Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಸಂವಿಧಾನ ಮತ್ತು ಕಾನೂನು ತಿಳಿಯಲು ಶಿಕ್ಷಣವೇ ಮೂಲ ಆಯುಧ : ಸುಖಪುತ್ರ

---Advertisement---

ಸುದ್ದಿಒನ್, ಜಗಳೂರು, ಜನವರಿ : ನಾವೆಲ್ಲ ಹಳ್ಳಿಗಾಡಿನ ಜನರು. ನಮಗೆ ಬೇಸಾಯ ಮತ್ತು ದುಡಿಮೆಯೇ ಮುಖ್ಯ ಕೆಲಸವಾಗಿರುತ್ತದೆ. ಮನೆ, ಕುಟುಂಬ, ಮಕ್ಕಳು ಎಂಬ ಸಂಬಂಧಗಳೇ ಮುಖ್ಯವಾಗಿರುತ್ತದೆ. ಹಾಗಾಗಿ ನಮ್ಮ ಹಳ್ಳಿಯ ಜನರಿಗೆ ಶಿಕ್ಷಣದ ಅರಿವಿನ ಕೊರತೆ ಇದೆ. ಆದರೆ ನಮ್ಮ ಸಂವಿಧಾನವು ಎಲ್ಲಾ ಬಗೆಯ ಸೌಲಭ್ಯಗಳನ್ನು ಕಾನೂನಿನ ಮೂಲಕ ನೀಡಿದ್ದಾರೆ. ಇವುಗಳನ್ನು ತಿಳಿದುಕೊಳ್ಳಬೇಕಾದರೆ ಶಿಕ್ಷಣವೇ ಮೂಲ ಆಯುಧ ಎಂದು ತಮಿಳುನಾಡಿನ ವಿರುಧನಗರದ ಜಿಲ್ಲಾಧಿಕಾರಿ ಡಾ.ಎನ್.ಓ.ಸುಖಪುತ್ರ ಸಾರ್ವಜನಿಕರಿಗೆ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ತಮಲೆಹಳ್ಳಿ ನೌಕರರ ಸಂಘ, ದಂಡಿನ ರಾಜಪ್ಪ ಪರಿವಾರ ಟ್ರಸ್ಟ್, ಹಾಗೂ ಗ್ರಾಮ ಪಂಚಾಯಿತಿ ತಮಲೆಹಳ್ಳಿಸಹಯೋಗದಲ್ಲಿ ದುರ್ಗಾಂಭಿಕಾ ದೇವಸ್ಥಾನದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ‘ ಕಾನೂನು ಜಾಗೃತಿ ಜಾತ್ರೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಾನು ತುಂಬಾ ಕಷ್ಟಪಟ್ಟು ಶಿಕ್ಷಣವನ್ನು ಪಡೆದುಕೊಂಡೆ, ನಿರಂತರವಾಗಿ ಅಭ್ಯಾಸ ಮಾಡುತ್ತಾ ಹಲವಾರು ಸಾರ್ವಜನಿಕ ಹುದ್ದೆಗಳನ್ನು ಪಡೆದು ಕೊಂಡು, ನಂತರ ಮತ್ತೆ ಐಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದೇನೆ. ಅಂದರೆ ಅದಕ್ಕೆ ಶಿಕ್ಷಣವೇ ಬಹಳ ಮುಖ್ಯ. ಹಾಗಾಗಿ ನೀವುಗಳು ತಮ್ಮ ಮಕ್ಕಳನ್ನು ವಿದ್ಯಾವಂತರಾಗಿ ಮಾಡಿ ಎಂದು ತಮ್ಮ ಜೀವನದ ಅನುಭವಗಳನ್ನು ತಿಳಿಸುತ್ತಾ ಯುವಕರಲ್ಲಿ ಕಾನೂನು ಮತ್ತು ಶಿಕ್ಷಣದ ಮಹತ್ವವನ್ನು ತಿಳಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ
ವೈದ್ಯಾಧಿಕಾರಿಯಾದ ಡಾ.ರಶಿಯಾ ಅವರು ಸಾರ್ವಜನಿಕರನ್ನು ಕುರಿತು ಮಾತನಾಡುತ್ತಾ, ಪ್ರತಿಯೊಬ್ಬರು ಶಿಕ್ಷಣ, ಆರೋಗ್ಯ, ಉದ್ಯೋಗದ ಕಡೇ ಗಮನಹರಿಸಬೇಕು. ಚಿತ್ರದುರ್ಗ, ಬಳ್ಳಾರಿ, ಈ ಭಾಗದಲ್ಲಿನ ಜನರು ಬಹಳ ಶ್ರಮಜೀವಿಗಳು ಬುದ್ಧಿವಂತರು. ಇವರಿಗೆ ಸರಿಯಾಗಿ ಶಿಕ್ಷಣ ಮತ್ತು ಕಾನೂನಿನ ಅರಿವುವನ್ನು ಮೈಗೂಡಿಸಿಕೊಳ್ಳಬೇಕು. ಜೊತೆಗೆ ಈ ಊರಿನ ಗ್ರಾಮಸ್ಥರಲ್ಲಿ ವಿನಂತಿಸಿಕೊಳ್ಳವುದೇನೆಂದರೇ ನಿಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ ಒಳ್ಳೆಯ ವಿದ್ಯಾವಂತರಾಗಿ ಮಾಡಿ. ಜೊತೆಗೆ ಕಾನೂನಿನ ಅರಿವು ಮೂಡಿಸಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಗಳೂರು ತಾಲ್ಲೂಕಿನ ಮಾಜಿ ಶಾಸಕರಾದ ಹೆಚ್.ಪಿ.ರಾಜೇಶ್ ಮಾತನಾಡುತ್ತಾ ಸಾಮಾಜಿಕವಾಗಿ ರಾಜಕಾರಣಿಗಳು ಮತ್ತು ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳ ಮೂಲ ಉದ್ದೇಶ ಒಂದೇ ಅದು ಜನಸೇವೆ. ರಾಜಕಾರಣಿಗಳಾಗಿ ನಾವು ನಮ್ಮದೇ ಆದ ರೀತಿಯಲ್ಲಿ ಜನಸೇವೆ ಮಾಡುತ್ತೇವೆ. ಅಧಿಕಾರಿಗಳು ನಿರಂತರವಾಗಿ ಜನಸಂಪರ್ಕದೊಂದಿಗೆ ಸೇವೆ ಮಾಡುವುದರ ಮೂಲಕ ನಿರಂತರವಾಗಿ ಎಲ್ಲಾ ಬಗೆಯ ಜಾಗೃತಿ ಮೂಡಿಸುತ್ತಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಶಿವಕುಮಾರ್ ಅವರು ವೇದಿಕೆಯಲ್ಲಿ ಇದ್ದ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಕಾನೂನಿನ ಅರಿವು ಪ್ರತಿಯೊಬ್ಬ ಸಾರ್ವಜನಿಕರಿಗೆ ಮುಖ್ಯ. ತಮ್ಮಲ್ಲಿ ಯಾವುದೇ ಸಮಸ್ಯೆಗಳು ಉಂಟಾದಾಗ ಅವುಗಳಿಗೆ ಪರಿಹಾರ ನೀಡುವುದೇ ಕಾನೂನು. ಹಾಗಾಗಿ ಇಂದು ನಮ್ಮ ಗ್ರಾಮದಲ್ಲಿ ಕಾನೂನು ಜಾಗೃತಿ ಜಾತ್ರೆಯನ್ನು ಆಯೋಜಿಸಲಾಗಿದೆ ಗ್ರಾಮಸ್ಥರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು

ವೇದಿಕೆಯಲ್ಲಿ ನಿವೃತ್ತ ಡಿವೈಎಸ್ಪಿ ಬಾಳಪ್ಪ ತಳವಾರ್, ಪ್ರಹ್ಲಾದ್ ಡಿವೈಎಸ್ಪಿ, ನಾಟಕದ ಪರಿಕಲ್ಪನೆಯ ಶಶಿಧರ, ಡಾ‌.ಹೊಂಬಯ್ಯ ಹೊನ್ನಲಗೆರೆ ಉಪಸ್ಥಿತರಿದ್ದರು. ನಂತರ ಹದಿನಾರು ಕಲಾವಿದರಿಂದ ಕಾನೂನು ಅರಿವು ಜಾಗೃತಿ ಜಾಥಾ ನಾಟಕವನ್ನು ಅಭಿನಯಿಸಲಾಯಿತು. ಊರಿನ ಎಲ್ಲಾ ಗ್ರಾಮಸ್ಥರು ಉಪಸ್ಥಿರಿದ್ದರು. ಕಾರ್ಯಕ್ರಮವನ್ನು ಚಿತ್ರದುರ್ಗದ ಆಕಾಶವಾಣಿಯ ಡಾ. ನವೀನ್ ಮಸ್ಕಾಲ್ ಅವರು ನಿರೂಪಿಸಿದರು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now