ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 28 : ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ನೇತೃತ್ವದಲ್ಲಿ ಹಿಂದೂ ಮಹಾಗಣಪತಿ ಬೃಹತ್ ಶೋಭಯಾತ್ರೆ ವಿಜೃಂಭಣೆಯಿಂದ ನಡೆಯತ್ತಿದೆ. ಈ ವೇಳೆ ಬಾರೀ ಜನಸ್ತೋಮ ಸೇರಿದೆ.
ಆದರೆ ಈ ಶೋಭಾಯಾತ್ರೆಯಲ್ಲಿ ದರ್ಶನ್ ಭಾವಚಿತ್ರವಿರುವ ಬಾವುಟ ಹಾರಾಟಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಶೋಭಾಯಾತ್ರೆ ಮೆರವಣಿಗೆ ವೇಳೆ ದೇವರ ಚಿತ್ರವಿರುವ ಬಾವುಟಗಳನ್ನು ಹಾರಿಸುತ್ತಾರೆ. ಆದರೆ ಈ ಮೆರವಣಿಗೆಯಲ್ಲಿ ದರ್ಶನ್ ಬಾವುಟ ಹಾರಿಸುವ ಪ್ರಯತ್ನ ನಡೆದಿದೆ. ಶನಿವಾರ ಮಧ್ಯಾಹ್ನ 12.30 ಕ್ಕೆ ಈ ದೃಶ್ಯ ಕಂಡು ಬಂದಿದ್ದು ಚಿತ್ರದುರ್ಗ ನಗರದಲ್ಲಿಂದು ಹಿಂದೂ ಮಹಾ ಗಣಪತಿ ಶೋಭಾ ಯಾತ್ರೆಯಲ್ಲಿ ದರ್ಶನ್ ಅಭಿಮಾನಿಗಳು ಬೃಹತ್ ಗಾತ್ರದ ದರ್ಶನ್ ಭಾವಚಿತ್ರ ಇರುವ ಏನ್ರೀ ಮೀಡಿಯಾ ಎಂಬ ಭಾವುಟವನ್ನ ಕೈನಲ್ಲಿ ಹಿಡಿದು ದರ್ಶನ್ ಪರ ಘೋಷಣೆಗಳನ್ನ ಕೂಗುತ್ತಿದ್ದದ್ದು ಕಂಡು ಬಂದಿದೆ.
ಈ ವೇಳೆ ಹಿಂದೂ ಕಾರ್ಯಕರ್ತರು, ದರ್ಶನ್ ಅಭಿಮಾನಿಗೆ ಕಿವಿ ಮಾತು ಹೇಳಿದ್ದಾರೆ. ದರ್ಶನ್ ಬಾವುಟವನ್ನು ಹಾರಿಸಬೇಡಿ ಎಂದು ತಿಳಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಹೊತ್ತು ದರ್ಶನ ಅಭಿಮಾನಿ ನಡುವೆ ಹಾಗೂ ಹಿಂದೂ ಕಾರ್ಯಕರ್ತರು ವಾಗ್ವಾದ ನಡೆದಿದ್ದು ಕಂಡು ಬಂದಿದೆ. ಅಷ್ಟರಲ್ಲಿ ಪೊಲೀಸರು ಬಾವುಟವನ್ನು ಕಸಿದುಕೊಂಡು ತಮ್ಮ ವಶಕ್ಕೆ ಪಡೆದಿದ್ದಾರೆ. ಇದರಿಂದಾಗಿ ದರ್ಶನ್ ಅಭಿಮಾನಿಗಳು ಸಪ್ಪೆ ಮೋರೆ ಹಾಕಿಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಗಣೇಶನ ಮೆರವಣಿಗೆ ನಗರದ ಬಿ.ಡಿ. ರಸ್ತೆಯಲ್ಲಿ ಅದ್ದೂರಿಯಾಗಿ ಸಾಗುತ್ತಿದೆ.