Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಾಹಿತಿ ಹಂಪ ನಾಗರಾಜಯ್ಯ ಅವರಿಂದ ದಸರಾ ಉದ್ಘಾಟನೆ..!

Facebook
Twitter
Telegram
WhatsApp

 

 

ಮೈಸೂರು: ಮೈಸೂರು ದಸರಾದ ಸಂಭ್ರಮ ನಾಡಿನೆಲ್ಲೆಡೆ ಶುರುವಾಗಿದೆ. ಗಜಪಡೆ ಅರಮನೆ ಆವರಣ ಸೇರಿ, ತರಬೇತಿ ಪಡೆಯುತ್ತಿವೆ. ಈ ಬಾರಿಯ ದಸರಾ ಉದ್ಘಾಟನೆ ಮಾಡುವುದು ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು, ಸಿದ್ದರಾಮಯ್ಯ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಸಾಹಿತಿ ಹಂಪ ನಾಗರಾಜಯ್ಯ ಅವರು ಈ ಬಾರಿಯ ದಸರಾ ಉದ್ಘಾಟನೆ ಮಾಡುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.

ದಸರಾ ಮಹೋತ್ಸವಕ್ಕೆ ಅಕ್ಬೋಬರ್ 3 ರಂದು ಚಾಲನೆ ಸಿಗಲಿದೆ. ಅಂದು ಬೆಳಗ್ಗೆ 9.15 ರಿಂದ 9.45ರ ಮುಹೂರ್ತದಲ್ಲಿ ದಸರಾ ಉದ್ಘಾಟನಾ ಪೂಜೆ ನೆರವೇರಲಿದೆ. ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಶುರುವಾಗಲಿದೆ. ಅದೇ ತಿಂಗಳ 12ರಂದು ಸಮಾರೋಪಗೊಳ್ಳಲಿದೆ ಎಂದು ಸರ್ಕಾರ ಅಧಿಕೃತವಾಗಿ ಮಾಹಿತಿ ನೀಡಿದೆ.

ಚಾಮುಂಡೇಶ್ವರಿ ಅಮ್ಮನವರಿಗೆ ಅಂದು ನವರಾತ್ರಿಯ ಪ್ರಥಮ ಪೂಜೆ ನೆರವೇರಲಿದೆ. ಸಂಜೆ 4.30ರ ನಂತರ ಜಂಬೂ ಸವಾರಿ ನಡೆಯಲಿದೆ. ರಾತ್ರಿ 7.30ರ ನಂತರ ಪಂಜಿನ ಕವಾಯತು ನಡೆಯಲಿದೆ. ನಾಡಿನ ಅಧಿದೇವತೆಯನ್ನು ಅಂಬಾರಿ ಮೇಲೆ ನೋಡಲು ಜನ ಕಾತುರದಿಂದ ಕಾಯುತ್ತಿದ್ದಾರೆ. ಪ್ರತಿ ವರ್ಷ ಕೂಡ ದಸರಾ ಎಂದರೆ ಚಾಮುಂಡಿ ಭಕ್ತರಿಗೆ ಹರುಷವೇ ಸರಿ. ಒಂಭತ್ತು ದಿನಗಳ ಕಾಲ ನವರಾತ್ರಿಯ ಸಂಭ್ರಮದಲ್ಲಿ ಮೈಸೂರು ದೀಪಾಲಂಕಾರಗಳಿಂದ ಕಂಗೊಳಿಸಲಿದೆ. ಆ ಸಮಯದಲ್ಲಿ ಮೈಸೂರು ನೋಡುವುದಕ್ಕೇನೆ ಚೆಂದ. ನಮ್ಮ ರಾಜ್ಯ ಮಾತ್ರವಲ್ಲ ವಿದೇಶಿಗರಿಗೂ ಮೈಸೂರು, ಚಾಮುಂಡಿ, ದಸರಾ ಎಂದರೆ ಬಹಳ ಇಷ್ಟ. ಈ ವರ್ಷ ಮುಂಗಾರು ಮಳೆಯೇ ಉತ್ತಮವಾಗಿರುವ ಕಾರಣ, ದಸರಾವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಕಳೆದ ವರ್ಷ ಬರಗಾಲವಿದ್ದ ಕಾರಣ, ಸರಳವಾಗಿ, ಸಾಂಪ್ರದಾಯಿಕವಾಗಿ ದಸರಾ ಆಚರಣೆ ಮಾಡಲಾಗಿತ್ತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬಿಜೆಪಿ ನಾಯಕರು HIV ಪರೀಕ್ಷೆ ಮಾಡಿಸಿಕೊಂಡು.. ಏಡ್ಸ್ ತಡೆಗೆ ಸಹಕರಿಸಬೇಕು : ಕಾಂಗ್ರೆಸ್ ಟ್ವೀಟ್..!

ಬೆಂಗಳೂರು: ಆರ್ ಆರ್ ನಗರ ಶಾಸಕ ಮುನಿರತ್ನ ಮಾಡಿಕೊಂಡಿದ್ದ ಪ್ಲ್ಯಾನ್ ಕೇಳಿ ರಾಜ್ಯವೇ ಬೆಚ್ಚಿ ಬಿದ್ದಿದೆ. ಏಡ್ಸ್ ತಡೆಗಾಗಿ ಎಲ್ಲಾ ರಾಜ್ಯಗಳ ಸರ್ಕಾರ ಹೋರಾಟ‌ನಡೆಸುತ್ತಿದ್ದರೆ, ಇಲ್ಲಿ ಮುನಿರತ್ನ ಅವರೇ ಏಡ್ಸ್ ಸೋಂಕು ಹತ್ತಿಸುವ ಹುನ್ನಾರ

ತಿರುಪತಿ ಲಡ್ಡು ವಿವಾದ ಕೇಳಿ ಆಶ್ಚರ್ಯ ಆಯ್ತು : ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ: ಸದ್ಯ ದೇಶದೆಲ್ಲೆಡೆ ತಿರುಪತಿ ತಿಮ್ಮಪ್ಪನ ಪ್ರಸಾದ ಲಡ್ಡು ವಿಚಾರವೇ ಸದ್ದು ಮಾಡುತ್ತಿದೆ. ಪ್ರಸಾದಕ್ಕೆ ಪ್ರಾಣಿ ಕೊಬ್ಬನ್ನು ಬಳಕೆ ಮಾಡುತ್ತಾರೆ ಎಂಬ ವಿಚಾರ ಭಕ್ತರ ಭಾವನೆಗೆ ಧಕ್ಕೆ ತಂದಿದೆ. ಇದೀಗ ಈ ಬಗ್ಗೆ ಕೆ.ಎಸ್.ಈಶ್ವರಪ್ಪ

ದಾವಣಗೆರೆ | ಶಾಂತಿ ವಹಿಸಿ ಸೌಹಾರ್ದತೆ ಕಾಪಾಡಿ, ಗಲಭೆಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ: ಜಿ. ಬಿ. ವಿನಯ್ ಕುಮಾರ್ ಒತ್ತಾಯ

    ಸುದ್ದಿಒನ್, ದಾವಣಗೆರೆ, ಸೆಪ್ಟೆಂಬರ್. 20 : ದಾವಣಗೆರೆ ನಗರದ ಜನರು ಶಾಂತಿಪ್ರಿಯರು. ಸಾಮರಸ್ಯದಿಂದ ಜೀವನ ಸಾಗಿಸಬೇಕು. ಯಾವುದೇ ಕಾರಣಕ್ಕೂ ಗಲಭೆ ಮಾಡಬಾರದು. ಪೊಲೀಸರು ಗಲಭೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ವಾಭಿಮಾನಿ

error: Content is protected !!