15 ನೇ ಆವೃತ್ತಿಯ ಐಪಿಎಲ್ ಮ್ಯಾಚ್ ಗೆ ಕ್ಷಣಗಣನೆ ಶುರುವಾಗಿದೆ. ತಮ್ಮಿಷ್ಟದ ಪಂದ್ಯಗಳನ್ನ ನೋಡಲು ಫ್ಯಾನ್ಸ್ ಎಕ್ಸೈಟ್ ಆಗಿದ್ದಾರೆ. ಹಾಗೇ ತಮ್ಮಿಷ್ಟದ ಟೀಂ ಸಪೋರ್ಟ್ ಗೂ ಹಿಂದೆ ಬಿದ್ದಿಲ್ಲ. ಪ್ರತಿ ಸಲ ಹೆಚ್ಚು ಸೌಂಡ್ ಮಾಡೋದು ಆರ್ ಸಿ ಬಿ ಫ್ಯಾನ್ಸ್ ಗಳೇ. ಪ್ರತಿಸಲ ಈ ಸಲ ಕಪ್ ನಮ್ದೆ ಎಂದಾಗಲೂ ಅದ್ಯಾಕೋ ಆರ್ಸಿಬಿ ಟೀಂ ಮಾತ್ರ ಅಭಿಮಾನಿಗಳ ಆಸೆಯನ್ನ ಈಡೇರಿಸಿಲ್ಲ. ಆದ್ರೆ ಈ ಬಾರಿ ಮಾತ್ರ ಕಪ್ ನಮ್ದೇ ಆಗುತ್ತೆ ಅನ್ನೋ ಗಾಢವಾದ ನಂಬಿಕೆ ಹುಟ್ಟಿಕೊಂಡಿದೆ.
ಪ್ರತಿಸಲ ಆರ್ಸಿಬಿ ಫ್ಯಾನ್ಸ್ ಮಾತ್ರ ಈ ಬಗ್ಗೆ ಕೂಗಿ ಕೂಗಿ ಹೇಳ್ತಾ ಇದ್ರು. ಆದ್ರೆ ಈ ಸಲ ಫ್ರಾಂಚೈಸಿ ಮಾಲೀಕರೇ ಹೇಳ್ತಿದ್ದಾರೆ ಅಂದ್ರೆ ಅರ್ಥ ಮಾಡ್ಕೊಳಿ. ಮ್ಯಾಚ್ ಹೇಗಿರಬೇಡ. ಅದಕ್ಕೆ ಕಾರಣವೂ ಹಲವಿದೆ. ಈ ಬಾರಿ ಆರ್ಸಿಬಿ 3+1 ಫಾರ್ಮೂಲ ಉಪಯೋಗಕ್ಕೆ ನಿಂತಿದೆ. ಅದೇನಂದ್ರೆ.
ವಿರಾಟ್ ಕೊಹ್ಲಿ ಈ ಬಾರಿ ನಾಯಕತ್ವದ ಹೊರೆಯಿಂದ ಕೆಳಗಿಳಿದಿದ್ದಾರೆ. ಹೀಗಾಗಿ ಒತ್ತಡ ಕಡಿಮೆ ಇರುತ್ತೆ. ಆಟದ ಕಡೆ ಹೆಚ್ಚು ಗಮನ ಹರಿಸುತ್ತಾರೆ. ಜೊತೆಗೆ ಇತ್ತೀಚೆಗೆ ನಡೆದ ಕೆಲವೊಂದು ಘಟನೆಗಳು ಅವರಿಗೆ ಬೇಸರವನ್ನು ತರಿಸಿರುವುದರಿಂದ ಈ ಬಾರಿ ಆಟದಲ್ಲೇ ಅವರ ಸಾಮರ್ಥ್ಯ ತೋರಿಸಲಿದ್ದಾರೆ. ಹೀಗಾಗಿ ಹೆಚ್ಚು ಲಾಭ ಸಿಗುವ ನಿರೀಕ್ಷೆ ಇದೆ.
ಇನ್ನು ಈ ಬಾರಿ ಎಬಿಡಿ ತಂಡದಲ್ಲಿ ಇರೋಲ್ಲ. ಇದೊಂದು ಆತಂಕವೂ ಸರಿ. ಆದರೂ ಅವರ ಸ್ಥಾನವನ್ನು ಮ್ಯಾಕ್ಸ್ ವೆಲ್ ತುಂಬ್ತಾರೆ ಅನ್ನೊ ನಂಬಿಕೆ ಫ್ರಾಂಚೈಸಿಗಳಲ್ಲಿದೆ. ಒಟ್ಟಾರೆ ಈ ಬಾರಿ ಕಪ್ ನಮ್ದೆ ಅನ್ನೊದನ್ನಯ ಇನ್ನು ಗಟ್ಟಿಯಾಗಿ ಹೇಳಲು ರೆಡಿಯಾಗಿದ್ದಾರೆ. ಫ್ರಾಂಚೈಸಿಗಳ ಈ ಜೋಶ್ ಅಭಿಮಾನಿಗಳಿಗೆ ಮತ್ತಷ್ಟು ಕ್ರೇಜ್ ಕೊಟ್ಟಿದೆ.