ಬೆಂಗಳೂರು: 2019 ರಿಂದ ಎರಡು ವರ್ಷಗಳ ಕಾಲ ಯಾವುದೇ ಹಬ್ಬವನ್ನಾಗಲೀ, ಆಚರಣೆಯನ್ನಾಗಲೀ ಮಾಡಿರಲಿಲ್ಲ. ಕೊರೊನಾ ಎಂಬ ಕರಿಛಾಯೆ ಎಲ್ಲದರ ಮೇಲೆ ತನ್ನ ಭೀಕರ ನೆರಳನ್ನು ಬಿಟ್ಟು, ಎಲ್ಲಾ ಸಡಗರ-ಸಂಭ್ರಮಕ್ಕೂ ಕಡಿವಾಣ ಹಾಕಿತ್ತು. ಹಾಗೋ ಹೀಗೋ ಕಳೆದ ಒಂದು ವರ್ಷದಿಂದ ಎಲ್ಲರ ಜೀವನ ಸಹಜ ಸ್ಥಿತಿಗೆ ಮರಳಿತ್ತು. ಮತ್ತೆ ಕೊರೊನಾ ಆತಂಕವನ್ನು ತಂದೊಡ್ಡಿದೆ.
ಹೊಸ ವರ್ಷಾಚರಣೆಯನ್ನು ಅದ್ದೂರಿಯಾಗಿ ಆಚರಿಸುವುದಕ್ಕೆ ಪ್ಲ್ಯಾನ್ ನಡೆದಿದ್ದಾಗಲೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಸರ್ಕಾರದಿಂದ ಹೊಸ ಮಾರ್ಗಸೂಚಿ ಕೂಡ ಬಂದಿದೆ. ಕೋವಿಡ್ ನಿಯಂತ್ರಣಕ್ಕೆಂದು ರೂಪಿಸಿರುವ ತಾಂತ್ರಿಕಾ ಸಲಾಹ ಸಮಿತಿಯೊಂದಿಗೆ ನಿನ್ನೆ ಸಿಎಂ ಸಭೆ ನಡೆಸಿದ್ದಾರೆ. ಬೆಂಗಳೂರಿಗೆ ಪ್ರತ್ಯೇಕ ಮಾರ್ಗಸೂಚಿ ನೀಡಿದ್ದಾರೆ. ಜೊತೆಗೆ ಆತಂಕ ಪಡುವ ಅಗತ್ಯವೂ ಇಲ್ಲ ಎಂದಿದ್ದಾರೆ.
ಯಾಕಂದ್ರೆ ಈಗಾಗಲೇ ಬಹುತೇಕ ಭಾರತಿಯರು ಲಸಿಕೆಯನ್ನು ಪಡೆದಿದ್ದಾರೆ. ಜೊತೆಗೆ ನೈಸರ್ಗಿಕವಾಗಿಯೇ ಒಂದಷ್ಟು ಎನರ್ಜಿ ಸಿಗಲಿದೆ. ಹೀಗಾಗಿ ಕೊರೊನಾ ಅಷ್ಟಾಗಿ ಪರಿಣಾಮ ಬೀರಲ್ಲ ಎಂಬುದು ಸಜ್ಞರ ಅಭಿಪ್ರಾಯವಾಗಿದೆ ಎನ್ನಲಾಗಿದೆ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಕೊಲವೊಂದಿಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಲು ಸೂಚನೆ ನೀಡಲಾಗಿದೆ. ಹಬ್ಬ, ಹರಿದಿನ, ಆಚರಣೆಗಳಲ್ಲಿ ಅನುಸರಿಸಬೇಕಾದ ಕೆಲವೊಂದು ನಿಯಮಗಳನ್ನು ಈಗಾಗಲೇ ತಾಂತಿಕ ಸಲಹಾ ಸಮಿತಿ ಸರ್ಕಾರಕ್ಕೆ ನೀಡಿದೆ. ಜೊತೆಗೆ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಎಂದು ತಿಳಿಸಲಾಗಿದೆ.