ಆಮೇಗತಿಯಲ್ಲಿ ಸಾಗ್ತಿದ್ದ ಜಾತಿಗಣತಿಗೆ ವೇಗ ಹೆಚ್ಚಿಸುವ ಪ್ರಯತ್ನ : ಸಿಎಂ ಖಡಕ್ ಸಭೆ ಹೇಗಿತ್ತು..?

1 Min Read

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರದ ಬಹು ನಿರೀಕ್ಷಿತ ಜಾತಿಗಣತಿ ಸರ್ವೇ ಆರಂಭವಾಗಿದೆ. ಈ ಸರ್ವೇಗೆ ಕೇವಲ 16 ದಿನಗಳನ್ನು ಮಾತ್ರ ನಿಗಧಿ ಮಾಡಲಾಗಿದೆ. ಆದರೆ ಅಂದುಕೊಂಡ ವೇಗದಲ್ಲಿ ಸರ್ವೇ ನಡೆಯುತ್ತಿಲ್ಲ. ಹೀಗಾಗಿ ಇಂದು ಸಿದ್ದರಾಮಯ್ಯ ಸಭೆ ನಡೆಸಿ ಎಲ್ಲರಿಗೂ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸಚಿವರು, ಜಿಲ್ಲಾಧಿಕಾರಿಗಳು, ಸಿಇಓಗಳ ಜೊತೆಗೆ ಸಭೆ ನಡೆಸಿದ್ದಾರೆ. ಏಳು ಕೋಟಿ ಜನರ ಸಮೀಕ್ಷೆ ನಡೆಯುತ್ತಿದೆ. ನಾಲ್ಕು ದಿನಗಳಿಂದ ತಾಂತ್ರಿಕ ಸಮಸ್ಯೆಯಿಂದ ಸರ್ವೇ ಕಾರ್ಯ ಜುಂಠಿತವಾಗಿದರ. ತಾಂತ್ರಿಕ ಸಮಸ್ಯೆಗಳು 90% ಪರಿಹಾರ ಆಗಿವೆ ಅಂತ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಉಳಿದ ಸಮಸ್ಯೆಗಳಿಗೆ ಇವತ್ತೆ ಪರಿಹಾರ ಸಿಗಲಿದೆ. ತೊಡಕುಗಳನ್ನು ಕೂಡಲೇ ನಿವಾರಣೆ ಮಾಡಬೇಕು. ಇವತ್ತಿನಿಂದ ಕೆಲಸ ಚುರುಕಾಗಲಿದೆ. ನಿರೀಕ್ಷೆಗೆ ಅನುಗುಣವಾಗಿ ಸರ್ವೇ ಕೆಲಸ ಆಗಲಿದೆ. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರ ಒಳಗೆ ಸರ್ವೇ ಕೆಲಸ ಮುಗಿಸಬೇಕು ಎಂದು ತೀರ್ಮಾನ ಮಾಡಿದ್ದೇವೆ.

ಈ ಬಗ್ಗೆ ಹಿಂದುಳಿದ ಆಯೋಗಕ್ಕೂ ಸೂಚಿಸಿದ್ದೇನೆ. ನಾಲ್ಕು ದಿನ ಸರ್ವೆ ಹೆಚ್ಚು ಆಗಿಲ್ಲ, ಉಳಿದ ದಿನಗಳಲ್ಲಿ ಕವರ್ ಮಾಡುವ ಕೆಲಸ ಆಗಬೇಕು. ಪ್ರತಿ ದಿನ 10% ಕುಟುಂಬಗಳ ಸರ್ವೆ ಆಗಬೇಕು. ಇದಕ್ಕೆ ಎಲ್ಲಾ ಜಿಲ್ಲಾಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಶಿಕ್ಷಕರು ತಪ್ಪು ಕಲ್ಪನೆಯಿಂದ ತಿರಸ್ಕರಿಸುತ್ತಿದ್ದರು. ಎಲ್ಲರೂ ಒಪ್ಪಿ ಇವತ್ತಿನಿಂದ ಸರ್ವೇ ಕೆಲಸ ಪೂರ್ಣ ಆಗಿದೆ. ಇದು ಸರ್ಕಾರದ ಕೆಲಸ, ಸರ್ಕಾರ ಸರ್ವೆ ಮಾಡಿಸ್ತಿದೆ. ಗಂಭೀರವಾಗಿ ಪರಿಗಣಿಸುವಂತೆ ಡಿಸಿ, ಸಿಇಓಗಳಿಗೆ ಸೂಚನೆ ಕೊಟ್ಟಿದ್ದೇನೆ. ಪ್ರತಿದಿನ ಪ್ರಗತಿ ಪರಿಶೀಲನೆ ಸಭೆ ನಡೆಸಬೇಕು ಎಂದು ಸಭೆಗೆ ಹಾಜರಿದ್ದವರಿಗೆ ಸೂಚನೆ ನೀಡಿದ್ದಾರೆ.

Share This Article
Enable Notifications OK No thanks