ದಾವಣಗೆರೆ: ಕಾಡಿನಿಂದ ನಾಡಿಗೆ ಆಹಾರ ಅರಸಿ ಬರುವ ಆನೆಗಳ ಸುದ್ದಿ ಆಗಾಗ ಆಗ್ತಾನೆ ಇರುತ್ತೆ. ನಾಡಿಗೆ ಬಂದಾಗ ಇಲ್ಲ ಬೆಳೆ ನಾಶವಾಗಿರುತ್ತೆ, ಇಲ್ಲ ಯಾರದ್ದಾದರೂ ಪ್ರಾಣಕ್ಕೆ ಕುತ್ತು ಬಂದಿರುತ್ತೆ. ಈಗ ದಾವಣಗೆರೆಯಲ್ಲೂ ಆನೆ ದಾಳಿಗೆ ಬಾಲಕಿಯೊಬ್ಬಳ ಬಲಿಯಾಗಿರುವ ಘಟನೆಯೊಂದು ವರದಿಯಾಗಿದೆ. ಬಾಲಕಿಯ ಸಾವಿನ ಜೊತೆಗೆ ಹಲವರನ್ನು ಗಂಭೀರವಾಗಿ ಗಾಯಗೊಳಿಸಿದೆ.
ಚನ್ನಗಿರಿ ತಾಲೂಕಿನ ಜಕಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆನೆಗಳ ಹಿಂಡು ಬಂದಿದ್ದು, ಬಾಲಕಿಯೊಬ್ಬಳ ಪ್ರಾಣವನ್ನೆ ತೆಗೆದಿದೆ. 16 ವರ್ಷದ ಕವನಾ ಆನೆ ತುಳಿತಕ್ಕೆ ಒಳಗಾಗಿ ಪ್ರಾಣ ಬಿಟ್ಟ ಬಾಲಕಿಯಾಗಿದ್ದಾಳೆ. ಅಷ್ಟೇ ಅಲ್ಲ ಹಲವರಿಗೆ ಆನೆಗಳು ಟಾರ್ಚರ್ ಮಾಡಿವೆ.
ಸೋಮ್ಲಾಪುರದಲ್ಲಿ ಅಮ್ಮ ಮಗಳ ಮೇಲೆ ದಾಳು ಮಾಡಿದೆ. ತಾಯಿಯನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದೆ. ಈ ವೇಳೆ ಮಂಜಮ್ಮ ಎಂಬುವವರ ತಾಳಿಯೂ ಕಳೆದೋಗಿದೆ. ಬೆಳಗಿನ ಜಾವದಲ್ಲಿ ತೋಟಕ್ಕೆ ತೆರಳಿದ್ದ ಮೂವರ ಮೇಲೆಯೂ ಆನೆ ದಾಳು ಮಾಡಿದೆ. ಈಗಾಗಲೇ ದಾಳಿ ಮಾಡಿದ ಆನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಎಲ್ಲಾ ರೀತಿಯಿಂದಾನು ಸಜ್ಜಾಗಿದೆ. ಪ್ರಯತ್ನವನ್ನು ಮಾಡುತ್ತಿದೆ.