Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪಂಡಿತ್ ತಾರಾನಾಥ್ ಮತ್ತು ಕಸ್ತೂರಿ ರಂಗನ್‍ಗೆ ‘ಬಸವಶ್ರೀ : ಡಾ. ಶಿವಮೂರ್ತಿ ಮುರುಘಾ ಶರಣರು

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ, (ಅ.01) : ಶರಣ ಸಂಸ್ಕøತಿ ಉತ್ಸವ- 2021’ ರಲ್ಲಿ ಮೈಸೂರಿನ ಖ್ಯಾತ ಸರೋದ್ ವಾದಕ, ಡಾ.ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ಬಸವಶ್ರೀ ಪ್ರಶಸ್ತಿ – 2019 ಹಾಗೂ ಇಸ್ರೋ ಮಾಜಿ ಅಧ್ಯಕ್ಷ ಬಾಹ್ಯಾಕಾಶ ವಿಜ್ಞಾನಿ ಡಾ.ಕೆ.ಕಸ್ತೂರಿ ರಂಗನ್ ಅವರಿಗೆ ಬಸವಶ್ರೀ ಪ್ರಶಸ್ತಿ – 2020 ಪ್ರಧಾನ ಮಾಡಲಾಗುತ್ತದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

ಪ್ರಶಸ್ತಿ ಪುರಸ್ಕೃತರ ವಿವರ;
ಡಾ. ಪಂಡಿತ್ ರಾಜೀವ್ ತಾರಾನಾಥ್ :
ಸಾಂಪ್ರದಾಯಿಕ ಹಿಂದೂಸ್ತಾನಿ ಸಂಗೀತಕ್ಕೆ ವಿಶಿಷ್ಟವಾದ ಮಾಧುರ್ಯ ಮತ್ತು ಲಯವನ್ನು ನೀಡಿ ಭಾವನಾಲೋಕದ ತೀವ್ರತೆಯನ್ನು ತಮ್ಮ ವಾದನದಲ್ಲಿ ಸಮ್ಮಿಶ್ರಗೊಳಿಸುವ ಸಂಗೀತಲೋಕದ ಧ್ರುವತಾರೆ ಪಂಡಿತ್ ರಾಜೀವ್ ತಾರಾನಾಥ್‍ರವರು. 1932ರ ಅಕ್ಟೋಬರ್ 17ರಂದು ಜನಿಸಿದ ಶ್ರೀಯುತರಿಗೆ ತಂದೆ ಪಂಡಿತ್ ತಾರಾನಾಥ್‍ರೇ ಮೊದಲ ಸಂಗೀತ ಗುರು. ಸಂಗೀತದಲ್ಲಿ ಅಪಾರ ಒಲವು ಹೊಂದಿದ್ದ ತಾರಾನಾಥ್ ಮುಂದೆ ತಮ್ಮ ಪ್ರಾಧ್ಯಾಪಕ ಹುದ್ದೆಯನ್ನು ತ್ಯಜಿಸಿ ಹಿಂದೂಸ್ತಾನಿ ಸಂಗೀತದ ಉಸ್ತಾದ್ ಅಲಿಅಕ್ಬರ್‍ಖಾನ್‍ರಲ್ಲಿ ತರಬೇತಿ ಪಡೆದರು. ಪಂಡಿತ ರವಿಶಂಕರ್, ಅನ್ನಪೂರ್ಣಾದೇವಿಯರಂತಹ ಸಂಗೀತ ದಿಗ್ಗಜರ ಮಾರ್ಗದರ್ಶನವೂ ಲಭಿಸಿ ಹಿಂದೂಸ್ತಾನಿ ಸಂಗೀತಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಸಿಗುವಲ್ಲಿ ಇವರ ಕೊಡುಗೆಯೂ ಅಪಾರವಾಯಿತು.

ಸಂಸ್ಕಾರ, ಪಲ್ಲವಿ, ಕಾಂಚನಸೀತಾದಂತಹ ಅಂತಾರಾಷ್ಟ್ರೀಯ ಖ್ಯಾತಿಯ ಚಲನಚಿತ್ರಗಳಿಗೆ ನೀಡಿದ ಸಂಗೀತ ಹೊಸ ಅಲೆಯನ್ನು ಸೃಷ್ಟಿಸಿತು. ಭಾರತ ಮಾತ್ರವಲ್ಲದೆ, ಆಸ್ಟ್ರೇಲಿಯಾ, ಯೂರೋಪ್, ಅಮೆರಿಕ, ಕೆನಡಾ ಮೊದಲಾದ ದೇಶಗಳಲ್ಲಿ ಇವರು ನೀಡಿದ ಕಾರ್ಯಕ್ರಮಗಳು ಶ್ರೀಯುತರಿಗೆ ಮಾತ್ರವಲ್ಲದೆ ಹಿಂದೂಸ್ತಾನಿ ಸಂಗೀತಕ್ಕೂ ವಿಶ್ವಮನ್ನಣೆ ತಂದುಕೊಟ್ಟವು. ಸಂಗೀತದ ವಿವಿಧ ರಾಗಗಳ ಕುರಿತ 21ಕ್ಕೂ ಹೆಚ್ಚು ಧ್ವನಿಸುರಳಿಗಳು, `ಘರಾನ’ ಕುರಿತ ವಿದ್ವತ್ಪೂರ್ಣ ಕೃತಿ ರಚಿಸಿರುವ ರಾಜೀವ್ ತಾರಾನಾಥ್‍ರ ಜೀವನ ಸಾಧನೆಯನ್ನು ಕುರಿತು `ಸರೋದ್ ಮಾಂತ್ರಿಕ’ ಎಂಬ ಕನ್ನಡ ಕೃತಿಯೂ ಪ್ರಕಟವಾಗಿದೆ.

ಸಂಗೀತ ಕ್ಷೇತ್ರದಲ್ಲಿಯ ಇವರ ಸಾಧನೆಗೆ ಟಿ.ಚೌಡಯ್ಯ ಪ್ರಶಸ್ತಿ, ನಾಟಕ ಮತ್ತು ನೃತ್ಯ ಅಕಾಡೆಮಿ ಪ್ರಶಸ್ತಿ, ರಾಷ್ಟ್ರೀಯ ಸಮ್ಮಾನ, ಕೆಂಪೇಗೌಡ ಪ್ರಶಸ್ತಿ, ಸಂಗೀತ ಕಲಾರತ್ನ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿ.ವಿ.ಯ ನಾಡೋಜ ಪ್ರಶಸ್ತಿಗಳ ಜೊತೆಗೆ ಭಾರತ ಸರ್ಕಾರವು 2019ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ತಮ್ಮ 90ನೇ ಇಳಿವಯಸ್ಸಿನಲ್ಲಿಯೂ ಮೈಸೂರಿನಲ್ಲಿ ಪಂಡಿತ್ ತಾರಾನಾಥ್ ಫೌಂಡೇಶನ್ ಮೂಲಕ ನಾಡಿನ ಯುವಸಂಗೀತಗಾರರಿಗೆ ಮಾರ್ಗದರ್ಶನ ನೀಡುತ್ತಿರುವ ಶ್ರೀಯುತರ ಸಂಗೀತ ಕ್ಷೇತ್ರದಲ್ಲಿಯ ಅನುಪಮವಾದ ಸಾಧನೆಯನ್ನು ಗುರುತಿಸಿರುವ ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠವು 2019ನೇ ಸಾಲಿನ ಪ್ರತಿಷ್ಠಿತ `ಬಸವಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.

ಡಾ. ಕೆ. ಕಸ್ತೂರಿ ರಂಗನ್ ; ಬಾಹ್ಯಾಕಾಶ ಸಂಶೋಧನೆಯಲ್ಲಿ ವಿಶ್ವದ ಬೆರಳೆಣಿಕೆಯ ಕೆಲವೇ ರಾಷ್ಟ್ರಗಳಲ್ಲಿ ಭಾರತವು ಮುಂಚೂಣಿಯಲ್ಲಿ ನಿಲ್ಲುವ ರಾಷ್ಟ್ರವಾಗಲು ಅಪಾರ ಪರಿಶ್ರಮ ವಹಿಸಿದ ಡಾ. ಕೆ. ಕಸ್ತೂರಿ ರಂಗನ್‍ರವರು ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳಲ್ಲಿ ಪ್ರಮುಖರು. 1940ರ ಅಕ್ಟೋಬರ್ 24ರಂದು ಕೇರಳದ ಎರ್ನಾಕುಲಂನಲ್ಲಿ ಜನಿಸಿದ ಕೃಷ್ಣಸ್ವಾಮಿ ಕಸ್ತೂರಿ ರಂಗನ್‍ರವರದು ಬಾಹ್ಯಾಕಾಶ ಸಂಶೋಧನೆಯಲ್ಲಿ ವಿಶಿಷ್ಟ ಹೆಸರು. ಬೆಂಗಳೂರಿನ ಇಸ್ರೋ ಸಂಸ್ಥೆಯ ನಿರ್ದೇಶಕರಾಗಿ, ಅಧ್ಯಕ್ಷರಾಗಿ, ಇವರ ಉಸ್ತುವಾರಿಯಲ್ಲಿ ಅಭಿವೃದ್ಧಿ ಹೊಂದಿದ ಭಾರತೀಯ ರಾಷ್ಟ್ರೀಯ ಇನ್ಸಾಟ್-2, ದೂರಸಂವೇದಿ ಐಆರ್‍ಎಸ್-1ಎ, 1ಬಿ, ಭೂವೀಕ್ಷಣೆಯ ಭಾಸ್ಕರ 1 ಮತ್ತು 2 ಹಾಗೂ ಸಾಗರ ವೀಕ್ಷಣೆಯ ಉಪಗ್ರಹಗಳ ಯಶಸ್ವಿ ಉಡಾವಣೆಯು ಖಗೋಳ ಗ್ರಹಗಳ ಸಂಶೋಧನೆಯಲ್ಲಿ ಇವರ ವೈಜ್ಞಾನಿಕ ಪರಿಶ್ರಮದಿಂದಾಗಿ ವಿಶ್ವಮಟ್ಟದಲ್ಲಿ ಭಾರತಕ್ಕೆ ಅಪೂರ್ವವಾದ ಸ್ಥಾನವನ್ನು ತಂದುಕೊಟ್ಟಿತು.

ಖಗೋಳಶಾಸ್ತ್ರ, ಬಾಹ್ಯಾಕಾಶ ವಿಜ್ಞಾನ ವಿಷಯಗಳ ಕುರಿತಂತೆ ದೇಶವಿದೇಶಗಳಲ್ಲಿ 240ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿರುವ ಶ್ರೀಯುತರು ವಿಶ್ವದ ವಿವಿಧ ದೇಶಗಳ ವಿಜ್ಞಾನ ಅಕಾಡೆಮಿ ಮತ್ತು ಶೈಕ್ಷಣಿಕ ಸಂಸ್ಥೆಗಳ ಸದಸ್ಯರಾಗಿ, ರಾಜ್ಯಸಭಾ ಸದಸ್ಯರಾಗಿ, ಯೋಜನಾ ಆಯೋಗದ ಸದಸ್ಯರಾಗಿ, ರಾಷ್ಟ್ರೀಯ ಶಿಕ್ಷಣ ನೀತಿ-2020ರ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಶ್ರೀಯುತರ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದ ಪರಿಣತಿಗೆ ವಿಕ್ರಂ ಸಾರಾಬಾಯಿ, ಶಾಂತಿಸ್ವರೂಪ ಭಟ್ನಾಗರ್, ಎಂ.ಎನ್. ಸಹಾ ಪ್ರಶಸ್ತಿಗಳು ಮೊದಲ್ಗೊಂಡು ರಾಷ್ಟ್ರೀಯ-ಅಂತಾರಾಷ್ಟ್ರೀಯ ಪ್ರಶಸ್ತಿಗಳ ಜೊತೆಗೆ ದೇಶದ 16ಕ್ಕೂ ಹೆಚ್ಚು ವಿ.ವಿ.ಗಳು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿವೆ. ಇವೆಲ್ಲಕ್ಕೂ ಕಳಸವಿಟ್ಟಂತೆ ಭಾರತಸರ್ಕಾರದ ಪದ್ಮಶ್ರೀ (1982), ಪದ್ಮಭೂಷಣ (1992) ಹಾಗು ಪದ್ಮವಿಭೂಷಣ (2000) ಪ್ರಶಸ್ತಿಗಳ ಗೌರವಕ್ಕೆ ಭಾಜನರಾಗಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಸಂಜೆ 5 ರವೇಳೆಗೆ ಶೇಕಡಾವಾರು ಮತದಾನ ಎಷ್ಟು ? 

ಚಿತ್ರದುರ್ಗ.ಏ.26: ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಏ.26 ರಂದು  ಜರುಗಿದ ಮತದಾನದಲ್ಲಿ ಸಂಜೆ 5 ಗಂಟೆ ವೇಳೆಗೆ  ಶೇ.67 ರಷ್ಟು ಮತದಾನ ದಾಖಲಾಗಿದೆ. ಸಂಜೆ 6 ಗಂಟೆಯವರೆಗೂ ಮತ ಚಲಾಯಿಸಲು ಅವಕಾಶವಿದ್ದು, ಮತದಾರರು ಉತ್ಸಾಹ ತೋರಿ

ಮತದಾನಕ್ಕೂ ಮುನ್ನ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರವರು ಮತದಾನಕ್ಕೂ ಮುನ್ನ

ನೇಹಾ ಕೊಲೆ ಪ್ರಕರಣ : ಯಾರನ್ನೂ ರಕ್ಷಿಸುವ ಉದ್ದೇಶವಿಲ್ಲದೆ ಇದ್ದರೆ ಸಿಬಿಐಗೆ ವಹಿಸಲಿ ಎಂದ ಬಸವರಾಜ್ ಬೊಮ್ಮಾಯಿ

ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಾಕಷಗಟು ಹೋರಾಟಗಳು ನಡೆದಿವೆ. ನೇಹಾ ಕೊಲೆ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು, ನೇಹಾ ಸಾವಿಗೆ ನ್ಯಾಯ ಸಿಗಬೇಕು ಎಂಬ ಒತ್ತಾಯಗಳು ಕೇಳಿವೆ. ಇದೀಗ ಮಾಜಿ ಸಿಎಂ

error: Content is protected !!