ಬೆಂಗಳೂರು: ಸ್ಪಂದನಾ ವಿಜಯ್ ರಾಘವೇಂದ್ರ ಇನ್ನು 37 ವರ್ಷ. ಆದ್ರೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅನಾರೋಗ್ಯ ಕಾಡಿರಲಿಲ್ಲ. ಇನ್ಯಾವುದೇ ಕಾಯಿಲೆ ಅವರ ಬಳಿ ಸುಳಿದಿರಲಿಲ್ಲ. ಆದರೂ ಇಂದು ನಿಧನರಾಗಿದ್ದಾರೆ. ಇಷ್ಟು ಚಿಕ್ಕ ವಯಸ್ಸಿಗೆ ಹೃದಯಾಘಾತವಾಗುವುದಕ್ಕೆ ಕಾರಣ ಏನು ಎಂಬುದಕ್ಕೆ ನಾರಾಯಣ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ ಮಾಹಿತಿ ನೀಡಿದ್ದಾರೆ.
ಶೇ. 90ರಷ್ಟು ಕಾರ್ಡಿಯಾಕ್ ಅರೆಸ್ಟ್ ಹಾರ್ಟ್ ಅಟ್ಯಾಕ್ನಿಂದ ಆಗುತ್ತೆ. ಕೇವಲ 45 ವಯಸ್ಸಿನವರಲ್ಲಿ ಶೇ.35 ರಷ್ಟು ಕಾರ್ಡಿಯಾಕ್ ಅರೆಸ್ಟ್ ಆಗುತ್ತೆ. ಯುವ ರೋಗಿಗಳ ಪೈಕಿ ಶೇ.8ರಷ್ಟು ಮಹಿಳೆಯರೇ ಹಾರ್ಟ್ ಅಟ್ಯಾಕ್ಗೆ ಒಳಗಾಗಿದ್ದಾರೆ.
ಯುವಕರು ಹಾಗೂ ಮಧ್ಯ ವಯಸ್ಕರಲ್ಲಿ ಹೆಚ್ಚಾಗಿ ಹಾರ್ಟ್ ಅಟ್ಯಾಕ್ ಆಗುತ್ತಿದೆ. ಕಳೆದ 10 ವರ್ಷಗಳಲ್ಲಿ ಹೃದಯಾಘಾತದ ಪ್ರಮಾಣ ಶೇ.22ರಷ್ಟು ಹೆಚ್ಚಾಗಿದೆ. ಕೆಲಸದ ಒತ್ತಡ, ಮಕ್ಕಳ ಪೋಷಣೆ, ಸಂಸಾರದ ಒತ್ತಡಗಳಿಂದ ಶುಗರ್ ಕಾಯಿಲೆ ಬರುತ್ತಿದೆ ಎಂದು ತಿಳಿಸಿದ್ದಾರೆ. ಒತ್ತಡದ ಜೀವನದಿಂದ ಸ್ವಲ್ಪ ವಿಶ್ರಾಂತಿಯನ್ನು ಪಡೆಯುವಂತೆ ಸೂಚಿಸಿದ್ದಾರೆ.