ಇಂಧನ ಇಲಾಖೆ ನೌಕರರ ವೇತನ ಪರಿಷ್ಕರಣೆ ಭರವಸೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

0 Min Read

ಬೆಂಗಳೂರು, (ಮಾ.06) :  ಇಂಧನ ಇಲಾಖೆ ನೌಕರರ  ವೇತನ ಪರಿಷ್ಕರಣೆಯನ್ನು ಕುರಿತು ಆರ್ಥಿಕ ಇಲಾಖೆ ಮತ್ತು ಇಂಧನ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ . ಆದಷ್ಟೂ ಶೀಘ್ರ ಪರಿಷ್ಕರಣೆ ಮಾಡಿ ಬಹಳ ವರ್ಷದ ಬೇಡಿಕೆಯನ್ನು ನಮ್ಮ ಸರಕಾರ ಈಡೇರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಸೋಮವಾರ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ನಿರ್ಮಿಸಿರುವ ಹೊಸ ಕಚೇರಿ ಕಟ್ಟಡಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಹೊಸ ಕಟ್ಟಡಗಳ ಉದ್ಘಾಟನೆ ಜೊತೆಗೆ ಸಲಕರಣೆಗಳ ಸಾಗಾಣಿಕೆಗೆ ಬೆಸ್ಕಾಂ ಖರೀದಿಸಿರುವ 25 ಹೊಸ ಲಾರಿಗಳಿಗೆ ಮುಖ್ಯಮಂತ್ರಿಯವರು ಹಸಿರು ನಿಶಾನೆ ತೋರಿದರು.

Share This Article
Leave a Comment

Leave a Reply

Your email address will not be published. Required fields are marked *