ಶಿಕ್ಷಣ ಎನ್ನುವುದು ಓದು, ಬರಹಕ್ಕಷ್ಟೆ ಸೀಮಿತವಾಗದೆ ಪ್ರತಿಭೆಗಳನ್ನು ಅನಾವರಣಗೊಳಿಸುವ ಕೆಲಸವಾಗಬೇಕು : BEO ಎಸ್.ನಾಗಭೂಷಣ್

1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.11  : ಪ್ರತಿ ಮಗುವಿನಲ್ಲಿಯೂ ಒಂದಲ್ಲ ಒಂದು ರೀತಿಯ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಹೊರ ತರುವುದಕ್ಕಾಗಿ ಪ್ರತಿ ವರ್ಷವೂ ಶಾಲಾ ಹಂತದಲ್ಲಿ ಪ್ರತಿಭಾ ಕಾರಂಜಿ/ಕಲೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ತಿಳಿಸಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಗುರುಭವನದ ಎದುರಿನಲ್ಲಿರುವ ಸಿ.ಆರ್.ಸಿ.ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ 2023-24 ನೇ ಸಾಲಿನ ಚಿತ್ರದುರ್ಗ ದಕ್ಷಿಣ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ/ಕಲೋತ್ಸವ ಉದ್ಗಾಟಿಸಿ ಮಾತನಾಡಿದರು.

ಮಗುವಿನಲ್ಲಿರುವ ಕಲೆ, ಸಂಗೀತ, ನೃತ್ಯ, ಸಾಂಸ್ಕøತಿಕ ಕೌಶಲ್ಯಗಳನ್ನು ಹೊರತರುವುದಕ್ಕಾಗಿ ನಡೆಸುವ ಪ್ರತಿಭಾ ಕಾರಂಜಿ/ಕಲೋತ್ಸವ ಶಾಲಾ ಹಂತದಿಂದ ರಾಜ್ಯ ಮಟ್ಟದವರೆಗೂ ನಡೆಯಲಿದೆ.

ಶಿಕ್ಷಣ ಎನ್ನುವುದು ಓದು, ಬರಹಕ್ಕಷ್ಠೆ ಸೀಮಿತವಾಗುವ ಬದಲು ಇಂತಹ ಕಾರ್ಯಕ್ರಮಗಳ ಮೂಲಕ ಪ್ರತಿಭೆಗಳನ್ನು ಅನಾವರಣೆಗೊಳಿಸುವ ಕೆಲಸವಾಗಬೇಕು. ತೀರ್ಪುಗಾರರು ಉತ್ತಮವಾದ ತೀರ್ಪುಗಳನ್ನು ನೀಡಿ ಮಕ್ಕಳನ್ನು ಪ್ರೋತ್ಸಾಹಿಸಬೇಕು. ಸೋಲು-ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪಿ.ಪ್ರಕಾಶ್‍ಮೂರ್ತಿ ಮಾತನಾಡಿ ಶಾಲೆಯಲ್ಲಿ ಶಿಕ್ಷಕರುಗಳಿಗೆ ಹೊರೆಯಾಗುತ್ತಿರುವುದು ಸ್ಪರ್ಧಾತ್ಮಕ ಜಗತ್ತಿನಲ್ಲಿ ಅನಿವಾರ್ಯ. ಸ್ವಾರ್ಥಕ್ಕಾಗಿ ಬದುಕುವ ಬದಲು ಸಮಾಜಕ್ಕಾಗಿ ಬದುಕಿದವರು ಮರಣದ ನಂತರವೂ ನೆನಪಿನಲ್ಲಿ ಉಳಿಯುತ್ತಾರೆ. ಸೇವೆ ಮಾಡಲು ಜಾತಿ ಅಡ್ಡಿಯಾಗಬಾರದು. ಶಿಕ್ಷಕರು ಕೇವಲ ವೇತನಕ್ಕಾಗಿ ಕೆಲಸ ಮಾಡುವುದಕ್ಕಿಂತ ಜವಾಬ್ದಾರಿಯನ್ನರಿತು ಸೇವೆ ಸಲ್ಲಿಸಬೇಕು ಎಂದರು.

ಇ.ಸಿ.ಓ.ರವೀಂದ್ರ, ಕರಿಯಪ್ಪ, ಸಿ.ಆರ್.ಪಿ. ಓ.ಶ್ವೇತ, ಮುಖ್ಯ ಶಿಕ್ಷಕರುಗಳಾದ ವಸಂತಕುಮಾರ್, ಗಣಪತಿಭಟ್, ಎಸ್.ಡಿ.ಎಂ.ಸಿ.ಅಧ್ಯಕ್ಷೆ ಶ್ರುತಿ ವೇದಿಕೆಯಲ್ಲಿದ್ದರು.

ಶಿಕ್ಷಕಿ ವಸಂತಲಕ್ಷ್ಮಿ ಪ್ರಾರ್ಥಿಸಿದರು. ಮುಖ್ಯ ಶಿಕ್ಷಕಿ ಸ್ವಾಗತಿಸಿದರು. ಶಿಕ್ಷಕ ಸಂತೋಷ್‍ಕುಮಾರ್ ಕೆ.ಟಿ. ವಂದಿಸಿದರು.

Share This Article
Leave a Comment

Leave a Reply

Your email address will not be published. Required fields are marked *