ರಂಗಕಲೆಯಿಂದ ಮಕ್ಕಳಲ್ಲಿರುವ ಸೃಜನಶೀಲತೆಯನ್ನು ಹೆಚ್ಚಿಸಬಹುದು :  ಎನ್.ರಾಘವೇಂದ್ರ

1 Min Read

 

ಚಿತ್ರದುರ್ಗ, (ಅ.17) :  ಪರಿಣಾಮಕಾರಿಯಾಗಿ ಬೋಧನೆ ಮಾಡಲು ಶಿಕ್ಷಕರಿಗೆ ರಂಗಕಲೆ ಸಹಕಾರಿಯಾಗಿದೆ. ಶಿಕ್ಷಕರು ರಂಗಕಲೆಯನ್ನು ಬಳಸಿಕೊಂಡು ಮಕ್ಕಳಲ್ಲಿರುವ ಸೃಜನಶೀಲತೆಯನ್ನು ಹೆಚ್ಚಿಸಬಹುದು ಎಂದು ಡಯಟ್‍ನ ಉಪನ್ಯಾಸಕ ಎನ್.ರಾಘವೇಂದ್ರ ತಿಳಿಸಿದರು.

ನಗರದ ಪಿಳ್ಳೇಕೇರನಹಳ್ಳಿಯ ಬಾಪೂಜಿ ಶಿಕ್ಷಣ ಮಹಾವಿದಲ್ಯಾಲಯದಲ್ಲಿ ಸೋಮವಾರ ಬಾದರದಿನ್ನಿ ಆಟ್ರ್ಸ ಅಕಾಡೆಮಿ, ಕನ್ನಡ ಮತ್ತು ಸಂಸೃತಿ ಇಲಾಖೆ, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯ ಆಶ್ರಯದಲ್ಲಿ ಆಯೋಜಿಸಿದ ಶಿಕ್ಷಣದಲ್ಲಿ ರಂಗಕಲೆ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.

ತರಗತಿಯಲ್ಲಿ ರಂಗಕಲೆಯನ್ನು ಬಳಸುವ ಶಿಕ್ಷಕ ಒಂದು ಪಾಠವನ್ನು ತುಂಬಾ ಪರಿಣಾಮಕಾರಿಯಾಗಿ ಮಕ್ಕಳಿಗೆ ತಲುಪಿಸಬಹುದು. ಪಾಠ ಮಾಡುವಾಗ ಧ್ವನಿಯ ಏರಿಳಿತ, ಹಾಡುಗಾರಿಕೆ, ತಮ್ಮ ಆಂಗಿಕ, ವಾಚಿಕ ಭಾವದಿಂದ ಮಕ್ಕಳಲ್ಲಿ ಕಲಿಕೆಯ ಆಸಕ್ತಿಯನ್ನು ಹೆಚ್ಚು ಮಾಡಿ ಅವರಿಂದ ಉತ್ತಮ ಫಲಿತಾಂಶ ಪಡೆಯಬಹುದು.

ಇದರಿಂದ ಮಕ್ಕಳ ಕಲ್ಪನಾ ಶಕ್ತಿ ಹೆಚ್ಚಿಸಲು ಸಹ ಸಹಕಾರಿಯಾಗುತ್ತದೆ. ತರಗತಿಯಲ್ಲಿ ಶಿಕ್ಷಕ ಎಷ್ಟು ಚಟುವಟಿಯಿಂದ ಇರುತ್ತಾನೆ ಅಷ್ಟು ಮಕ್ಕಳಿಗೆ ಹತ್ತಿರವಾಗುತ್ತಾನೆ. ಶಿಕ್ಷಕ ಹಾಗೂ ವಿದ್ಯಾರ್ಥಿಯ ನಂಟು ಹೆಚ್ಚು ಮಾಡಲು ಕೂಡ ರಂಗಕಲೆ ಸಹಕಾರಿಯಾಗಿದೆ. ಶಿಕ್ಷಕರು ಸಾಹಿತ್ಯದ ಓದುವಿಕೆಯಿಂದ ಶಿಕ್ಷಕರು ಉತ್ತಮ ಜ್ಞಾನ ಪಡೆದು ಪರಿಣಾಮಕಾರಿ ಬೋಧನೆ ಮಾಡಲು ಸಹಕಾರಿ ಎಂದರು.

ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಕೆ.ಎಂ.ವೀರೇಶ್ ಮಾತನಾಡಿ, ರಂಗಕಲೆ ಮಕ್ಕಳಲ್ಲಿ ಶಿಸು,್ತ, ಸಂಯಮ ಕಲಿಸುತ್ತದೆ. ರಂಗಕಲೆಯಿಂದ ಮೌಲ್ಯಯುಕ ಶಿಕ್ಷಣ ಪಡೆಯಲು ಸಾಧ್ಯವಿದೆ. ಶಾಲೆಗಳಲ್ಲಿ ರಂಗಕಲೆಗೆ ಹೆಚ್ಚಿನ ಮಹತ್ವ ನೀಡುವ ಕೆಲಸವಾಗಬೇಕು.  ರಂಗಕಲೆಯಿಂದ ಶಿಕ್ಷಣ ಕ್ಷೇತ್ರವನ್ನು ಅಭಿವೃದ್ದಿಪಡಿಸಲು ಸಾಧ್ಯವಿದೆ. ಜಗತ್ತಿನ ಉತ್ತಮ ಶಿಕ್ಷಕ ಒಬ್ಬ ರಂಗಕರ್ಮಿ  ಆಗಿರುತ್ತಾನೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನಿನಾಸಂ ಕಲಾವಿದ ಕೆ.ಪಿ.ಎಂ.ಗಣೇಶಯ್ಯ ಅವರು ನವರಸಗಳ ಬಗ್ಗೆ ಮಾಹಿತಿ ನೀಡಿ ಆಂಗಿಕ ಅಭಿನಯದ ಬಗ್ಗೆ ತಿಳಿಸಿಕೊಟ್ಟರು. ರಾಕ್‍ಫೋರ್ಟ ಶಾಲೆಯ ಮುಖ್ಯಶಿಕ್ಷಕ ಹಾಗೂ ಕಲಾವಿದ ಸಿ.ಪಿ.ಜ್ಞಾನದೇವ ಧ್ವನಿಯ ಏರಿಳಿತದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಜಯಲಕ್ಷ್ಮಿ, ಉಪ್ಯಾಸಕರಾದ, ಮಂಜುನಾಥ್, ಮಂಜುನಾಥ.ಎಸ್, ಮಾರುತೇಶ್.ಟಿ ಮತ್ತಿತರರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *