ಬೆಳಗಾವಿ: ವಾಯುವ್ಯ ಪದವೀಧರ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆಯ ಪ್ರಚಾರಕ್ಕಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಬೆಳಗಾವಿಗೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು, ಕೊಡಿ ವೋಟನ್ನ ಬಿಜೆಪಿಗೆ. ಹನುಮಂತ ನಿರಾಣಿನೋ ಯಾರೋ ಇದಾನ್ನಲ್ಲ ಅವನ ಮುಖ ಎಲ್ಲಾದರೂ ನೋಡಿದ್ದೀವಾ..? ಇಂಥವರಿಗೆ ವೋಟು ಕೊಟ್ಟರೆ ಏನಾಗುತ್ತೆ. ಇದನ್ನೆಲ ನಾನಯ ಈಗ ಯಾಕೆ ಪ್ರಸ್ತಾಪ ಮಾಡುತ್ತಾ ಇದ್ದೀನಿ ಅಂದ್ರೆ ನೀವೆಲ್ಲಾ ಶಿಕ್ಷಕರು ಎಂದಿದ್ದಾರೆ.
ದೇಶ ಉಳಿಬೇಕಲ್ಲಪ್ಪ.. ಕರ್ನಾಟಕದಲ್ಲಿ ಪ್ರತಿಯೊಬ್ಬರ ಮೇಲೆ 80 ಸಾವಿರ ರೂಪಾಯಿ ಸಾಲ ಇದೆ. ಇವರು ಬಂದ ಮೇಲೆ ಏನು ಮಾಡಿದ್ದಾರೆ. ನಿರುದ್ಯೋಗದ ಸಮಸ್ಯೆ ಎಷ್ಟಿದೆ. ನೀವು ಅದನ್ನು ಅರ್ಥ ಮಾಡಿಕೊಳ್ಳಬೇಕು. ಡಿಮಾನಿಟೈಸೇಷನ್ ಮಾಡುವ ಮುಂಚೆ, ಜಿಎಸ್ಟಿ ಹಾಕುವ ಮುಂಚೆ, ಕೊರೋನಾ ಬರುವುದಕ್ಕೂ ಮುಂಚೆ ದೇಶದಲ್ಲಿ 12 ಕೋಟಿ ಉದ್ಯೋಗ ಸೃಷ್ಟಿಯಾಗಿತ್ತು. ಈಗ ಎರಡೂವರೆ ಕೋಟಿಗೆ ಬಂದು ನಿಂತಿದ್ದೇವೆ.
ಮೋದಿಯವರು ಎಂಟು ವರ್ಷ ತುಂಬಿಸಿ, ಅವರ ಸರ್ಕಾರದ ಸಾಧನೆಗಳು ಅಂತೇಳಿ ದೊಡ್ಡ ಆಂದೋಲನ ಮಾಡಿದ್ದಾರೆ. ನೀವೆಲ್ಲಾ ಪತ್ರಿಕೆ ಓದಿರ್ತೀರಿ. ರಾಜ್ಯಕ್ಕೆ ಕೇಂದ್ರದಿಂದ 1 ಲಕ್ಷದ 29 ಸಾವಿರದ 766 ಕೋಟಿ ವಿವಿಧ ಯೋಜನೆಗೆ ಕೇಂದ್ರದಿಂದ ಕರ್ನಾಟಕಕ್ಕೆ ಬಂದಿದೆ ಎಂಬ ಜಾಹೀರಾತು ನೀಡಿದ್ದಾರೆ. ನಿಮಗೆ ಕರ್ನಾಟಕದಿಂದ ಕೇಂದ್ರ ಸರ್ಕಾರಕ್ಕೆ ಎಷ್ಟು ತೆರಿಗೆ ಹಣ ಹೋಗಿದೆ ಎಂಬುದು ಗೊತ್ತಿದೆಯಾ 19 ಲಕ್ಷ ಕೋಟಿ ರೂಪಾಯಿ ಟ್ಯಾಕ್ಸ್ ಮೂಲಕ ಕೇಂದ್ರಕ್ಕೆ ಹೋಗಿರುವುದು. ನಮ್ಮ ದುಡ್ಡು ನಮ್ಮ ಜನರ ದುಡ್ಡು ನಮಗೆ ತೆರಿಗೆ ಹಣ ಬಂದಿರುವ ಚಿಲ್ಲರೆ ಕೋಟಿ ಎಂದು ಕೇಂದ್ರ ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ.