ಬಿಗ್ ಬಾಸ್ ಮನೆಗೆ ಬಂದವರು ತಮ್ಮವರ ಸಂಪೂರ್ಣ ಸಂಪರ್ಕವನ್ನೇ ಕಳೆದುಕೊಳ್ಳುತ್ತಾರೆ. ಮನೆ, ಆಟ, ಊಟ ಇಷ್ಟೇ ಅವರ ಪ್ರಪಂಚವಾಗಿ ಬಿಡುತ್ತದೆ. ಈಗಾಗಲೇ 90 ದಿನಗಳನ್ನು ದಾಟಿ ಮುಂದೆ ಸಾಗುತ್ತಿದೆ ಬಿಗ್ ಬಾಸ್ ಶೋ. ಹೀಗಾಗಿ ಮನೆಯವರನ್ನೆಲ್ಲ ಮೂರು ತಿಂಗಳಿನಿಂದ ನೋಡದೆ ಇರುವ ಸ್ಪರ್ಧಿಗಳಿಗೆ ಮನೆಯವರ ಜೊತೆಗೆ ಒಂದಷ್ಟು ಸಮಯ ಕಾಲ ಕಳೆಯುವ ಅವಕಾಶ ಮಾಡಿಕೊಟ್ಟಿದೆ. ಈ ಮೂಲಕ ಸಾಕಷ್ಟು ಎಮೋಷನಲ್ ಸೀನ್ ಗಳು ಸೃಷ್ಟಿಯಾಗಿವೆ.
ಈಗಾಗಲೇ ಮನೆಗೆ ಬಂದು ಹೋದ ಅಪ್ಪನನ್ನು ಕಂಡು ಮಂಜು ಕಣ್ಣೀರಾಕಿದರೆ, ತಮ್ಮ ನನ್ನನ್ನು ಗುರುತೇ ಹಿಡಿಯುತ್ತಿಲ್ಲ ಎಂದು ಮೋಕ್ಷಿತಾ ನೊಂದುಕೊಂಡಿದ್ದಾರೆ. ಭವ್ಯಾ, ತ್ರಿವಿಕ್ರಂ ತಮ್ಮ ತಾಯಂದಿರನ್ನು ಕಂಡು ಖುಷಿಯಾಗಿದ್ದಾರೆ. ಇಂದು ಧನರಾಜ್ ಇಡೀ ಫ್ಯಾಮಿಲಿ ಬಿಗ್ ಬಾಸ್ ಮನೆಗೆ ಬಂದಿದೆ. ಅದರಲ್ಲೂ ಮಗಳನ್ನು ಕಂಡು ಧನರಾಜ್ ಇನ್ನಿಲ್ಲದ ಖುಷಿಪಟ್ಟಿದ್ದಾರೆ. ಯಾಕಂದ್ರೆ ಆಗಷ್ಟೇ ಮಗಳು ಹುಟ್ಟಿದ್ದಳು. ಆ ಫೀಲ್ ಮಾಡೋದಕ್ಕೆ ಆಗಿರಲಿಲ್ಲ. ಈಗ ಮನೆಯೊಳಗೆ ಮನೆಯವರೊಟ್ಟಿಗೆ ಮಗಳನ್ನು ಮುದ್ದಾಡಿದ್ದಾರೆ.
ಇನ್ನು ಚೈತ್ರಾಳನ್ನು ನೋಡಲು ಅವರ ತಾಯಿ, ತಂಗಿ ಬಂದಿದ್ದಾರೆ. ಈ ವೇಳೆ ಅವರ ತಾಯಿ ಬೆಸ್ಟ್ ಮಗಳು ಎಂಬ ಪದಕವನ್ನು ತಂದು ಮಗಳ ಕೊರಳಿಗೆ ಹಾಕಿದ್ದಾರೆ. ನೀವೆಲ್ಲ ಮಗಳನ್ನ ಕಳಪೆ ಎನ್ನಬಹುದು. ಆದರೆ ನಮ್ಮ ಮಗಳು ನಮಗೆ ಉತ್ತಮ ಎಂದಿದ್ದಾರೆ. ಈ ವೇಳೆ ತಂಗಿಯನ್ನು ಕುರಿತು ಮಾತನಾಡಿದ ಚೈತ್ರಾ, ಇವಳು ಹುಟ್ಟಿದಾಗ ನಮಗೆ ಹೆಚ್ಚು ಚಾಲೆಂಜ್ ಅನ್ನಿಸ್ತು. ಊರಿನ ಜನ ಅಪ್ಪ ಅಮ್ಮನಿಗೆ ಕೊಳ್ಳಿ ಇಡೋದಕ್ಕೂ ಮಗ ಇಲ್ಲ ಅಂದಿದ್ರು ಎಂದು ಕಣ್ಣೀರು ಹಾಕಿದ್ದಾರೆ.
ಬಿಗ್ ಬಾಸ್ ಮನೆಗೆ ಹನುಮಂತು ಅಪ್ಪ-ಅಮ್ಮ ಕೂಡ ಬಂದಿದ್ದಾರೆ. ಅದರಲ್ಲೂ ಬುತ್ತಿ ಹೊತ್ತು ಬಂದಿದ್ದಾರೆ. ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಮೂರ್ನಾಲ್ಕು ಥರದ ಚಟ್ನಿ ಪುಡಿ ತಂದು ಇಡೀ ಮನೆ ಮಂದಿಗೆ ಬಡಿಸಿದ್ದಾರೆ.



















