ಜೆಡಿಎಸ್ ನಿಂದ‌ ಕಾಂಗ್ರೆಸ್ ಗೆ ಬಂದ ದತ್ತಣ್ಣನಿಗೆ ಸಿಗಲಿಲ್ಲ ಟಿಕೆಟ್ : ಸಭೆ ಕರೆದು ಸ್ವತಂತ್ರವಾಗಿ ಸ್ಪರ್ಧಿಸುತ್ತಾರಾ..?

suddionenews
1 Min Read

ಚಿಕ್ಕಮಗಳೂರು: ಪಕ್ಷದಲ್ಲಿ ಅಳೆದು ತೂಗಿ ಟಿಕೆಟ್ ನೀಡಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಚುನಾವಣೆ ದಿನಾಂಕ ಘೋಷಣೆಯಾದರೂ ಕೂಡ ಪಕ್ಷಗಳು ಸಾಕಷ್ಟು ಯೋಚನೆ ಮಾಡಿನೇ ಟಿಕೆಟ್ ಘೋಷಣೆ ಮಾಡುತ್ತಿವೆ. ಯಾರಿಗೆ ಜನ ಬೆಂಬಲವಿದೆ. ಹಣ ಬಲವಿದೆ ಹೀಗೆ ಅನೇಕ ವಿಚಾರಗಳನ್ನಿಟ್ಟುಕೊಂಡು ಟಿಕೆಟ್ ಘೋಷಣೆ ಮಾಡಲಾಗುತ್ತಿದೆ. ಇದೀಗ ಕಾಂಗ್ರೆಸ್ ನಿಂದಾನೂ ಎರಡು ಪಟ್ಟಿ ರಿಲೀಸ್ ಆಗಿದೆ. ಅದರಲ್ಲಿ ಜೆಡಿಎಸ್ ನಿಂದ ಬಂದ ವೈಎಸ್ ವಿ ದತ್ತಾ, ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಬೇರೋಬ್ಬರ ಪಾಲಾಗಿದೆ. ಹೀಗಾಗಿ ವೈ ಎಸ್ ವಿ ದತ್ತಾ ಬೇಸರ ಮಾಡಿಕೊಂಡಿದ್ದಾರೆ.

ತಮ್ಮ ಶಿಷ್ಯರಿಗೆ ಪತ್ರ ಬರೆಯುವ ಮೂಲಕ ಮೇಷ್ಟ್ರು ಅಸಮಾಧಾನ ಹೊರ ಹಾಕಿದ್ದಾರೆ. “ಆತ್ಮೀಯ ಪ್ರೀತಿ ಪಾತ್ರರಾದ ನನ್ನ ಅಭಿಮಾನಿಗಳಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ನೀವೂ ನನಗೆ ಪ್ರೀತಿಯ ಧಾರೆ ಎರೆದಿದ್ದೀರಿ. ಹಣವಿಲ್ಲದ, ಜಾತಿಯಿಲ್ಲದ ನನ್ನನ್ನು ದತ್ತಣ್ಣ.. ನಮ್ಮ ದತ್ತಣ್ಣ ಎಂದು ಅಭಿಮಾನದಿಂದ ಕರೆದಿದ್ದೀರಿ. ಪ್ರೀತಿಯಿಂದ ಬೆಳೆಸಿದ್ದೀರಿ.

ಈಗ ಬಂದಿರುವ ವಿಶೇಷ ರಾಜಕೀಯ ಪರಿಸ್ಥಿತಿಯಲ್ಲಿ ನಿಮ್ಮ ಜೊತೆ ನಾನಿರಬೇಕು, ನನ್ನ ಜೊತೆಗೆ ನೀವಿರಬೇಕು ಎಂಬುದು ಅನಿವಾರ್ಯತೆ. ಈ ಕಾರಣದಿಂದ ಇದು ನನ್ನ‌.ತ್ತು ನಿಮ್ಮೆಲ್ಲರ ಆತ್ಮಗೌರವಕ್ಕೆ, ಸ್ವಾಭಿಮಾನಕ್ಕೆ ಆದ ಅಪಮಾನವಾಗಿದೆ. ಹೀಗಾಗಿ ಈ ಕ್ಷೇತ್ರದ ಮತದಾರರ ಸ್ವಾಭಿಮಾನಕ್ಕಾಗಿ ನಾನು ನಿಮ್ಮೆಲ್ಲರ ಆಶೀರ್ವಾದ ಪಡೆಯಲು, ಕಡೂರು ಪಟ್ಟಣದಲ್ಲಿ ದಿನಾಂಕ 9-4-2023ನೇ ಭಾನುವಾರ, ಬೆಳಗ್ಗೆ 11ಕ್ಕೆ ನನ್ನ ಅಭಿಮಾನಿಗಳ ಸಭೆ ಕರೆದಿದ್ದೇನೆ. ತಾವೂ ತಮ್ಮ ಸಂಗಡಿಗರೊಂದಿಗೆ,‌ ಬಂಧು ಬಾಂಧವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು, ನನ್ನನ್ನು ಹರಸಿ, ಆಶೀರ್ವದಿಸಬೇಕಾಗಿ ವಿನಂತಿ” ಎಂದು ಪತ್ರದ ಮೂಲಕ ಮಾಹಿತಿ ಹಂಚಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *