ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜನ ಐದು ಗ್ಯಾರಂಟಿಗಳಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಆ ಐದು ಗ್ಯಾರಂಟಿಗಳು ಅದ್ಯಾವಾಗ ಜಾರಿಯಾಗುತ್ತೆ ಎಂಬುದರತ್ತ ಎಲ್ಲರ ಚಿತ್ತ ಹರಿದಿದೆ. ಸರ್ಕಾರ ಕೂಡ ಈ ಬಗ್ಗೆ ಚಿಂತನೆ ನಡೆಸಿ, ತೀರ್ಮಾನ ತೆಗೆದುಕೊಳ್ಳಲು ಸಭೆಗಳ ಮೇಲೆ ಸಭೆ ನಡೆಸುತ್ತಿದೆ.
ಇಂದು ನಿಗಧಿಯಾಗಿದ್ದ ಸಂಪುಟ ಸಭೆಗೂ ಮುನ್ನ ಸಚಿವರ ಜೊತೆಗೆ ಒಂದು ಸಭೆ ನಡೆಯಬೇಕಿತ್ತು. ಆದರೆ ಈ ಸಭೆ ಶುಕ್ರವಾರಕ್ಕೆ ಮುಂದೂಡಲಾಗಿದೆ. ಹುಬ್ಬಳ್ಳಿಗೆ ಹೋಗಿದ್ದ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಸಭೆಗೆ ಇರಲಿಲ್ಲ.
ಇನ್ನು ಸಭೆಗೆ ಹೋಗುವುದಕ್ಕೂ ಮುನ್ನ ಶಾಸಕ ಶಿವಲಿಂಗೇಗೌಡ ಈ ಬಗ್ಗೆ ಮಾತನಾಡಿದ್ದಾರೆ. “ಎಲ್ಲಾ ಗ್ಯಾರಂಟಿಗಳನ್ನು, ಅರ್ಹರಿಗೆ ಈ ಯೋಜನೆಗಳನ್ನು ತಲುಪಿಸುತ್ತೀವಿ ಎಂಬುದನ್ನು ಹೇಳಿದ್ದಾರೆ. ಎಲೆಕ್ಷನ್ ಸ್ಪೀಡ್ ನಲ್ಲಿ ಹೇಳಿದ್ದಾರೆ. ಆಯ್ತು ಅವ್ರು ಕೊಡುವ ತನಕ ತಡೆಯಬೇಕಲ್ವಾ. ಈಗ ಗೃಹಲಕ್ಷ್ಮೀ ಯೋಜನೆಯಲ್ಲಿ ಮನೆಯ ಯಜಮಾನಿಗೆ ಎರಡು ಸಾವಿರ ಹಣ ನಿಒಡಬೇಕು ಎಂಬುದಿದೆ. ಒಂದೇ ಮನೆಯಲ್ಲಿ ಅತ್ತೆ ಸೊಸೆ ಇರುತ್ತಾರೆ. ಯಾರಿಗೆ ಕೊಡೋದು. ಅದನ್ನೆಲ್ಲಾ ಚರ್ಚಿಸಿ ನೋಡಬೇಕು ಅಲ್ವಾ. ಅತ್ತೆ ಇದ್ದಾಗ ಅತ್ತೆಗೆ ಕೊಡಬೇಕು ಅಲ್ವಾ. ಎಲ್ಲಾ ಮಾಧ್ಯಮದಲ್ಲಿಯೇ ಹೇಳ್ತೀರಿ. ಐದು ಗ್ಯಾರಂಟಿಗಳನ್ನು ಹೇಳಿದೆ ಸರ್ಕಾರ ಅದೆಲ್ಲವನ್ನು ಸರ್ಕಾರ ಜಾರಿಗೆ ತರುತ್ತೆ ಎಂದಿದ್ದಾರೆ.