ಮೈಸೂರು: ಈ ಬಾರಿಯ ದಸರಾ ಉದ್ಘಾಟನೆಯನ್ನು ಬಾನು ಮುಷ್ತಾಕ ಅವರು ಮಾಡಲಿದ್ದಾರೆ. ಇದಕ್ಕೆ ಬಿಜೆಪಿ ನಾಯಕರಿಂದ ಬಾರೀ ವಿರೋಧ ವ್ಯಕ್ತವಾಗುತ್ತಿದೆ. ಬಿಜೆಪಿ ಸಂಸದರು ಆಗಿರುವ, ರಾಜ ವಂಶಸ್ಥರಾದ ಯದುವೀರ್ ಒಡೆಯರ್ ಅವರು ಮೊನ್ನೆ ಮಾತನಾಡುವಾಗ ಸ್ವಾಗತ ಮಾಡಿದ್ದರು. ಆದರೆ ಇದೀಗ ಷರತ್ತನ್ನ ಹಾಕುತ್ತಿದ್ದು, ದ್ವಂದ್ವ ಹೇಳಿಕೆಯನ್ನ ನೀಡುತ್ತಿದ್ದಾರೆ.
ಇಂದು ಮೈಸೂರಿನಲ್ಲಿ ಮಾತನಾಡಿದ ಯದುವೀರ್ ಒಡೆಯರ್ ಅವರು, 2023ರಲ್ಲಿ ಕನ್ನಡದ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆಯ ಸಂಬಂಧ ಸ್ಪಷ್ಟನೆ ನೀಡಬೇಕು. ಅದಕ್ಕಿನ್ನು ಅವರು ಸ್ಪಷ್ಟನೆ ನೀಡಿಲ್ಲ. ಆದರೆ ಬೆಟ್ಟದ ವಿಚಾರದಲ್ಲಿ ಅವರು ಹೇಳಿದ್ದಾರೆ ತಾಯಿಯ ಆರಾಧನೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಅಂತ. ಅದು ಸತ್ಯವೇ ಆಗಿದ್ದರೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ.
ಇದು ಧಾರ್ಮಿಕವಾದಂತ ಸ್ಥಳ. ಅದನ್ನ ಸಮರ್ಥನೆ ಮಾಡಿಕೊಂಡು ಬಂದರೆ ನಮಗೆ ಯಾವುದೇ ಸಮಸ್ಯೆ ಇಲ್ಲ. ಅಂದು ಯಾಕೆ ಆ ರೀತಿ ಹೇಳಿಕೆ ನೀಡಿದರು ಎಂಬುದನ್ನ ತಿಳಿಸಬೇಕು. ಆ ಹೇಳಿಕೆಯನ್ನ ಹಿಂದೆ ತೆಗೆದುಕೊಂಡರೆ ಒಳ್ಳೆಯದು. ಮೊದಲು ಸರ್ಕಾರದ ನಿರ್ಧಾರವನ್ನ ಸ್ವಾಗತ ಮಾಡಿದ್ದು ಯಾಕೆ ಅಂದ್ರೆ, ಸರ್ಕಾರ ಅವರನ್ನು ಆಯ್ಕೆ ಮಾಡಿದ ನಂತರ, ಸಹಜವಾಗಿಯೇ ನಾವೂ ಸ್ವಾಗತ ಮಾಡುವುದರಲ್ಲಿ ತಪ್ಪಿಲ್ಲ ಅಂತ ಹೇಳಿದ್ದು. ಆದರೆ 2023ರಲ್ಲಿ ಆ ಹೇಳಿಕೆಯಿಂದ ಹಿಂದೂ ಭಾವನೆಗಳಿಗೆ ಧಕ್ಕೆ ತಂದಂತೆ ಆಗಿದೆ. ಅದಕ್ಕೆ ಸ್ಪಷ್ಟನೆ ಕೊಡಬೇಕು. ಈ ಆಚರಣೆಯಲ್ಲಿ ಹೀಂದೂ ಭಾವನೆಗಳಿಗೆ ಯಾವುದೇ ರೀತಿಯ ಧಕ್ಕೆ ತರದಂತೆ ನಡೆಯಬೇಕಾಗುತ್ತದೆ ಎಂದಿದ್ದಾರೆ. ಸದ್ಯ ದಸರಾ ಉದ್ಘಾಟನೆಯ ವಿಚಾರದಲ್ಲಿ ಬಾನು ಮುಷ್ತಾಕ ಅವರ ಆಯ್ಕೆಯನ್ನ ಬಿಜೆಪಿ ನಾಯಕರು ಸೇರಿದಂತೆ ಹಕವರು ವಿರೋಧಿಸುತ್ತಿದ್ದಾರೆ.
