ರಾಯಚೂರು: ಮಾಜಿ ಸಿಎಂ ವೀರಪ್ಪ ಮೋಯ್ಲಿ ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಗೆ ಇತಿಹಾಸವೂ ಇಲ್ಲ, ನಾಯಕತ್ವವೂ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಗೆ ಕದಿಯುವ ರುಚಿ ಹತ್ತಿದೆ. ಬಿಜೆಪಿ ಕಳೆದ ಎಂಟು ವರ್ಷದಿಂದ ಕದೊಯುವ ಕೆಲಸವನ್ನೇ ಮಾಡಿಕೊಂಡು ಬಂದಿದೆ. ಮಣಿಪುರ, ಮಹಾರಾಷ್ಟ್ರ, ಮಧ್ಯಪ್ರದೇಶ, ಗೋವಾದಲ್ಲೂ ಬಿಜೆಪಿ ಸರ್ಕಾರವನ್ನು ಕಸಿದುಕೊಂಡಿದೆ. ಬಿಜೆಪಿಗೆ ಯಾವ ಪರಂಪರೆಯೂ ಇಲ್ಲ. ಜಾತೀಯತೆ, ಮತೀಯತೆ ಅಷ್ಟೇ ಬಿಜೆಪಿಗೆ ಇರುವುದು. ಅದಕ್ಕಾಗಿಯೇ ಬೆರೆ ಬೇರೆ ಸ್ವಾತಂತ್ರ್ಯಗಾರರ ಹೆಸರನ್ನು ಬಳಸುತ್ತಿದೆ. ಸರ್ದಾರ್ ವಲ್ಲಭಬಾಯ್ ಬಗ್ಗೆ ಕ್ಲೇಮ್ ಮಾಡಿದ್ರು, ಕಲ್ಯಾಣ ಕರ್ನಾಟಕ ನಮ್ಮಿಂದ ಆಯ್ತು ಅಂದ್ರು.ಗಈಗ ಸುಭಾಶ್ ಚಂದ್ರ ಬೋಸ್ ಹೆಸರು ತಂದಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇನ್ನು ಬಿಜೆಪಿ ಬಗ್ಗೆ ವಾಗ್ದಾಳಿ ಮುಂದುವರೆಸಿ, ಕಸಿಯುವ ಕೆಲಸ ಪಶ್ಚಿಮ ಬಂಗಾಳದಲ್ಲೂ ಶುರು ಮಾಡಿದ್ದರು. ಅಲ್ಲಿ ಆಗಲಿಲ್ಲ. ಇದು ಇಲ್ಲಿಗೆ ನಿಲ್ಲುತ್ತದೆ. ಇನ್ನು ಯಶಸ್ವಿಯಾಗುವುದಿಲ್ಲ. ಬಿಜೆಪಿಯಿಂದ ಜನರಿಗೆ ಸಾಮಾಜಿಕ, ಆರ್ಥಿಕ ನ್ಯಾಯ ಸಿಗುತ್ತಿಲ್ಲ. ಇದು ಜನರಿಗೂ ಅರ್ಥವಾಗಿದೆ ಎಂದಿದ್ದಾರೆ.