ಕೋಟೆ ಜಾಗ ಕಬಳಿಕೆ : ಶ್ರೀನಿವಾಸ್, ಭಾಸ್ಕರ್ ವಿರುದ್ಧ ದೀಪು ಆರೋಪ

1 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 17 : ಮುಕ್ತಿಧಾಮ ಚಿತಾಗಾರದಿಂದ ಸ್ವಲ್ಪ ಮುಂದೆ ಕೋಟೆಗೆ ಸೇರಿದ ಒನ್ನೆ ಬಾಗಿಲಿನ ಜಾಗಕ್ಕೆ ನಗರಸಭೆ ಸದಸ್ಯರುಗಳಾದ ಶ್ರೀನಿವಾಸ್, ಭಾಸ್ಕರ್ ಇವರುಗಳು ಕಾಂಪೌಂಡ್ ಹಾಕಿ ಕಬಳಿಸಿದ್ದಾರೆಂದು ನಗರಸಭೆ ಸದಸ್ಯ ದೀಪು ಆಪಾದಿಸಿದರು.

 

ಕೋಟೆಗೆ ಸೇರಿದ ಜಾಗ ಒತ್ತುವರಿ ಮಾಡಿರುವ ಸ್ಥಳದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಾಲ್ಕು ಎಕರೆ ಕೋಟೆ ಜಾಗವನ್ನು ರಾಮಮೂರ್ತಿ ಹೆಸರಿಗೆ ಮಾಡಿಸಿಕೊಟ್ಟಿರುವ ಶ್ರೀನಿವಾಸ್ ಹಾಗೂ ಭಾಸ್ಕರ್ ಇವರುಗಳಿಗೆ ನಗರಸಭೆ ಜಾಗವನ್ನು ಕಬಳಿಸಲು ಹೊರಟಿದ್ದೇನೆಂದು ನನ್ನ ಮೇಲೆ ಆರೋಪಿಸುವ ನೈತಿಕತೆಯಿಲ್ಲ.

ಕೋಟೆ ಜಾಗ ಒತ್ತುವರಿ ಮಾಡಿಕೊಂಡಿರುವ ಇವರುಗಳ ವಿರುದ್ದ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಇಲಾಖೆಗೆ ದೂರು ಕೊಡುವುದರ ಜೊತೆ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದರು.

ಕೋಟೆ ಮುಂಭಾಗ ಬೃಹತ್ ಕಟ್ಟಡಗಳನ್ನು ಕಟ್ಟಿಕೊಂಡು ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಶ್ರೀನಿವಾಸ್ ಮತ್ತು ಭಾಸ್ಕರ್ ಇವರುಗಳು ನಗರಸಭೆಗೆ ಕಂದಾಯ ಪಾವತಿಸುತ್ತಿಲ್ಲ. ಕಟ್ಟಡ ಕಟ್ಟುವಾಗಲೂ ನಗರಸಭೆಯಿಂದ ಲೈಸೆನ್ಸ್ ಪಡೆದಿಲ್ಲ. ಅಧಿಕಾರ ದುರುಪಯೋಗಪಡಿಸಿಕೊಂಡು ಕೋಟೆ ಜಾಗವನ್ನು ಈಗ ಒತ್ತುವರಿ ಮಾಡಿದ್ದಾರೆ. ಪುರಾತತ್ವ ಇಲಾಖೆಯ ನಿಯಮ ಉಲ್ಲಂಘಿಸಿ ಕೋಟೆ ಎದುರುಗಡೆ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿಕೊಂಡಿದ್ದಾರೆ. ಕೋಟೆ ಜಾಗ ಒತ್ತುವರಿಯಾಗಿರುವುದನ್ನು ಉಳಿಸುವುದಕ್ಕಾಗಿ ಈಗಿನಿಂದ ನಮ್ಮ ಹೋರಾಟ ಶುರುವಾಗಲಿದೆ ಎಂದು ದೀಪು ತಮ್ಮ ಮೇಲೆ ಆಪಾದನೆ ಮಾಡಿರುವವರಿಗೆ ತಿರುಗೇಟು ನೀಡಿದರು. ನಗರಸಭೆ ಮಾಜಿ ಸದಸ್ಯ ವಿಜಯಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *