ಸುದ್ದಿಒನ್, ಚಿತ್ರದುರ್ಗ : ಅಪಘಾತವಾದ ರಸ್ತೆಯಲ್ಲಿ ಅಪಘಾತಕ್ಕೆ ಒಳಗಾಗಿರುವ ವ್ಯಕ್ತಿಯ ಪರಿಸ್ಥಿತಿ ಉಸಿರಾಟವ ಕ್ರಿಯೆ, ರಕ್ತ ಸೋರುವಿಕೆ ವಿವಿಧ ದೇಹದ ಕ್ರಿಯಾಶೀಲತೆ ಮುಖ್ಯವಾಗಿ ತಲೆ, ಬೆನ್ನು ಮೂಳೆ, ಬೆನ್ನು ಉರಿ ರಕ್ತ ಸ್ತ್ರಾವ ಈ ಸಮಯದಲ್ಲಿ ಪ್ರಥಮ ಚಿಕಿತ್ಸೆಯನ್ನು ಹೇಗೆ ಕೈಕೊಳ್ಳಬೇಕು ಎಂಬುವುದರ ಬಗ್ಗೆ ಕಿರುಚಿತ್ರ ಮತ್ತು ಪ್ರಥಮ ಚಿಕಿತ್ಸೆಯ ನಿರ್ವಹಣೆ ಬಗ್ಗೆ ಮುಖ್ಯಸ್ಥರು ಮುಖ ಹಾಗೂ ದವಡೆ ಚಿಕಿತ್ಸಕ ವಿಭಾಗ ಅವರು ಮಾತನಾಡಿ ಕಾರ್ಯಕ್ರಮದ ಮುಖ್ಯ ಉದ್ದೇಶ ಹಾಗೂ ಒಬ್ಬ ವ್ಯಕ್ತಿಯ ಪ್ರಾಣ ಉಳಿಸುವಲ್ಲಿ ಕೈಗೊಳ್ಳಬೇಕಾದ ನಿರ್ವಹಣೆಯನ್ನು ಡಾ. ನಾಗರಾಜಪ್ಪ ತಿಳಿಸಿದರು.

ನಗರದ ಎಸ್ ಜೆ ಎಂ ಫಾರ್ಮಸಿ ಕಾಲೇಜಿನಲ್ಲಿ ಅಸೋಸಿಯೇಷನ್ ಆಫ್ ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜನ್ಸ್ ಆಫ್ ಇಂಡಿಯಾ( ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರ ಅಸೋಸಿಯೇಷನ್) ಎಸ್ ಜೆ ಎಂ ಡೆಂಟಲ್ ಕಾಲೇಜು,ಎಸ್.ಜೆ. ಎಂ. ಫಾರ್ಮಸಿ ಕಾಲೇಜು ಚಿತ್ರದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಡಾ ಗೌರಮ್ಮ ಪ್ರಾಂಶುಪಾಲರು ಡೆಂಟಲ್ ಕಾಲೇಜ್. ಡಾ ನಾಗರಾಜಪ್ಪ. ಡಾ ಟಿ ಎಸ್ ನಾಗರಾಜ್ ಪ್ರಾಂಶುಪಾಲರು ಫಾರ್ಮಸಿ ಕಾಲೇಜು ಡಾ ಮಧುಮತಿ, ಡಾ ತನ್ವೀರ್, ಡಾ ನರಸಿಂಹಮೂರ್ತಿ ಡಾ ಮಾರುತಿ ಎಕಬೋಟೆ ಉದ್ಘಾಟನೆಯನ್ನು ನೆರವೇರಿಸಿದರು.
ಕಾರ್ಯಕ್ರಮದ ಸ್ವಾಗತವನ್ನು ಡಾ ಮಧುಮತಿ ವಂದನಾರ್ಪಣೆಯನ್ನು ಡಾ. ತನ್ವೀರ್ ಕಾರ್ಯಕ್ರಮದ ಪ್ರಾರ್ಥನೆಯನ್ನು ರಶ್ಮಿ ಹಾಗೂ ಹರ್ಷಿತ ಫಾರ್ಮ ಡಿ ವಿದ್ಯಾರ್ಥಿಗಳು ನೆರವೇರಿಸಿದರು.
ಈ ಕಾರ್ಯಕ್ರಮದ ನಿರ್ವಹಣೆಯನ್ನು ಯುವತೇಜ ಹಾಗೂ ರಾಧಾ ಹಾಗೂ ಡಾ ಹರಿಕೃಷ್ಣ ಟೆಕ್ನಿಕಲ್ ಕೋ ಆರ್ಡಿನೇಟರ್ ಕಾರ್ಯಕ್ರಮವನ್ನು ಡೆಂಟಲ್ ಕಾಲೇಜಿನ ಎಂಟ್ರನ್ಸ್ ವಿದ್ಯಾರ್ಥಿಗಳು ನಿರ್ವಹಣೆಯನ್ನು ಮಾಡಿದ್ದರು.
ಈ ಕಾರ್ಯಕ್ರಮದ ಸದುಪಯೋಗವನ್ನು ಫಾರ್ಮಸಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಪಡೆದರು.

