ಸುದ್ದಿಒನ್ : ಮೂಳೆಗಳು ದುರ್ಬಲವಾಗಿದ್ದರೆ ಯಾವುದೇ ಕೆಲಸ ಮಾಡಲು ದೇಹ ಸಹಕರಿಸುವುದಿಲ್ಲ, ದೇಹ ದುರ್ಬಲವಾಗುತ್ತದೆ. ಕೆಟ್ಟ ಆಹಾರ ಪದ್ಧತಿ, ಜೀವನಶೈಲಿ ಬದಲಾವಣೆಯಿಂದಾಗಿ ಮೂಳೆ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತಿವೆ. ಅನೇಕ ಜನರು ಬೆನ್ನು ನೋವು, ಕಾಲು ನೋವು, ಮಣಿಕಟ್ಟು ನೋವು, ಬೆರಳು ನೋವು ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಸದೃಢ ಮೂಳೆಗಳಿಗೆ ಕ್ಯಾಲ್ಸಿಯಂ ಬಹಳ ಮುಖ್ಯ. ಅನೇಕ ಜನರು ಹಾಲು ಕ್ಯಾಲ್ಸಿಯಂ ಎಂದು ಭಾವಿಸುತ್ತಾರೆ. ಸಸ್ಯ ಆಧಾರಿತ ಆಹಾರಗಳು, ಒಣ ಹಣ್ಣುಗಳು (Dry fruits) ಮತ್ತು nuts ಗಳಲ್ಲಿ ಸಹ ಕ್ಯಾಲ್ಸಿಯಂ ಸಮೃದ್ಧವಾಗಿವೆ. ವಯಸ್ಕರು ದಿನಕ್ಕೆ 1000 ಮಿಗ್ರಾಂ ಕ್ಯಾಲ್ಸಿಯಂ ಅನ್ನು ಸೇವಿಸಬೇಕು ಎಂದು ತಜ್ಞರು ಹೇಳುತ್ತಾರೆ.
ಬಾದಾಮಿ
ಬಾದಾಮಿಯಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ, 28 ಗ್ರಾಂ ಬಾದಾಮಿಯಲ್ಲಿ 76 ಮಿಗ್ರಾಂ ಕ್ಯಾಲ್ಸಿಯಂ ಹೊಂದಿರುತ್ತದೆ. ಬಾದಾಮಿಯು ಮೆಗ್ನೀಸಿಯಮ್, ಕಾಪರ್, ಮ್ಯಾಂಗನೀಸ್, ಒಮೆಗಾ -3 ಮತ್ತು 6 ಕೊಬ್ಬಿನಾಮ್ಲಗಳಂತಹ ಖನಿಜಗಳು ಸಮೃದ್ಧವಾಗಿದೆ. ಇದರಲ್ಲಿ ಪ್ರೋಟೀನ್ ಕೂಡ ಸಮೃದ್ಧವಾಗಿದೆ. ಆರೋಗ್ಯಕರ ಮೊನೊ ಅನ್ ಸಾಚುರೇಟೆಡ್ ಕೊಬ್ಬುಗಳು ಕೂಡಾ ಸಮೃದ್ಧವಾಗಿದೆ.
ಕೊಲೆಸ್ಟ್ರಾಲ್ ಇರುವುದಿಲ್ಲ. ವಿಟಮಿನ್-ಇ ಹೆಚ್ಚು. ಇವೆಲ್ಲವೂ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇವುಗಳಲ್ಲಿ ಕಾಪರ್ ಮತ್ತು ಮ್ಯಾಂಗನೀಸ್ ಕೂಡ ಸಮೃದ್ಧವಾಗಿದೆ. ನೆನೆಸಿದ ಬಾದಾಮಿಯನ್ನು ಪ್ರತಿನಿತ್ಯ ಸೇವಿಸಿದರೆ ಮೂಳೆಗಳು ಆರೋಗ್ಯಕರವಾಗಿರುತ್ತವೆ.
ಅಂಜೂರ
ಅಂಜೂರವು ಪೋಷಕಾಂಶಗಳ ಉಗ್ರಾಣವಾಗಿದೆ. 100 ಗ್ರಾಂ ಅಂಜೂರದಲ್ಲಿ 55 ಮಿಗ್ರಾಂ ಕ್ಯಾಲ್ಸಿಯಂ ಹೊಂದಿರುತ್ತದೆ.
ಇದು ಆಹಾರದ ಫೈಬರ್, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ (Anti accident) ಸಮೃದ್ಧವಾಗಿದೆ. ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಅಂಜೂರದಲ್ಲಿರುವ ಕಬ್ಬಿಣಾಂಶವು ರಕ್ತಹೀನತೆಯನ್ನು ತಡೆಯುತ್ತದೆ. ಕ್ಯಾಲ್ಸಿಯಂ ಕೊರತೆಯಿಂದ ಬಳಲುತ್ತಿರುವವರು ಅಂಜೂರದ ಹಣ್ಣನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಸೇವಿಸಿದರೆ ಒಳ್ಳೆಯದು.
ಖರ್ಜೂರ
ಖರ್ಜೂರದಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. 100 ಗ್ರಾಂ ಖರ್ಜೂರದಲ್ಲಿ ಸುಮಾರು 64 ಮಿಗ್ರಾಂ ಕ್ಯಾಲ್ಸಿಯಂ ಇರುತ್ತದೆ. ಇದಲ್ಲದೆ, ಖರ್ಜೂರದಲ್ಲಿರುವ ಪೊಟ್ಯಾಸಿಯಮ್, ಪಾಸ್ಪರಸ್, ಮತ್ತು ಮೆಗ್ನೀಸಿಯಮ್ ಅಂಶಗಳು ಹೆಚ್ಚು. ಮೂಳೆ ಸಮಸ್ಯೆಗಳನ್ನು ತಡೆಯುತ್ತದೆ.
ಬಿಳಿ ಎಳ್ಳು
ಎಳ್ಳಿನಲ್ಲಿಯೂ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದು 100 ಗ್ರಾಂಗೆ 989 ಮಿಗ್ರಾಂ ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಇವುಗಳಲ್ಲಿ ಕ್ಯಾಲ್ಸಿಯಂ, ಐರನ್, ಮೆಗ್ನೀಸಿಯಮ್ ಮತ್ತು ಪಾಸ್ಪರಸ್ ನಂತಹ ಪ್ರಮುಖ ಪೋಷಕಾಂಶಗಳು ಸಮೃದ್ಧವಾಗಿವೆ. ಇವು ಬಲಿಷ್ಠ ಮೂಳೆಗಳ ಬೆಳವಣಿಗೆಗೆ ಸಹಕಾರಿ. ಇವುಗಳಲ್ಲಿರುವ ಮೊನೊಸಾಚುರೇಟೆಡ್ ಕೊಬ್ಬುಗಳು ಮೆದುಳಿನ ಬೆಳವಣಿಗೆ ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಹ್ಯಾಝೆಲ್ನಟ್ಸ್
ಹ್ಯಾಝೆಲ್ನಟ್ಸ್ ನಲ್ಲಿ ಸುಮಾರು 114 ಮಿಗ್ರಾಂ ಕ್ಯಾಲ್ಸಿಯಂ ಹೊಂದಿರುತ್ತದೆ. ಇದರೊಂದಿಗೆ.. ವಿಟಮಿನ್ ಇ, ವಿಟಮಿನ್ ಬಿ1, ವಿಟಮಿನ್ ಬಿ6 ಸಮೃದ್ಧವಾಗಿವೆ. ಇದು ಮ್ಯಾಂಗನೀಸ್, ಫೋಲೇಟ್, ಉತ್ಕರ್ಷಣ ನಿರೋಧಕಗಳು ಮತ್ತು ರಂಜಕದಿಂದ ಕೂಡ ಸಮೃದ್ಧವಾಗಿದೆ. ಈ ಪೋಷಕಾಂಶಗಳು ಮೂಳೆಗಳನ್ನು ಬಲವಾಗಿಡುತ್ತವೆ.
ಗೋಡಂಬಿ
ಗೋಡಂಬಿಯಲ್ಲಿ ಸುಮಾರು 57.20 ಮಿಗ್ರಾಂ ಕ್ಯಾಲ್ಸಿಯಂ ಇದೆ. ಇದು ಮೂಳೆಗಳನ್ನು ಬಲವಾಗಿ ಇಡುತ್ತದೆ. ಇದು ಪ್ರೋಟೀನ್, ಫೈಬರ್, ಆರೋಗ್ಯಕರ ಕೊಬ್ಬುಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಗೋಡಂಬಿಯು ತೂಕ ಇಳಿಸಲು ಸಹಾಯ ಮಾಡುತ್ತದೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ.