ವರದಿ : ಸುರೇಶ್ ಪಟ್ಟಣ್, ಮೊ :8722022817
ಚಿತ್ರದುರ್ಗ, ಸುದ್ದಿಒನ್ (ಸೆ.26) : ಡಿಸೆಂಬರ್ನಲ್ಲಿ ದುರ್ಗೋತ್ಸವವನ್ನು ಆಚರಣೆ ಮಾಡಲಾಗುವುದೆಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಇದ್ದಾಗ ದುರ್ಗೋತ್ಸವ ಕಾರ್ಯಕ್ರಮ ನಡೆದಿತ್ತು. ಈಗ ಮತ್ತೊಮ್ಮೆ ದುರ್ಗೋತ್ಸವ ಮಾಡಲು ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡಿದ್ದೇನೆ. ಅವರು ಸಹಾ ಸಮ್ಮತ್ತಿಸಿದ್ದಾರೆ. ಮೂರರಿಂದ ಐದು ದಿನಗಳ ಕಾಲ ಉತ್ಸವವವನ್ನು ನಡೆಸಲಾಗುವುದು. ಕೇಂದ್ರ ಪ್ರವಾಸೋದ್ಯಮ ಸಚಿವರು ಇದರಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಈ ದುರ್ಗೋತ್ಸವದಲ್ಲಿ ಅಪ್ಪರ್ ಭದ್ರಾ ಯೋಜನೆ, ನೇರ ರೈಲು ಮಾರ್ಗ, 83 ವರ್ಷಗಳ ಬಳಿಕ ತುಂಬಿರುವ ವಾಣಿವಿಲಾಸ ಸಾಗರದ ಬಗ್ಗೆ ಚರ್ಚೆ, ಸಂವಾದಗಳು ನಡೆಯಲಿದೆ ಎಂದರು.
ಅ. 28ರಂದು ಕೋಟೆಯ ಮೇಲೆ ಕಾರ್ಯಕ್ರಮವೊಂದನ್ನು ನಡೆಸಲು ಸಚಿವರು ನಿರ್ಧಾರ ಮಾಡಿದ್ದಾರೆ. ಇದರ ಬಗ್ಗೆ ಮುಂದಿನ ದಿನಮಾನದಲ್ಲಿ ಪೂರ್ವಭಾವಿ ಸಭೆಯನ್ನು ನಡೆಸುವುದರ ಮೂಲಕ ಕಾರ್ಯಕ್ರಮಗಳ ರೂಪುರೇಷವನ್ನು ನಿರ್ಧಾರ ಮಾಡಲಾಗುವುದು. ಇದರ ನೇತೃತ್ವವನ್ನು ಜಿಲ್ಲಾಧಿಕಾರಿಗಳು ವಹಿಸಲಿದ್ದಾರೆ ಎಂದು ಕೆ.ಎಸ್. ನವೀನ್ ಹೇಳಿದರು.