ಚಿತ್ರದುರ್ಗ: 24. ನಗರದ ಶ್ರೀ ಸಿದ್ದರಾಮೇಶ್ವರ ವಸತಿ ಶಾಲೆಯಲ್ಲಿ ಶನಿವಾರ ರಾಜ್ಯ ಬಾಲ ಭವನ ಸೊಸೈಟಿ ಬೆಂಗಳೂರು, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಬಾಲ ಭವನ ಸಮಿತಿ ವತಿಯಿಂದ ವಾರಂತ್ಯ ಕಾರ್ಯಕ್ರಮವನ್ನ ಮಕ್ಕಳ ಬಾಯಿಗೆ ಹಾಲು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ವಕೀಲರು, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು ಹಾಗೂ ಉರಗ ತಜ್ಞರಾದ ಬಸವರಾಜ್ ಅವರು ಹಾವುಗಳ ಸಂತತಿ ಕಡಿಮೆಯಾಗುತ್ತದೆ ಅವುಗಳನ್ನು ಉಳಿಸ ಬೇಕಾಗಿದೆ ಅವುಗಳಲ್ಲಿ ಎಲ್ಲಾ ಹಾವುಗಳು ವಿಷಕಾರಿ ಗಳಾಗಿರುವುದಿಲ್ಲ ಹುತ್ತಕ್ಕೆ ಹಾಲನ್ನು ಹಾಕುವುದರಿಂದ ಅರಿಶಿಣ ಮತ್ತುಕುಂಕುಮ ನಲ್ಲಿರುವ ಕೆಮಿಕಲ್ ಇಂದ ಅವುಗಳಿಗೆ ನಂಜಾಗುತ್ತವೆ ಆದ್ದರಿಂದ ಹಾಲನ್ನು ಹಾಕಬಾರದು ಹಾಲನ್ನು ಕುಡಿಯುವುದಿಲ್ಲ. ಬದಲಾಗಿ ಮಕ್ಕಳಿಗೆ ಹಾಲನ್ನು ನೀಡಿ ಹಾವುಗಳ ಬಗ್ಗೆ ಮೂಢನಂಬಿಕೆ ಬೇಡ ತಿಳುವಳಿಕೆ ಬೇಕು. ಎಂದು ಜಾಗೃತಿಯನ್ನು ಮೂಡಿಸಿದರು ಹಿರಿಯರು ಅವುಗಳನ್ನು ದೈವ ಸ್ವರೂಪಿಯನ್ನು ಎಂದು ತಿಳಿಸಿರುವುದು ಅವುಗಳು ರೈತನ ಮಿತ್ರರಾಗಿ ಸಹಾಯ ಮಾಡುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಾಲ ಭವನ ಸಂಯೋಜಕ ಡಿ.ಶ್ರೀಕುಮಾರ್ ಮಾತನಾಡಿ ಮಕ್ಕಳಿಗೆ ಪರಿಸರದಲ್ಲಿರುವ ಸರಿಸೃಪಗಳ ಬಗ್ಗೆ ಪರಿಚಯ ಮಾಡುವ ನಿಟ್ಟಿ ನಲ್ಲಿ ಹಾವುಗಳ ಜೀವನಶೈಲಿ ಮತ್ತು ಪರಿಸರಕ್ಕಿರುವ ಸಂಬಂಧಗಳ ಬಗ್ಗೆ ತಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು
ಈ ಸಂದರ್ಭದಲ್ಲಿ ಸಿದ್ದರಾಮೇಶ್ವರ ಶಾಲೆಯ ಸಿಬ್ಬಂದಿ ಆನಂದ್ ಹಾಗೂ ಶಿಕ್ಷಕರು ಉಪಸ್ಥಿತಿಯಲ್ಲಿದ್ದರು.