ನವದೆಹಲಿ: ಒಂದೊಂದೆ ರಾಜ್ಯದ ಚುನಾವಣೆಯ ದಿನಾಂಕ ಅನೌನ್ಸ್ ಆಗುತ್ತಿದೆ. ಇದೀಗ ಗುಜರಾತ್ ವಿಧಾನಸಭಾ ಚುನಾವಣೆ ಅನೌನ್ಸ್ ಆಗಿದ್ದು, ಎರಡು ಹಂತದಲ್ಲಿ ಮತದಾನ ನಡೆಸಲು ಪ್ಲ್ಯಾನ್ ಮಾಡಲಾಗಿದೆ.

ಡಿಸೆಂಬರ್ 1 ಮೊದಲ ಹಂತದ ಚುನಾವಣೆ ಡಿಸೆಂಬರ್ 5 ಎರಡನೇ ಹಂತದ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಇನ್ನು ನಾಮಪತ್ರ ಸಲ್ಲಿಕೆಗೆ ನವೆಂಬರ್ 14 ಕಡೆಯ ದಿನಾಂಕವಾಗಿದೆ. ನಾಮಪತ್ರ ಪರಿಶಿಲನೆಯನ್ನು ನವೆಂಬರ್ 15ರಂದು ನಡೆಸಲಾಗುತ್ತದೆ. ನವೆಂಬರ್ 17ರ ಒಳಗೆ ನಾಮಪತ್ರ ವಾಪಾಸ್ ಪಡೆಯಬಹುದಾಗಿದೆ. ಇದು ಮೊದಲ ಹಂತದ ಚುನಾವಣೆಗೆ ಸಂಬಂಧಿಸಿದ್ದಾಗಿದೆ.

ಇನ್ನು ಎರಡನೇ ಹಂತದ ಚುನಾವಣೆ ಡಿಸೆಂಬರ್ 5 ರಂದು ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ನವೆಂಬರ್ 17 ಕೊನೆಯ ದಿನವಾಗಿದೆ. ನವೆಂಬರ್ 18 ನಾಮಪತ್ರ ಪರಿಶೀಲನೆ ಮಾಡಲಾಗುತ್ತದೆ. ನವೆಂಬರ್ 21ರ ಒಳಗೆ ನಾಮಪತ್ರ ವಾಪಾಸ್ ಪಡೆಯಬಹುದಾಗಿದೆ. ಫಲಿತಾಂಶ ಡಿಸೆಂಬರ್ 8ರಂದು ಹೊರ ಬೀಳಲಿದೆ.

