ಬೆಂಗಳೂರು: ಇಂದು ಚುನಾವಣಾ ಆಯೋಗದಿಂದ ಸುದ್ದಿಗೋಷ್ಟಿ ನಡೆಯಲಿದೆ. ಇಂದೇ ಕರ್ನಾಟಕ ವಿಧಾನಸಭಾ ಚುನಾವಣಾ ದಿನಾಂಕ ಅನೌನ್ಸ್ ಆಗಲಿದೆ. ನೀತಿ ಸಂಹಿತೆ ಕೂಡ ಇಂದಿನಿಂದ ಜಾರಿಯಾಗಲಿದೆ.
ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿದ್ದು, ಕಳೆದ ಬಾರಿ 27 ಕ್ಕೆ ಘೋಷಣೆಯಾಗಿತ್ತು. 20ರ ನಂತರ ಯಾವಾಗ ಬೇಕಾದರೂ ಘೋಷಣೆಯಾಗಬಹುದು ಎಂಬ ನಿರೀಕ್ಷೆಯಿತ್ತು. ಅದರಂತೆ ಇಂದು ಘೋಷಣೆಯಾಗಲಿದೆ. ಇವತ್ತು ನೀತಿ ಸಂಹಿತೆ ಕೂಡ ಜಾರಿಯಾಗಲಿದೆ. ಎಲ್ಲಾ ಪಕ್ಷಗಳು ಇದನ್ನು ಅನುಸರಿಸಬೇಕು. ನಾವೂ ಚುನಾವಣೆಗೆ ಸಿದ್ಧರಾಗಿದ್ದೇವೆ. ನಾವೂ ಬಹುಮತದ ಮೂಲಕವೇ ಸರ್ಕಾರ ರಚನೆ ಮಾಡುತ್ತೇವೆ ಎಂದಿದ್ದಾರೆ.
ಈಗಾಗಲೇ ಎಲ್ಲಾ ಪಕ್ಷಗಳು ಚುನಾವಣೆಗೆ ಸಿದ್ಧತೆ ನಡೆಸಿವೆ. ಭರ್ಜರಿ ಪ್ರಚಾರಗಳು ಕೂಡ ನಡೆದಿವೆ. ಇನ್ನು ಹಲವು ಕಾರ್ಯಕ್ರಮಗಳಿಗೆ ಯೋಜನೆ ಹಾಕಿಕೊಂಡಿದ್ದರು. ಆದರೆ ಇಂದಿನಿಂದ ನೀತಿ ಸಂಹಿತೆ ಜಾರಿಯಾದ್ರೆ ಯಾವ ಕೆಲಸಗಳನ್ನು ಮಾಡುವಂಗಿಲ್ಲ.





GIPHY App Key not set. Please check settings