ನವದೆಹಲಿ: ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಫೆಬ್ರವರಿ 10ರಿಂದ ಚುನಾವಣೆ ನಡೆಯಲಿದೆ. ಪಕ್ಷಗಳಿಗೆ ಕಡಿಮೆ ಸಮಯವಿದ್ದು, ಜನರನ್ನ ಮನವೊಲಿಸಲು ಸಾಕಷ್ಟು ಸರ್ಕಸ್ ಮಾಡಬೇಕಿದೆ. ಆದ್ರೆ ಕೊರೊನಾ ಇರುವ ಕಾರಣ ಯಾವುದೇ ಅದ್ದೂರಿ ರ್ಯಾಲಿ ಮಾಡಲು ಚುನಾವಣಾ ಆಯೋಗ ಅನುಮತಿ ನೀಡಿಲ್ಲ.
ಈ ಸಂಬಂಧ ಮಾತನಾಡಿರುವ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಸುಶೀಲ್ ಚಂದ್ರ, ಯಾವುದೇ ಸಾರ್ವಜನಿಕ ರ್ಯಾಲಿ, ಬೈಕ್ ರ್ಯಾಲಿ, ಪಾದಯಾತ್ರೆಯನ್ನು ಮಾಡುವಂತಿಲ್ಲ. ಒಂದು ವೇಳೆ ಆಯೋಗದ ನಿಯಮ ಮೀರಿ ವರ್ತಿಸಿದ್ರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ. ಫಿಜಿಕಲ್ ರ್ಯಾಲಿಗೆ ಮಾತ್ರ ಅವಕಾಶವಿದೆ ಎಂದು ತಿಳಿಸಿದ್ದಾರೆ.
ಇನ್ನು ಫಿಜಿಕಲ್ ರ್ಯಾಲಿ ಆಯೋಜನೆ ಮಾಡಿದ್ರೆ ಕೊರೊನಾ ನಿಯಮಗಳನ್ನ ಪಾಲನೆ ಮಾಡಲೇಬೇಕಾಗುತ್ತದೆ. ಆಯಾ ಪಕ್ಷಗಳೇ ಮಾಸ್ಕ್, ಸ್ಯಾನಿಟೈಸ್ ಒದಗಿಸಬೇಕಾಗುತ್ತದೆ. ಡೋರ್ ಟು ಡೋರ್ ಕ್ಯಾಂಪೇನ್ ನಲ್ಲಿ ಐದಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ನಿಯಮಗಳನ್ನ ಮೀರಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾದ್ರೆ ಆಯೋಗ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೆ ಎಂಬ ಎಚ್ಚರಿಕೆಯನ್ನು ನೀಡಿದೆ.