋ ಅಲ್ಲೆಲ್ಲಾ ಹೆಚ್ಚು ಸದಸ್ಯತ್ವ ನೊಂದಾಯಿಸಿದರೆ ನಲವತ್ತರಿಂದ ಐವತ್ತು ಸಾವಿರ ದಾಟಬಹುದು. ಅದಕ್ಕಾಗಿ ಒಂದೊಂದು ವಾರ್ಡ್‍ಗಳಲ್ಲಿ ತಂಡ ಕಟ್ಟಿಕೊಳ್ಳಿ ಎಂದು ಹೇಳಿದರು.
ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್, ಪ್ರಧಾನ ಕಾರ್ಯದರ್ಶಿ ಸಂಪತ್, ಯುವ ಮುಖಂಡ ಡಾ.ಸಿದ್ದಾರ್ಥ ಗುಂಡಾರ್ಪಿ ನಗರ ಮಂಡಲ ಅಧ್ಯಕ್ಷ ನವೀನ್, ಗ್ರಾಮಾಂತರ ಮಂಡಲ ಅಧ್ಯಕ್ಷ ಕಲ್ಲೇಶಯ್ಯ, ನಗರಸಭೆ ಸದಸ್ಯರುಗಳಾದ ಹೆಚ್.ಶ್ರೀನಿವಾಸ್, ಹರೀಶ್, ಯುವ ಮೋರ್ಚಾದ ರಾಮು, ವಕ್ತಾರ ನಾಗರಾಜ್‍ಬೇದ್ರೆ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶ್ರೀಮತಿ ಶೈಲಜಾರೆಡ್ಡಿ, ಬಸಮ್ಮ, ರಜಿನಿ, ಶಾಂತಮ್ಮ, ಲೀಲ ಇನ್ನು ಮುಂತಾದವರು ಸಭೆಯಲ್ಲಿ ಹಾಜರಿದ್ದರು.