ಹುಬ್ಬಳ್ಳಿ; ಐದು ವರ್ಷದ ಬಾಲಕಿಯನ್ನು ಎತ್ತಿಕೊಂಡು ಹೋಗಿ, ಆ ಮಗುವಿನ ಮೇಲೆ ಕ್ರೂರತೆ ತೋರಿ, ಕೊಂದ ಬುಹಾರ ಮೂಲದ ಪಾಪಿಗೆ ಸರಿಯಾದ ಶಿಕ್ಷೆಯಾಗಿದೆ. ಎನ್ಕೌಂಟರ್ ಮಾಡಿದ್ದು, ಈಗ ಆ ಆರೋಪಿಯೂ ಸತ್ತಿದ್ದಾನೆ. ಎನ್ಕೌಂಟರ್ ಮಾಡಿದ ಸ್ಥಳ ಪರಿಶೀಲನೆ ನಡೆಸಿದ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು, ಆ ಬಗ್ಗೆ ಮಾತನಾಡಿದ್ದಾರೆ.
ಪೊಲೀಸ್ ಕಮಿಷನರ್ ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದು, ಈ ಸ್ಥಳ ಏನಿದೆ ಒಲ್ಡ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಇರುವಂಥದ್ದು. ರಾಯ್ನಾಳ್ ಬ್ರಿಡ್ಜ್ ಅಂಡರ್ ಪಾಸ್ ಬಳಿ ಇರುವಂಥದ್ದು. ನೀವೂ ಗಮನಿಸಿದರೆ ಇಲ್ಲಿ ಒಂದೆರಡು ಅಪಾರ್ಟ್ಮೆಂಟ್ ಗಳು ಇದಾವೆ. ಅವನನ್ನ ವಿಚಾರಣೆ ನಡೆಸಿದಾಗ ಈ ಅಪಾರ್ಟ್ಮೆಂಟ್ ಸುತ್ತಮುತ್ತ ಇರುವ ಬಿಲ್ಡಿಂಗ್ ನಲ್ಲಿ ವಾಸ ಇದ್ದೆ ಅಂತ ಹೇಳ್ತಾನೆ. ಆ ಕಾರಣಕ್ಕೆ ಈ ಬಿಲ್ಡಿಂಗ್ ಗಳಲ್ಲಿ ಏನಾದರೂ ಅವನ ಗುರುತು ಸಿಗಬಹುದು ಅಂತ ಕರೆದುಕೊಂಡು ಬಂದಿದ್ದೆವು. ಅಂದ್ರೆ ಆಧಾರ್ ಕಾರ್ಡ್, ಯಾವುದಾದರೂ ಐಡಿ ಕಾರ್ಡ್ ಗಳು.
ಆದರೆ ಆ ಸಂದರ್ಭದಲ್ಲಿ ಏಕಾಏಕಿ ತಪ್ಪಿಸಿಕೊಂಡು ಖಾಲಿ ಜಾಗ ಇರುವ ಕಡೆಗ ಓಡಿ ಹೋಗುವುದಕ್ಕೆ ಪ್ರಯತ್ನಿಸಿದ್ದಾನೆ. ಆಗ ನಮ್ಮ ಅಧಿಕಾರಿಗಳು ಏರ್ ಫೈಯರ್ ಮಾಡಿ ಹೆದರಿಸಿದ್ದಾರೆ. ಅದಕ್ಕು ನಿಲ್ಲದೆ ಓಡಿ ಹೋಗಿದ್ದಾನೆ. ಆಗ ಅವನ ಮೇಲೆ ಫೈಯರ್ ಮಾಡಿ, ವಶಕ್ಕೆ ಪಡೆದು ತಕ್ಷಣವೇ ಅವನನ್ನ ಆಸ್ಪತ್ರೆಗೂ ಶಿಫ್ಟ್ ಮಾಡಿದ್ದಾರೆ. ನಮ್ಮ ಸಬ್ ಇನ್ಸ್‌ಪೆಕ್ಟರ್ ಹಾಗೂ ಇನ್ಸ್‌ಪೆಕ್ಟರ್ ತಂಡ ಅವನಿಗೆ ಹೆಚ್ಚುವರಿ ವಿಚಾರಣೆಗಾಗಿ ಕರೆದುಕೊಂಡು ಬಂದಿದ್ದರು. ವಿಚಾರಣೆ ವೇಳೆ ಹೆಸರು, ಊರು ಅಷ್ಟೇ ಹೇಳಿದ್ದ. ಅವನ ಆಧಾರ್ ಕಾರ್ಡ್ ಏನಾದ್ರೂ ಸಿಗುತ್ತಾ ಎಂಬ ಕಾರಣಕ್ಕೆ ಆತನನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಹೋದಂತ ಸಂದರ್ಭದಲ್ಲಿ ಡೆತ್ ಅಂತ ಹೇಳಿದ್ದಾರೆ ಎಂದು ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.





