ಆರಂಭದಲ್ಲಿ ಕೈ ಕೊಟ್ಟಿದ್ದ ಮುಂಗಾರು ಬಳಿಕ ಚುರುಕುಗೊಂಡಿತ್ತು. ಇದೀಗ ರಾಜ್ಯದೆಲ್ಲೆಡೆ ಜೋರು ಮಳೆಯಾಗುತ್ತಿದೆ. ಉತ್ತರ ಕನ್ನಡ, ಕೊಡಗು, ದಕ್ಷಿಣ ಕನ್ನಡದ ಭಾಗದಲ್ಲಂತೂ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಓಡಾಡಲು ಇದ್ದ ಸಂಪರ್ಕ ಸೇತುವೆಗಳು ಕುಸಿತಗೊಂಡಿವೆ. ಮನೆಗಳು ಕುಸಿತಗೊಂಡಿವೆ. ಜನಜೀವನ ಅಸ್ತವ್ಯಸ್ತವಾಗಿದ್ದು ಇದರ ನಡುವೆ ಸಾವು – ನೋವುಗಳು ಸಂಭವಿಸಿವೆ.
ಕಲಬುರಗಿ, ಉಡುಪಿ, ಭದ್ರಾವತಿ, ಹೊನ್ನಾವರ, ಹಾವೇರಿ ಸೇರಿದಂತೆ ಕೆಲ ಭಾಗದಲ್ಲಿ ಜನ ಮಳೆಯಿಂದಾಗಿ ಸಾವನ್ನಪ್ಪಿದ್ದಾರೆ ರೀಲ್ಸ್ ಮಾಡಲು ಹೋಗಿ, ನೀರಿನ ಸೌಂದರ್ಯ ನೋಡಲು ಹೋಗಿ ಸಾವನ್ನಪ್ಪಿದವರು ಇದ್ದಾರೆ. ಮಳೆಯಿಂದಾಗಿ ಆರು ಜನ ಸಾವನ್ನಪ್ಪಿದ್ದಾರೆ.
ಇನ್ನು ಇಂದು ನಾಳೆ ಮಳೆಯ ಪ್ರಮಾಣ ಕೊಂಚ ತಗ್ಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಹಾಗೆ ನೀರಿನ ಅಪಾಯ ಇರುವ ಕಡೆಗೆ ಜನ ಪ್ರವಾಸ ಹೋಗುವುದು, ಸೌಂದರ್ಯ ಸವಿಯಲು ಹೋಗುವುದನ್ನು ನಿಲ್ಲಿಸಬೇಕು ಸೂಚನೆ ನೀಡಲಾಗಿದೆ.