ಚಿತ್ರದುರ್ಗ, (ಜೂ.16) : ಎಸ್. ಆರ್. ಎಸ್ ಹೆರಿಟೇಜ್ ಶಾಲೆಯಲ್ಲಿ ಸಂಸತ್ ಮಾದರಿಯಲ್ಲಿ ಶಾಲಾ ಸಂಸತ್ ಚುನಾವಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಶಾಲಾ ಸಂಸತ್ತಿನಲ್ಲಿ ಒಟ್ಟು 8 ಸ್ಥಾನಗಳಿಗೆ ಸಾವತ್ರಿಕ ಚುನಾವಣೆ ಮಾದರಿಯಲ್ಲಿ ಮತದಾನ ನಡೆಯಿತು. ಇದಕ್ಕೂ ಮೊದಲು ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಯಿತು.
8 ಪ್ರತಿನಿಧಿಗಳ ಸ್ಥಾನಗಳಿಗೆ 16 ನಾಮಪತ್ರಗಳು ಸಲ್ಲಿಕೆಯಾಗಿದ್ದು ಮಕ್ಕಳಿಗೆ ಚುನಾವಣೆಯ ಅರಿವು ಮೂಡಿಸುವ ಪ್ರಯುಕ್ತ ಶಾಲಾ ಸಂಸತ್ ಚುನಾವಣಾ ಮಾದರಿಯಲ್ಲಿ ನಡೆಸಲಾಯಿತು. ಚುನಾವಣಾ ದಿನಾಂಕ ಘೋಷಣೆ ನಾಮಪತ್ರ ಸಲ್ಲಿಕೆಗೆ ಗಡವು, ಹಿಂಪಡೆಯುವಿಕೆಗೆ ಅವಕಾಶ, ಮತದಾನ, ಫಲಿತಾಂಶ ಘೋಷಣೆ ಹೀಗೆ ನಿಯಮಬದ್ಧವಾಗಿ ಚುನಾವಣೆ ನಡೆಸಲಾಗುತ್ತದೆ. ಬಳಿಕ ಮಂತ್ರಿಮಂಡಲ ರಚನೆ ಹಾಗೂ ಖಾತೆ ಹಂಚಿಕೆ ಜವಬ್ಧಾರಿ ಹಂಚಿಕೆ ಮಾಡಲಾಗುತ್ತದೆ.
ಶಾಲಾ ಸಂಸತ್ ಚುನಾವಣೆಯಲ್ಲಿ ಎಸ್. ಆರ್. ಎಸ್ ಶಿಕ್ಷಣ ಸಮೂಹ ಸಂಸ್ಧೆಯ ಅಧ್ಯಕ್ಷರಾದ ಬಿ. ಎ ಲಿಂಗಾರೆಡ್ಡಿಯವರು ಚುನಾವಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಬ್ಯಾಲೆಟ್ ಪೇಪರ್ ಮುಖಾಂತರ ತಮ್ಮ ಅಮೂಲ್ಯವಾದ ಮತ ಚಲಾಯಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಎಸ್. ಆರ್. ಎಸ್ ಶಿಕ್ಷಣ ಸಮೂಹ ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ.ರವಿ ಟಿ.ಎಸ್. ರವರು ತಮ್ಮ ಅಮೂಲ್ಯ ಮತ ಚಲಾಯಿಸಿದರು.
ನಂತರ ಶಾಲೆಯ ಪ್ರಾಂಶುಪಾಲರಾದ ಪ್ರಭಾಕರ್ ಎಂ. ಎಸ್. ರವರು ಮತ ಚಲಾಯಿಸಿ ಮಾತನಾಡಿ ಶಾಲಾ ಸಂಸತ್ ಚುನಾವಣೆ, ಚುನಾವಣೆ ಆಯೋಗ ನಡೆಸುವ ನೈಜ ಚುನಾವಣಾ ಮಾದರಿಯಲ್ಲಿ ನಡೆಸಲಾಯಿತು.
ಚುನಾವಣಾ ಆಯೋಗದ ನೀತಿ ನಿಯಮಗಳನ್ವಯ ನಡೆಯುತ್ತಿದ್ದು ಬಹಳ ವಿಶೇಷವೆನಿಸುತ್ತದೆ. ಶಾಲೆಗಳಲ್ಲಿ ವಿದ್ಯಾರ್ಥಿ ನಾಯಕರ ಆಯ್ಕೆ ಮತದಾನದ ಮೂಲಕ ಸಾಗಿದ್ದು ಮಕ್ಕಳಿಗೆ ಚಿಕ್ಕಂದಿನಿಂದಲೇ ಚುನಾವಣಾ ಮಜಲುಗಳನ್ನು ಅರಿಯಲು ನೆರೆವಾಗಿದೆ ಹಾಗೂ ದೇಶದ ರಾಜಕೀಯ ಹಾಗೂ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ತಿಳಿಯುವಲ್ಲಿ ಸಹಕಾರಿಯಾಗಿದೆ. ಎಂದು ಕಾರ್ಯಕ್ರಮ ಕುರಿತು ಮಾತನಾಡಿದರು.
ಶಾಲೆಯ 6ನೇತರಗತಿ ಯಿಂದ 10ನೇ ತರಗತಿಯ ವಿದ್ಯಾರ್ಥಿಗಳು ಮಾತ್ರ ತಮ್ಮ ಅಮೂಲ್ಯವಾದ ಮತ ಚಲಾಯಿಸಿದರು.
ಶಾಲೆಗಳಲ್ಲಿ ನಡೆದ ಚುನಾವಣೆಗಳ ಅನ್ವಯ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಖಾತೆಗಳ ಹಂಚಿಕೆ ಮಾಡಿ ಆಯಾ ವರ್ಷದ ಶಾಲಾ ಜವಾಬ್ದಾರಿ ವಹಿಸಲಾಗುತ್ತದೆ.
ಖಾತೆಗಳು:-ಪ್ರಧಾನಮಂತ್ರಿ, ಶಿಕ್ಷಣಮಂತ್ರಿ, ಸ್ವಚ್ಛತಾ ಮಂತ್ರಿ ಗ್ರಂಥಾಲಯ ಪಾಲಿನೆ, ರಕ್ಷಣಾ ಮಂತ್ರಿ ಆಹಾರ ಮಂತ್ರಿ ಹಿಗೆ ನಾನಾ ಖಾತೆಗಳನ್ನು ನೀಡಿ ಮಕ್ಕಳಿಗೆ ಜವಾಬ್ದಾರಿಯನ್ನು ನೀಡಲಾಗುತ್ತದೆ.
ಚುನಾವಣಾ ಪ್ರಕ್ರಿಯೆಯಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ತಮ್ಮ ಅಮೂಲ್ಯವಾದ ಮತ ಚಲಾಯಿಸಿದರು.