in ,

ಇಂಜಿನಿಯರಿಂಗ್ ವಿದ್ಯಾರ್ಥಿ ಶರತ್  ಸ್ಮರಣಾರ್ಥ ರಕ್ತದಾನ ಶಿಬಿರ

suddione whatsapp group join

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಫೆ.10): ರಸ್ತೆ ಅಪಘಾತದಲ್ಲಿ ಮೃತಪಟ್ಟ ಇಂಜಿನಿಯರಿಂಗ್ ವಿದ್ಯಾರ್ಥಿ ಎಸ್.ಶರತ್‍ರವರ ಸ್ಮರಣಾರ್ಥವಾಗಿ ಅವರ ಜನ್ಮದಿನದಂದು ಶುಕ್ರವಾರ ಐ.ಎಂ.ಎ.ಹಾಲ್‍ನಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರಜಾಸೇವಾ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ, ರೋಟರಿ ಕ್ಲಬ್ ಚಿನ್ಮುಲಾದ್ರಿ, ಭಾರತೀಯ ವೈದ್ಯಕೀಯ ಸಂಘ ಹಾಗೂ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.

ಈ ರಕ್ತದಾನ ಶಿಬಿರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಂಗನಾಥ್, ರೋಟರಿ ಕ್ಲಬ್ ಚಿನ್ಮುಲಾದ್ರಿ ಅಧ್ಯಕ್ಷ ಈ.ಅರುಣ್‍ಕುಮಾರ್, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಕಾರ್ಯದರ್ಶಿ ಮಜಹರ್‍ವುಲ್ಲಾ, ನಾಗರೀಕ ಬಂದೂಕು ತರಬೇತಿ ಸಂಸ್ಥೆಯ ಮಹಮದ್ ಆಲಿ, ನರೇಂದ್ರರೆಡ್ಡಿ, ಎಸ್.ಜೆ.ಎಂ.ಚಿತ್ರಕಲಾ ಕಾಲೇಜಿನ ಪ್ರಾಂಶುಪಾಲರಾದ ಕಣ್ಮೇಶ್, ಸಮಾಜ ಕಲ್ಯಾಣ ಇಲಾಖೆಯ ಚನ್ನಬಸಪ್ಪ, ಅನುಸೂಯಮ್ಮ, ಹನುಮಂತೆಗೌಡ ಪೂಜಾರ್, ಭರತ್, ರೀನಾ ವೀರಭದ್ರಪ್ಪ, ಮೃತ ವಿದ್ಯಾರ್ಥಿಯ ಪೋಷಕರುಗಳಾದ ಶ್ರೀನಿವಾಸ್ ಮಳಲಿ, ಓಂಕಾರಮ್ಮ, ಜಾನಪದ ಹಾಡುಗಾರರಾದ ಹರೀಶ್, ಗಂಗಾಧರ್, ಹಿಮಂತ್‍ರಾಜ್ ಇವರುಗಳು ನುಡಿನಮನ ಗೀತೆಗಳನ್ನು ಹಾಡಿದರು. ಅಪಾರ ಸಂಖ್ಯೆಯ ಸ್ನೇಹಿತರು, ಹಿತೈಷಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಎಸ್.ಶರತ್ ಆತ್ಮಕ್ಕೆ ಚಿರಶಾಂತಿ ಕೋರಿದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಡಾನ್‍ಬೋಸ್ಕೋ ಪ್ರೌಢಶಾಲೆಯಲ್ಲಿ ಕಲಾ ಸಂಭ್ರಮವನ್ನು ಉದ್ಘಾಟಿಸಿದ ಅಂಬಣ್ಣ ಮಹಿಪತಿ

ಬಿಪಿಎಲ್ ಫಲಾನುಭವಿಗಳಿಗೆ ಮಹತ್ವದ ಮಾಹಿತಿ : ಆಯುಷ್ಮಾನ್ ಭಾರತ್ ಕಾರ್ಡ್ ಸೌಲಭ್ಯ ಪಡೆಯಲು ಡಿಹೆಚ್‍ಓ ಮನವಿ