ಚಿತ್ರದುರ್ಗ,(ಜ.04): ಬಳ್ಳಾರಿಯಿಂದ ಪ್ರಕಟಗೊಳ್ಳುತ್ತಿರುವ ಈ ನಮ್ಮ ಕನ್ನಡ ನಾಡು ಪ್ರಾದೇಶಿಕ ಕನ್ನಡ ದಿನಪತ್ರಿಕೆ ಹೊರ ತಂದಿರುವ ನೂತನ ವರ್ಷದ ವರ್ಣರಂಜಿತ ಕ್ಯಾಲೆಂಡರನ್ನು ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ ಪಕ್ಷದ ಕಚೇರಿಯಲ್ಲಿ ಉದ್ಘಾಟಿಸಿದರು.
ನೂತನ ಕ್ಯಾಲೆಂಡರ್ ಉದ್ಘಾಟಿಸಿ ಮಾತನಾಡಿದ ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ ಎಲ್ಲವೂ ದುಬಾರಿಯಾಗಿರುವ ಇಂದಿನ ಕಾಲದಲ್ಲಿ ಈ ನಮ್ಮ ಕನ್ನಡ ನಾಡು ಪ್ರಾದೇಶಿಕ ದಿನಪತ್ರಿಕೆ ಕೇವಲ ಒಂದು ರೂ.ಗೆ ಓದುಗರ ಕೈಸೇರುತ್ತಿರುವುದು ಒಂದು ವಿಶೇಷ. ಅದೇ ರೀತಿ ಆಕರ್ಷಣೀಯವಾಗಿ ಕ್ಯಾಲೆಂಡರ್ ಮುದ್ರಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂಪತ್ಕುಮಾರ್, ವಕ್ತಾರ ನಾಗರಾಜ್ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ನಗರ ಪ್ರಧಾನ ಕಾರ್ಯದರ್ಶಿ ಕಿರಣ್, ಶಂಭು ಈ ಸಂದರ್ಭದಲ್ಲಿದ್ದರು.