ಬೆಂಗಳೂರು, ಡಿಸೆಂಬರ್ 5, 2025*: ಬೆಸ್ಕಾಂನ ವೈಟ್‌ಫೀಲ್ಡ್ ವಿಭಾಗ ಮತ್ತು ಇ-4 ಉಪವಿಭಾಗ ಕಚೇರಿಯ ನೂತನ ಕಟ್ಟಡವನ್ನು ಇಂಧನ ಸಚಿವ ಮಾನ್ಯ ಶ್ರೀ ಕೆ.ಜೆ.ಜಾರ್ಜ್ ಅವರು ಶುಕ್ರವಾರ ಉದ್ಘಾಟಿಸಿದರು.
ಕಚೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಇದುವರೆಗೆ ವೈಟ್‌ಫೀಲ್ಡ್ ವಿಭಾಗ ಹಾಗೂ ಇ-4 ಉಪವಿಭಾಗ ಕಚೇರಿ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಇದೀಗ ಇಮ್ಮಡಿಹಳ್ಲಿ ಮುಖ್ಯರಸ್ತೆಯ ಗಾಂಧೀಪುರದಲ್ಲಿ ನಿರ್ಮಾಣಗೊಂಡಿರುವ ಒಂದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದ್ದು ಗ್ರಾಹಕರಿಗೆ ಅನುಕೂಲಕರವಾಗಲಿದೆ,” ಎಂದರು.
ಈ ಜಾಗ ಪಡೆಯಲು ನೆರವಾದ ಶಾಸಕಿ ಮಂಜುಳಾ ಅರವಿಂದ್ ಲಿಂಬಾವಳಿ ಅವರಿಗೆ ಧನ್ಯವಾದ ಹೇಳಿದ ಸಚಿವರು, “ನಗರದ ಪ್ರಮುಖ ಪ್ರದೇಶವಾಗಿರುವ ವೈಟ್‌ಫೀಲ್ಡ್‌ನಲ್ಲಿ ವಿಭಾಗದಲ್ಲಿ 3,88,917 ಕ್ಕೂ ಹೆಚ್ಚಿನ ಗ್ರಾಹಕರಿದ್ದಾರೆ. ಸಾರ್ವಜನಿಕರಿಗೆ ನೂತನ ಕಚೇರಿ ಬೆಸ್ಕಾಂನ ಹತ್ತು ಹಲವು ಸೇವೆಗಳನ್ನು ತ್ವರಿತವಾಗಿ ಒದಗಿಸಲು ನೆರವಾಗಲಿದೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹದೇವಪುರ ಕ್ಷೇತ್ರ ಶಾಸಕಿ ಮಂಜುಳ ಅರವಿಂದ ಲಿಂಬಾವಳಿ, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಶಿವಶಂಕರ, ಬೆಸ್ಕಾಂ ತಾಂತ್ರಿಕ ನಿರ್ದೇಶಕ ಹೆಚ್.ಜೆ.ರಮೇಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಹೊಸ ಕಟ್ಟಡದ ವಿಶೇಷತೆ :
13,687 ಚದರ ಅಡಿಯ ನೆಲ ಅಂತಸ್ತು ಸೇರಿದಂತೆ ಮೂರು ಅಂತಸ್ತುಗಳ ಬೆಸ್ಕಾಂನ ವೈಟ್‌ಫೀಲ್ಡ್ ವಿಭಾಗ ಮತ್ತು ಇ-4 ಉಪವಿಭಾಗ ಉಪ ವಿಭಾಗ ಕಚೇರಿ ಕಟ್ಟಡವನ್ನು ಅಂದಾಜು 4.25 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ.
