ಬಿಜೆಪಿಯಲ್ಲಿ ಒಬ್ಬೊಬ್ಬರು ಒಂದೊಂದು ದಿಕ್ಕು; ಬೆಲೆ ಏರಿಕೆ ಹೋರಾಟದಲ್ಲಿ ಸಕ್ಸಸ್ ಆಗ್ತಾರಾ ವಿಜಯೇಂದ್ರ..?

suddionenews
1 Min Read

ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲದರಲ್ಲೂ ಬೆಲೆ ಏರಿಕೆ ಮಾಡಿ ಬಡ, ಮಧ್ಯಮವರ್ಗದ ಜನರು ಬದುಕು ನಡೆಸುವುದು ಹೇಗೆ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಇದೆಲ್ಲವನ್ನು ನೋಡುತ್ತಿರುವ ಬಿಜೆಪಿ ಸದ್ಯ ಹೋರಾಟದ ಹಾದಿ ಹಿಡಿದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಮನದ್ರ ಅವರು ಹೋರಾಟಕ್ಕೆ ಕರೆ ಕೊಟ್ಟಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಈ ಹೋರಾಟಕ್ಕೆ ಮುನ್ನುಡಿ ಬರೆಯಲಾಗಿದೆ. ಆದರೆ ಈ ಬೆಲೆ ಏರಿಕೆಯ ಬಿಸಿ ವಿಜಯೇಂದ್ರ ಅವರಿಗೆ ಸವಾಲಿನ ಹೋರಾಟವೇ ಸರಿ. ಯಾಕಂದ್ರೆ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ, ಎಲ್ಲರೂ ಒಗ್ಗಟ್ಟಾಗಿಲ್ಲ ಅನ್ನೋದನ್ನ ಬಾಯ್ಬಿಟ್ಟು ಹೇಳ ಬೇಕಿಲ್ಲ ಅಲ್ವಾ..? ಕಾಂಗ್ರೆಸ್ ವಿರುದ್ಧದ ಈ ಹೋರಾಟದಲ್ಲಿ ಬಿಜೆಪಿ ಈಗ ಒಗ್ಗಟ್ಟನ್ನ ಪ್ರದರ್ಶಿಸಬೇಕಾದ ಕಾಲ ಬಂದಿದೆ. ಆದರೆ ಬಿಜೆಪಿಯಲ್ಲಿ ಎಲ್ಲರೂ ಒಟ್ಟಾಗಿ ಕಾಣಿಸುತ್ತಿಲ್ಲ. ಯಾಕಂದ್ರೆ ಬಿಜೆಪಿ ವಿರುದ್ಧ ಅಶಿಸ್ತು ಪ್ರದರ್ಶನ ಮಾಡಿದರು ಎಂಬ ಕಾರಣಕ್ಕೆ ಈಗಾಗಲೇ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನ ಉಚ್ಛಾಟನೆ ಮಾಡಲಾಗಿದೆ. ಇನ್ನು ಕೆಲವರಿಗೆ ನೋಟೀಸ್ ಕೂಡ ಜಾರಿ ಮಾಡಲಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಬಿಜೆಪಿಯಿಂದ ಪ್ರಬಲವಾದ ಹೋರಾಟಗಳು ನಡೆಯಲೇ ಇಲ. ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಕೇವಲ ಪಾದಯಾತ್ರೆ ಬಿಟ್ಟರೆ ಹೇಳಿಕೊಳ್ಳುವಂತಹ ಹೋರಾಟವೂ ನಡೆದಿಲ್ಲ. ಪ್ರಬಲ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕಿದ್ದ ಬಿಜೆಪಿಯಲ್ಲಿಯೇ ಒಳ ಜಗಳ, ಗುಂಪುಗಾರಿಕೆ ನಡೆಯುತ್ತಿರುವುದು ಕಾರ್ಯಜರ್ತರಿಗೆ ಬೇಸರ ತರಿಸಿದೆ.

ರಾಜ್ಯದಲ್ಲಿ ಬೆಲೆ ಏರಿಕೆ ವಿರುದ್ಧದ ಹೋರಾಟಕ್ಕೆ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕರೆಕೊಟ್ಟಿದ್ದಾರೆ. ಮುನಿಸುಗಳ ನಡುವೆ ಹೋರಾಟ ಆರಂಭವಾಗಿದೆ. ಇಲ್ಲಿ ಜೆಡಿಎಸ್ ನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆದಿಲ್ಲ. ಹೀಗಾಗಿ ಜೆಡಿಎಸ್ ಪ್ರತ್ಯೇಕ ಹೋರಾಟಕ್ಕೆ ಕರೆ ನೀಡಿದೆ. ಹೀಗಾಗಿ ಕರೆಕೊಟ್ಟಿರುವ ಹೋರಾಟವನ್ನು ಬಿವೈ ವಿಜಯೇಂದ್ರ ಅವರು ಸಕ್ಸಸ್ ಮಾಡುವುದೆ ಸವಾಲಿನ ಕೆಲಸವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *