ಚಿತ್ರದುರ್ಗ, (ಫೆಬ್ರವರಿ.19) : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಹಾಗೂ ಜಿಲ್ಲಾ ಘಟಕಕ್ಕೆ 2022-2025 ರ ಅವಧಿಗೆ ಚುನಾವಣೆ ನಡೆಯುತ್ತಿದ್ದು ಚುನಾವಣಾ ಅಂತಿಮ ಕಣದಲ್ಲಿನ ಅಭ್ಯರ್ಥಿಗಳ ವಿವರವನ್ನು ಪ್ರಕಟಿಸಲಾಗಿದೆ ಎಂದು ಚುನಾವಣಾಧಿಕಾರಿ ಧನಂಜಯ ತಿಳಿಸಿದ್ದಾರೆ.
ಜಿಲ್ಲಾ ಘಟಕದ ಅಧ್ಯಕ್ಷರ ಸ್ಥಾನಕ್ಕೆ ದಿನೇಶ್ ಗೌಡಗೆರೆ, ನರೇನಹಳ್ಳಿ ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಎಸ್.ಸಿದ್ದರಾಜು, ಸಿ.ಹೆಂಜಾರಪ್ಪ, ಖಜಾಂಚಿಗೆ ಕುಮಾರಸ್ವಾಮಿ.ಡಿ, ಮೇಘಗಂಗಾಧರನಾಯ್ಕ, ರಾಜ್ಯ ಸಮಿತಿ ಸದಸ್ಯರ ಸ್ಥಾನಕ್ಕೆ ಹೆಚ್.ಲಕ್ಷ್ಮಣ್, ಎಂ.ಯೋಗೀಶ, ಟಿ.ತಿಪ್ಪೇಸ್ವಾಮಿ ಚುನಾವಣಾ ಕಣದಲ್ಲಿ ಉಳಿದಿದ್ದಾರೆ. ಈ ಸ್ಥಾನಗಳಿಗೆ ಮತದಾನವು ಪೆಭ್ರವರಿ 27 ರಂದು ನಡೆಯಲಿದೆ.
ಉಪಾಧ್ಯಕ್ಷರ ಮೂರು ಸ್ಥಾನಗಳಿಗೆ ಡಿ.ಈಶ್ವರಪ್ಪ, ತಿಪ್ಪೇಸ್ವಾಮಿ ನಾಕೀಕೆರೆ, ಸಿ.ಪಿ.ಮಾರುತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿ ಸ್ಥಾನಕ್ಕೆ ವೀರೇಶ್ ವಿ, ನಾಗರಾಜಕಟ್ಟೆ ಅವಿರೋಧವಾಗಿ ಆಯ್ಕೆಯಾಗಿರುವರು.
ಜಿಲ್ಲಾ ಕಾರ್ಯಕಾರಿ ಸಮಿತಿಗೆ 15 ಸ್ಥಾನಗಳಿದ್ದು ಪಿ.ಅಂಜಿನಪ್ಪ, ಜೆ.ತಿಮ್ಮಣ್ಣ, ಓ.ರಾಮಸ್ವಾಮಿ, ಎನ್.ಮಾರುತಿ, ನಾಗೇಶ್ ಬಿ.ಆರ್, ಎಂ.ರಾಜು, ಹೆಚ್.ತಿಪ್ಪೇಸ್ವಾಮಿ, ಬಿ.ಎಸ್.ಲಕ್ಷ್ಮಣ್, ನಾಗತಿಹಳ್ಳಿ ಮಂಜುನಾಥ್, ಮುತ್ತುಸ್ವಾಮಿ ಕೆ.ಎಂ, ಎಂ.ಎನ್.ಅಹೋಬಳಪತಿ, ಎಸ್.ಜೆ.ದ್ವಾರಕನಾಥ್, ಎಂ.ಹನೀಫ್, ಈರಣ್ಣ ಯಾದವ್, ಬಿ.ಎಸ್.ವಿನಾಯಕ ಅವಿರೋಧವಾಗಿ ಆಯ್ಕೆಯಾಗಿರುವರು.