ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ, ಸುದ್ದಿಒನ್ ನ್ಯೂಸ್. ಏ.20: ಚಿತ್ರದುರ್ಗ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆಯ ಕಡೆಯ ದಿನವಾದ ಏಪ್ರಿಲ್ 20 ರಂದು 56 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ತಿಳಿಸಿದ್ದಾರೆ.
ಮೊಳಕಾಲ್ಮೂರು ಮತಕ್ಷೇತ್ರದಲ್ಲಿ 10 ನಾಮಪತ್ರ ಸಲ್ಲಿಕೆಯಾಗಿವೆ. ಬಹುಜನ ಸಮಾಜ ಪಕ್ಷದ ಎಂ.ಒ.ಮಂಜುನಾಥ ಸ್ವಾಮಿ ನಾಯಕ ಮೂರು ನಾಮಪತ್ರ ಸೇರಿದಂತೆ, ಜ್ಯಾತ್ಯಾತೀತ ಜನತಾ ದಳ ಪಕ್ಷದ ವೀರಭದ್ರಪ್ಪ , ಆಮ್ ಆದ್ಮಿ ಪಕ್ಷದ ಹರೀಶ್ ನಾಯಕ ಎಸ್.ಟಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮಲ್ಲಿಕಾರ್ಜುನ ಟಿ, ಪಕ್ಷೇತರ ಅಭ್ಯರ್ಥಿಗಳಾಗಿ ವೈ.ಹೆಚ್.ಸೂರ್ಯ ಕುಮಾರ್, ಟಿ.ಶಶಿಕುಮಾರ್, ತಿಪ್ಪೇಸ್ವಾಮಿ.ಜಿ, ಹರೀಶ್ ಕುಮಾರ್ ಕೆ.ಪಿ ನಾಮಪತ್ರ ಸಲ್ಲಿಸಿದ್ದಾರೆ.
ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ 4 ನಾಮಪತ್ರಗಳು ಸಲ್ಲಿಕೆಯಾಗಿವೆ. ಭಾರತೀಯ ಜನತಾ ಪಕ್ಷದ ಅನಿಲ್ ಕುಮಾರ್.ಆರ್ ಹಾಗೂ ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ತಲಾ ಎರೆಡು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಚಿತ್ರದುರ್ಗ ಮತಕ್ಷೇತ್ರದಲ್ಲಿ 16 ನಾಮಪತ್ರ ಸಲ್ಲಿಕೆಯಾಗಿವೆ. ಭಾರತೀಯ ಜನತಾ ಪಕ್ಷದ ಜಿ.ಹೆಚ್.ತಿಪ್ಪಾರೆಡ್ಡಿ ಮೂರು ನಾಮಪತ್ರ, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ, ಕೆ.ಸಿ.ವಿರೇಂದ್ರ, ಇಂಡಿಯನ್ ಮೂವೆಂಟ್ ಪಕ್ಷದ ಮೆಹಬೂಬ್ ಪಾಷ್, ಕರ್ನಾಟಕ ಸ್ವಾಭಿಮಾನಿ ರೈತರ ಕಾರ್ಮಿಕ ಪಕ್ಷದ ಜಿ.ಸಿ.ನಾಗರಾಜ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಎಂ.ಟಿ.ಚಂದ್ರಣ್ಣ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳಾಗಿ ಸೌಭಾಗ್ಯ, ಪಿ.ಎಸ್.ಪುಟ್ಟಸ್ವಾಮಿ, ಡಾ.ಹೆಚ್.ಕೆ.ಎಸ್.ಸ್ವಾಮಿ, ಸುರೇಶ್ ಎನ್, ಮೋಹನ್ ಕುಮಾರ್ ಆರ್., ವಿ.ಎಸ್.ಭೂತರಾಜ, ಮಹಮದ್ ಜಬೀಬುಲ್ಲಾ, ಆರ್.ಗೋಪಿನಾಥ್, ಎಂ.ಎ.ಬಸವರಾಜು ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ.
ಹಿರಿಯೂರು ಮತಕ್ಷೇತ್ರದಲ್ಲಿ 5 ನಾಮಪತ್ರ ಸಲ್ಲಿಕೆಯಾಗಿವೆ. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದಿಂದ ಸುಧಾಕರ್.ಡಿ, ಜ್ಯಾತ್ಯಾತೀತ ಜನತಾ ದಳದಿಂದ ಎಂ.ರವೀಂದ್ರಪ್ಪ, ಉತ್ತಮ ಪ್ರಜಾಕೀಯ ಪಕ್ಷದಿಂದ ಆರ್.ಧನು, ಆಮ್ ಆದ್ಮಿ ಪಕ್ಷದಿಂದ ಕೆ.ಟಿ.ತಿಪ್ಪೇಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಎನ್.ಓ.ರಂಗಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ.
ಹೊಸದುರ್ಗ ಮತಕ್ಷೇತ್ರದಲ್ಲಿ 8 ನಾಮಪತ್ರ ಸಲ್ಲಿಕೆಯಾಗಿವೆ. ಬಹುಜನ ಸಮಾಜವಾದಿ ಪಕ್ಷದ ತಿಮ್ಮಪ್ಪ.ಕೆ, ಆಮ್ ಆದ್ಮಿ ಪಕ್ಷದ ಎನ್.ವಿ.ರಾಜು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ತನು ಸಿ ಯಾದವ್ ಸೇರಿದಂತೆ, ಪಕ್ಷೇತರ ಅಭ್ಯರ್ಥಿಗಳಾಗಿ ಗೂಳಿಹಟ್ಟಿ ಡಿ ಶೇಖರ್, ಬಿ.ಗೀತಾಂಜಲಿ, ಎ.ಎಸ್.ಮಂಜುನಾಥ, ಬಿ.ಶಿವರುದ್ರಪ್ಪ ಹಾಗೂ ಶೇಖರ್ ನಾಯ್ಕ್ ಎಂ.ಆರ್. ನಾಮಪತ್ರ ಸಲ್ಲಿಸಿದ್ದಾರೆ.
ಹೊಳಲ್ಕೆರೆ ಮತಕ್ಷೇತ್ರದಲ್ಲಿ 13 ನಾಮಪತ್ರ ಸಲ್ಲಿಕೆಯಾಗಿವೆ. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದಿಂದ ಹೆಚ್.ಆಂಜನೇಯ, ಸಮಾಜವಾದಿ ಪಕ್ಷದಿಂದ ಪಿ.ಎಸ್.ಜಯಪ್ಪ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಎಂ.ಎಸ್.ರಘುವೀರ ವರ್ಮ, ಬಹುಜನ ಸಮಾಜ ಪಕ್ಷದಿಂದ ಕೆ.ಎನ್.ದೊಡ್ಡಹೊಟ್ಟೆಪ್ಪ, ಜೈ ಮಹಾ ಭಾರತ ಪಕ್ಷದಿಂದ ಪಕ್ರಾಶ್.ಹೆಚ್, ಪಕ್ಷೇತರ ಅಭ್ಯರ್ಥಿಗಳಾಗಿ ಆಂಜನೇಯ, ಅಪ್ಪಾಜಿ ಎ ಚನ್ನಬಸವಣ್ಣನವರು, ಹನುಮಂತಪ್ಪ ಡಿ, ಮಂಜುನಾಥ ಸ್ವಾಮಿ ಟಿ, ಮಹೇಶ್ ಕುಮಾರ್.ಎಮ್.ಪಿ, ಟಿ.ತಿಪ್ಪೇಸ್ವಾಮಿ, ನಿರಂಜನ.ಎ.ಡಿ ಸೇರಿದಂತೆ ಹನುಮಂತಪ್ಪ.ಬಿ ನಾಮತ್ರ ಸಲ್ಲಿಸಿದ್ದಾರೆ.
ಏಪ್ರಿಲ್ 21ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 24ರಂದು ನಾಮಪತ್ರ ವಾಪಸ್ಸು ಪಡೆಯಲು ಕೊನೆಯ ದಿನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ತಿಳಿಸಿದ್ದಾರೆ.